ಮೈಸೂರು: ಲಾಕ್​​​ಡೌನ್​​ ನಿಯಮ ಗಾಳಿಗೆ ತೂರಿ ಜನರಿಗೆ ಆಹಾರ ಪದಾರ್ಥ ವಿತರಿಸಿದ ಮಾಜಿ ಕಾಂಗ್ರೆಸ್​ ಶಾಸಕ

ಲಾಕ್​ಡೌನ್​​​​ ನಿಯಮಗಳನ್ನು ಗಾಳಿಗೆ ತೂರಿದ ಜನರಿಗೆ ಜನ ಪ್ರತಿನಿಧಿಯಾಗಿ ಒಂದೇ ಒಂದು ಮಾತು ಹೇಳಲಿಲ್ಲ ಎಂಬುದು ಆತಂಕಕಾರಿ. ಇವರೇ ಪಡಿತರ ಪದಾರ್ಥ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಕನಿಷ್ಠ ಮುಂಜಾಗೃತ ಕ್ರಮ ತೆಗೆದುಕೊಳ್ಳದಿರುವುದು ಬೇಜವಾಬ್ದಾರಿತನ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:April 30, 2020, 4:20 PM IST
ಮೈಸೂರು: ಲಾಕ್​​​ಡೌನ್​​ ನಿಯಮ ಗಾಳಿಗೆ ತೂರಿ ಜನರಿಗೆ ಆಹಾರ ಪದಾರ್ಥ ವಿತರಿಸಿದ ಮಾಜಿ ಕಾಂಗ್ರೆಸ್​ ಶಾಸಕ
ಮಾಜಿ ಶಾಸಕ ಕೆ. ವೆಂಕಟೇಶ್​
  • Share this:
ಮೈಸೂರು(ಏ.30): ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ಕೊರೋನಾ ವೈರಸ್​​ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್​​​ಡೌನ್ ಜಾರಿಯಲ್ಲಿದೆ. ಆದರೀಗ ಅದೇ ಲಾಕ್​​ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಡಿತರ ಪದಾರ್ಥ ವಿತರಣೆ ಮಾಡಿರುವ ಗಂಭೀರ ಆರೋಪ ಪಿರಿಯಾಪಟ್ಟಣದ ಮಾಜಿ ಕಾಂಗ್ರೆಸ್​​ ಶಾಸಕ ಕೆ.ವೆಂಕಟೇಶ್ ಮೇಲೆ ಕೇಳಿ ಬಂದಿದೆ. 

ಕಾಂಗ್ರೆಸ್​ನ ಮಾಜಿ ಶಾಸಕ ಕೆ. ವೆಂಕಟೇಶ್​​ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಪಡಿತರ ಪದಾರ್ಥ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಆಹಾರ ಸಾಮಗ್ರಿ ಪದಾರ್ಥಗಳನ್ನು ತೆಗೆದುಕೊಳ್ಳಲು ಜಮಾಯಿಸಿದ್ದರು. ಸರ್ಕಾರದ ಆದೇಶದಂತೆ ಯಾರು ಸಾಮಾಜಿಕ ಅಂತರ ಪಾಲಿಸದೇ ಪದಾರ್ಥಗಳನ್ನು ಸ್ವೀಕರಿಲು ಮುಗಿಬಿದ್ದಿದ್ದರು.

ಇನ್ನು, ಮಾಸ್ಕ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ದಿನಸಿ ಸ್ವೀಕರಿಸಲು ಬಂದ ಜನರಿಗೆ ಮಾಜಿ ಶಾಸಕ ಒಂದೇ ಒಂದು ಮಾತು ಹೇಳಿಲ್ಲ. ಯಾವುದೇ ಮುಂಜಾಗೃತ ಕ್ರಮ ತೆಗೆದುಕೊಳ್ಳದೇ ಜನ ಒಬ್ಬರ ಮೇಲೋಬ್ಬರು ಮುಗಿಬಿದ್ದರೂ ವೆಂಕಟೇಶ್​​ ಮಾತ್ರ ತಮ್ಮ ಆಹಾರ ಕಿಟ್​​​ ವಿತರಣೆ ಮಾಡುವುದು ಮಾತ್ರ ನಿಲ್ಲಿಸಲಿಲ್ಲ.

ಇದನ್ನೂ ಓದಿ: ‘ಕ್ವಾರಂಟೈನ್​​ ಆಗಿದ್ದರೂ ಡಾ. ಸುಧಾಕರ್​ ಮಂಡ್ಯಕ್ಕೆ ಬಂದು ಸಭೆ ನಡೆಸಿದ್ದು ಬೇಜವಾಬ್ದಾರಿತನ‘ - ಮಾಜಿ ಸಚಿವ ಸಿ.ಎಸ್​​ ಪುಟ್ಟರಾಜು

ಲಾಕ್​ಡೌನ್​​​​ ನಿಯಮಗಳನ್ನು ಗಾಳಿಗೆ ತೂರಿದ ಜನರಿಗೆ ಜನ ಪ್ರತಿನಿಧಿಯಾಗಿ ಒಂದೇ ಒಂದು ಮಾತು ಹೇಳಲಿಲ್ಲ ಎಂಬುದು ಆತಂಕಕಾರಿ. ಇವರೇ ಪಡಿತರ ಪದಾರ್ಥ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಕನಿಷ್ಠ ಮುಂಜಾಗೃತ ಕ್ರಮ ತೆಗೆದುಕೊಳ್ಳದಿರುವುದು ಬೇಜವಾಬ್ದಾರಿತನ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಸಾಮಾನ್ಯ ಜನಕ್ಕೊಂದು ಕಾನೂನು, ರಾಜಕಾರಣಿಗಳಿಗೆ ಒಂದು ಕಾನೂನು ಏಕೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಜನಪ್ರತಿನಿಧಿಗಳ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
First published: April 30, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading