ಸರ್ಕಾರ ಕೊಡುವ ಕಿಟ್​​ಗೆ ಬಿಜೆಪಿಯವರು ತಮ್ಮ ಹೆಸರು ಹಾಕಿಕೊಂಡು ಹಂಚುತ್ತಿದ್ದಾರೆ; ಸಿದ್ದರಾಮಯ್ಯ ಆರೋಪ

ಅವತ್ತೇ ರಾಹುಲ್ ಗಾಂಧಿ ಕೊರೋನಾ ಬಗ್ಗೆ ಹೇಳಿ ಎಚ್ಚರಿಕೆ ಕೊಟ್ಟಿದ್ದರು. ಆದರೆ ಮೋದಿ ನಮ್ಮ ಮಾತನ್ನು ಕೇಳಲ್ಲ, ಆರ್​ಎಸ್​ಎಸ್​ನವರ ಮಾತನ್ನು ಕೇಳುತ್ತಾರೆ ಎಂದು ಹರಿಹಾಯ್ದರು. ಯಾವುದೇ ಪೂರ್ವಸಿದ್ಧತೆಗಳಿಲ್ಲದೇ ದೇಶದಲ್ಲಿ ಲಾಕ್​ಡೌನ್​ ಮಾಡಿದ್ದಾರೆ. ಎಲ್ಲದಕ್ಕೂ ನೇರ ಕಾರಣ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಎಂದು ಅರೋಪಿಸಿದರು.

news18-kannada
Updated:May 25, 2020, 3:28 PM IST
ಸರ್ಕಾರ ಕೊಡುವ ಕಿಟ್​​ಗೆ ಬಿಜೆಪಿಯವರು ತಮ್ಮ ಹೆಸರು ಹಾಕಿಕೊಂಡು ಹಂಚುತ್ತಿದ್ದಾರೆ; ಸಿದ್ದರಾಮಯ್ಯ ಆರೋಪ
ಸಿದ್ದರಾಮಯ್ಯ.
  • Share this:
ಬೆಂಗಳೂರು(ಮೇ 25): ಫೆಬ್ರವರಿ ತಿಂಗಳಿನಲ್ಲೇ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಿದ್ದರೆ ನಮ್ಮ ದೇಶಕ್ಕೆ ಕೊರೋನಾ ಬರುತ್ತಿರಲಿಲ್ಲ. ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಒಬ್ಬರಿಗೊಬ್ಬರು ಹೊಗಳಿಕೊಳ್ಳಲು ಕಾರ್ಯಕ್ರಮ ಮಾಡಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವತ್ತೇ ರಾಹುಲ್ ಗಾಂಧಿ ಕೊರೋನಾ ಬಗ್ಗೆ ಹೇಳಿ ಎಚ್ಚರಿಕೆ ಕೊಟ್ಟಿದ್ದರು. ಆದರೆ ಮೋದಿ ನಮ್ಮ ಮಾತನ್ನು ಕೇಳಲ್ಲ, ಆರ್​ಎಸ್​ಎಸ್​ನವರ ಮಾತನ್ನು ಕೇಳುತ್ತಾರೆ ಎಂದು ಹರಿಹಾಯ್ದರು. ಯಾವುದೇ ಪೂರ್ವಸಿದ್ಧತೆಗಳಿಲ್ಲದೇ ದೇಶದಲ್ಲಿ ಲಾಕ್​ಡೌನ್​ ಮಾಡಿದ್ದಾರೆ. ಎಲ್ಲದಕ್ಕೂ ನೇರ ಕಾರಣ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಎಂದು ಅರೋಪಿಸಿದರು.

ಸದ್ಯದ ಪರಿಸ್ಥಿತಿಯಿಂದಾಗಿ ವಲಸೆ ಕಾರ್ಮಿಕರು ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಕೇವಲ 10% ಸಹಾಯ ಮಾಡಿದೆ. ಉಳಿದ 90% ದಾನಿಗಳು, ಶಾಸಕರು ಹಂಚಿಕೆ ಮಾಡಿದ್ದಾರೆ. ಸರ್ಕಾರ ಕೊಡುವ ಕಿಟ್​​ಗೆ ಬಿಜೆಪಿಯವರು ಅವರ ಹೆಸರು ಹಾಕಿಕೊಂಡು ಕೊಡ್ತಿದ್ದಾರೆ.  4 ಲಕ್ಷ ಕಿಟ್ ಕಾರ್ಮಿಕ ಇಲಾಖೆ ಕೊಟ್ಟಿದೆ.  ಆದರೆ ಅದಕ್ಕೆಲ್ಲ ಬಿಜೆಪಿಯವರು ತಮ್ಮ ಲೇಬಲ್ ಹಾಕಿಕೊಂಡು ಹಂಚುತ್ತಿದ್ದಾರೆ. ಅರವಿಂದ ಲಿಂಬಾವಳಿ, ಬಸವರಾಜು, ಅಶ್ವತ್‌ನಾರಾಯಣ್, ಬಿಎಸ್‌ವೈ ಫೋಟೋಗಳನ್ನ ಅಂಟಿಸಿಕೊಂಡು ಕಿಟ್ ಹಂಚಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದರು.

ಬೆಂಗಳೂರು ಬಸ್ ನಿಲ್ದಾಣದಲ್ಲಿ ಕ್ವಾರಂಟೈನ್ ವ್ಯಕ್ತಿಗಳು ಪ್ರತ್ಯಕ್ಷ; ಸಾರಿಗೆ ಸಿಬ್ಬಂದಿಗೆ ಹೊಸ ತಲೆನೋವು ಶುರು

ಯಡಿಯೂರಪ್ಪ ಕೇವಲ ಭಾಷಣ ಮಾಡಿದರು, ಆದರೆ ಬಡವರನ್ನು ಉಳಿಸುವ ಕೆಲಸ ಮಾಡಲಿಲ್ಲ. ಬಡವರ ವಿರೋಧಿಗಳು ಬಿಜೆಪಿಗರು. ಅವರಲ್ಲಿ ಬಂಡತನ ಇದೆ.  ದರೋಡೆಕೋರರು, ಆನೇಕಲ್‌ನಲ್ಲಿ ಲೂಟಿ ಕೋರರು ಇದ್ದಾರೆ. ಹೆಣ್ಣುಮಕ್ಕಳಿಗೆ ಕೊಡುವ ಆಹಾರಕ್ಕೆ ಕನ್ನ ಹಾಕಿದ್ದಾರೆ. ಸರ್ಕಾರ ನಡೆಸುವುದಕ್ಕೆ ಇವರು ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನ ಮತ ಕೊಟ್ಟು ಅಧಿಕಾರ ಕೊಟ್ಟಿಲ್ಲ ಇವರಿಗೆ, ಹಣ ಬಲದಿಂದ ಅಧಿಕಾರಕ್ಕೆ ಬಂದಿದ್ದಾರೆ. ಯಡಿಯೂರಪ್ಪ ನಡೆಯೋಕ್ಕಾಗಲ್ಲ, ಓಡಾಡೋಕ್ಕಾಗಲ್ಲ. ಅಧಿಕಾರಿಗಳು ಕೊಟ್ಟಿದ್ದನ್ನು ಓದಿ ಕುತ್ಕೊತಾರೆ. ರೋಬೋಟ್‌ನಂತಹ ಸರ್ಕಾರ ಇಲ್ಲಿದೆ ಎಂದು ಲೇವಡಿ ಮಾಡಿದರು.

ನರೇಂದ್ರ ಮೋದಿ ಸುಳ್ಳು ಹೇಳೋದೆ ಹೇಳೋದು.  20 ಲಕ್ಷ ಕೋಟಿ ಎಲ್ಲಿ ಕೊಟ್ಟಿದ್ದಾರೆ ಲೆಕ್ಕ ಕೊಡಬೇಕಲ್ಲ.  ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನ ಮಂತ್ರಿಯನ್ನು ಈ ದೇಶ ಈವರೆಗೆ ಕಂಡಿಲ್ಲ.  1 ಲಕ್ಷ 86 ಸಾವಿರ 236 ಕೋಟಿ ಹಣದ ವಹಿವಾಟು ಇರೋದು, ಮಿಕ್ಕಿದ್ದೆಲ್ಲ ಬೋಗಸ್. ದೇಶದ ಬಜೆಟ್ 30 ಲಕ್ಷದ 42 ಸಾವಿರದ 230 ಕೋಟಿ.  ಹಾಗಾದ್ರೆ ಇವರು 50 ಲಕ್ಷ ಕೋಟಿ ಖರ್ಚು ಮಾಡ್ತಾರಾ? ಎಂತಾ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ನೋಡಿ. 15 ಲಕ್ಷ, ಉದ್ಯೋಗ, ರೈತರ ಆಧಾಯ ದುಪ್ಪಟ್ಟು ಯಾವುದನ್ನೂ ಕೊಟ್ಟಿಲ್ಲ. ಇಂತಹದರಲ್ಲಿ ಇದೊಂದು ಹುಸಿ ಸುಳ್ಳು ಎಂದು ಕಿಡಿಕಾರಿದರು.
First published: May 25, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading