HOME » NEWS » Coronavirus-latest-news » FORMER CM SIDDARAMAIAH SAYS IF CORONA AFFECT TO SSLC STUDENTS THEN STATE GOVERNMENT ONLY RESPONSIBLE LG

SSLC ವಿದ್ಯಾರ್ಥಿಗಳಿಗೆ ಕೊರೋನಾ ತಗುಲಿದರೆ ಅದಕ್ಕೆ ಸರ್ಕಾರವೇ ಹೊಣೆ; ಲೆಕ್ಕವಾಗಿ ಈಗ ಲಾಕ್​ಡೌನ್ ಮಾಡಬೇಕಿತ್ತು; ಸಿದ್ದರಾಮಯ್ಯ

ಇದೇ ವೇಳೆ, ರಾಜ್ಯ ಸರ್ಕಾರ ಬೆಂಗಳೂರು ಶಾಸಕರ ಬದಲಿಗೆ ಮೊದಲು ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ಅಲ್ಲಿ ಅವರ ತಪ್ಪು ಏನು ಎಂಬುದನ್ನು ಹೇಳುತ್ತೇವೆ. ಜೊತೆಗೆ ನಮ್ಮ ಸಲಹೆ ನೀಡುತ್ತೇವೆ ಎಂದ ಅವರು, ಒಟ್ಟಾರೆ ಕೊರೋನಾ ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಪುನರುಚ್ಛರಿಸಿದರು.

news18-kannada
Updated:June 26, 2020, 3:00 PM IST
SSLC ವಿದ್ಯಾರ್ಥಿಗಳಿಗೆ ಕೊರೋನಾ ತಗುಲಿದರೆ ಅದಕ್ಕೆ ಸರ್ಕಾರವೇ ಹೊಣೆ; ಲೆಕ್ಕವಾಗಿ ಈಗ ಲಾಕ್​ಡೌನ್ ಮಾಡಬೇಕಿತ್ತು; ಸಿದ್ದರಾಮಯ್ಯ
ಸಿದ್ದರಾಮಯ್ಯ.
  • Share this:
ಬೆಂಗಳೂರು(ಜೂ.26): ರಾಜ್ಯದಲ್ಲಿ ಈಗ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಈಗ ಲಾಕ್​ಡೌನ್​ ಮಾಡಬೇಕಾಗಿತ್ತು ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್​ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಪ್ರಕರಣಗಳು ಹೆಚ್ಚಾಗಿಲ್ಲದ ಸಂದರ್ಭದಲ್ಲಿ ಅಕಾಲಿಕವಾಗಿ ಲಾಕ್​ಡೌನ್​ ಮಾಡಿದ್ದರು. ಅದರಿಂದ ಆರೋಗ್ಯ ಹಾಳಾಯಿತು, ಆರ್ಥಿಕ ಪರಿಸ್ಥಿತಿ ಸಹ ಹದಗೆಟ್ಟಿತು. ಯಾವುದೇ ಪೂರ್ವ ತಯಾರಿ ಮತ್ತು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಲಾಕ್​ಡೌನ್​ ಮಾಡಿದ್ದರು ಎಂದು ಆರೋಪಿಸಿದರು.

ಹಾಗೆ ನೋಡಿದರೆ ವಾಸ್ತವಿಕವಾಗಿ ಈಗ ಲಾಕ್​ಡೌನ್ ಮಾಡಬೇಕಿತ್ತು. ಆಗ ಏಕಾಏಕಿ ಲಾಕ್ ಡೌನ್ ಮಾಡಿ ಆರ್ಥಿಕತೆ ಹಾಳು ಮಾಡಿದರು. ಈಗ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕೊರೋನಾ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.  ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಇಬ್ಬರು ಕೊರೋನಾ ಸೋಂಕು ತಡೆಯಲು ವಿಫಲವಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ರಾಜಕೀಯವೇ ಬೇರೆ, ಕುಟುಂಬದ ವಿಷಯವೇ ಬೇರೆ: ಸಚಿವ ರಮೇಶ್​ ಜಾರಕಿಹೊಳಿ

ಮುಂದುವರೆದ ಅವರು, ತಜ್ಞರು ಹೇಳುವ ಪ್ರಕಾರ ಆಗಸ್ಟ್ ವರೆಗೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾಗಲಿವೆ. ಹೀಗಾಗಿ ಈಗ ಲಾಕ್‌ಡೌನ್ ಮಾಡಬೇಕಾಗಿದೆ.‌ ಆದರೆ ಈಗ ಲಾಕ್‌ಡೌನ್ ಮಾಡಿದರೆ ಆರ್ಥಿಕತೆ ಹಾಳಾಗುತ್ತೆ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ, ರಾಜ್ಯ ಸರ್ಕಾರ ಬೆಂಗಳೂರು ಶಾಸಕರ ಬದಲಿಗೆ ಮೊದಲು ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ಅಲ್ಲಿ ಅವರ ತಪ್ಪು ಏನು ಎಂಬುದನ್ನು ಹೇಳುತ್ತೇವೆ. ಜೊತೆಗೆ ನಮ್ಮ ಸಲಹೆ ನೀಡುತ್ತೇವೆ ಎಂದ ಅವರು, ಒಟ್ಟಾರೆ ಕೊರೋನಾ ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಪುನರುಚ್ಛರಿಸಿದರು.
ಎಸ್​ಎಸ್​ಎಲ್​ಸಿ ಪರೀಕ್ಷೆ ಕುರಿತಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿ, ಆದರೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊರೋನಾ ತಗುಲಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.
First published: June 26, 2020, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories