HOME » NEWS » Coronavirus-latest-news » FORMER CM HD KUMARASWAMY HELD A VIDEO CONFERENCE WITH JDS LEADERS LG

ಜೆಡಿಎಸ್ ಶಾಸಕರ ಜೊತೆ ವಿಡಿಯೋ ಕಾನ್ಪೆರೆನ್ಸ್ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ

ಮುಖ್ಯವಾಗಿ ಕ್ಷೇತ್ರಗಳಲ್ಲಿನ ಸಾಮಾನ್ಯ ಜನರ  ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು . ಇದರ ಜೊತೆಗೆ  ಕ್ಷೇತ್ರಗಳಲ್ಲಿರುವ ಕೊರೋನಾ ಸೋಂಕಿತರು, ಕ್ವಾರಂಟೈನ್​​ಗೆ ಒಳಗಾದವರು, ಕೊರೋನಾ ತಡೆಗೆ ಕೈಗೊಂಡ ಕ್ರಮಗಳು, ಅಲ್ಲಿನ ಜನರ ಪರಿಸ್ಥಿತಿ, ಬೇರೆ ರಾಜ್ಯದಿಂದ ಅಲ್ಲಿಗೆ ಬಂದು ಕ್ವಾರಂಟೈನ್ ಆಗಿರೋರು ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

news18-kannada
Updated:May 26, 2020, 8:27 PM IST
ಜೆಡಿಎಸ್ ಶಾಸಕರ ಜೊತೆ ವಿಡಿಯೋ ಕಾನ್ಪೆರೆನ್ಸ್ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ
ಹೆಚ್​.ಡಿ. ಕುಮಾರಸ್ವಾಮಿ.
  • Share this:

ಬೆಂಗಳೂರು(ಮೇ 26): ಕೊರೋನಾದಿಂದ  ದೇಶ ಸಂಕಷ್ಟದಲ್ಲಿದೆ. ಕರ್ನಾಟಕ ಕೂಡ ಕೋವಿಡ್-19 ಸಮಸ್ಯೆಯಲ್ಲಿ ಸಿಲುಕಿದೆ.  ಸದ್ಯ 2 ಸಾವಿರಕ್ಕೂ ಹೆಚ್ಚು ಸೋಂಕಿತರು ರಾಜ್ಯದಲ್ಲಿ ಇದ್ದಾರೆ. ಕೊರೋನಾ ವೈರಸ್​​ನಿಂದ ದೇವರೇ ಕಾಪಾಡಬೇಕು ಎನ್ನುವ ಸ್ಥಿತಿ ಬಂದು ಒದಗಿದೆ. ಈ ಮಧ್ಯೆಯೇ ದೇಶದಲ್ಲಿ  ಲಾಕ್​ಡೌನ್​  ಮುಂದುವರೆದಿದೆ.

ರಾಜ್ಯದಲ್ಲಿ ಲಾಕ್​ಡೌನ್​​ನಿಂದ ಜನರಿಗೆ ಒಂದಷ್ಟು ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದು ಜೆಡಿಎಸ್ ಶಾಸಕರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮಾಡಿ, ಕ್ಷೇತ್ರದಲ್ಲಿರುವ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.Bangalore Rains: ಬೆಂಗಳೂರಿನಲ್ಲಿ ಭಾರೀ ಮಳೆ; ಧರೆಗುರುಳಿದ ಮರ, ಜಲಾವೃತವಾದ ರಸ್ತೆ, ಜನಜೀವನ ಅಸ್ತವ್ಯಸ್ತ!

ಮುಖ್ಯವಾಗಿ ಕ್ಷೇತ್ರಗಳಲ್ಲಿನ ಸಾಮಾನ್ಯ ಜನರ  ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು . ಇದರ ಜೊತೆಗೆ  ಕ್ಷೇತ್ರಗಳಲ್ಲಿರುವ ಕೊರೋನಾ ಸೋಂಕಿತರು, ಕ್ವಾರಂಟೈನ್​​ಗೆ ಒಳಗಾದವರು, ಕೊರೋನಾ ತಡೆಗೆ ಕೈಗೊಂಡ ಕ್ರಮಗಳು, ಅಲ್ಲಿನ ಜನರ ಪರಿಸ್ಥಿತಿ, ಬೇರೆ ರಾಜ್ಯದಿಂದ ಅಲ್ಲಿಗೆ ಬಂದು ಕ್ವಾರಂಟೈನ್ ಆಗಿರೋರು ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಇದೇ ವೇಳೆ  ಕ್ಷೇತ್ರದ ಅಭಿವೃದ್ಧಿ ಕುರಿತು ಶಾಸಕರ ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿದರು. ಜೆಪಿ‌ ನಗರದ ತಮ್ಮ ನಿವಾಸದಲ್ಲಿ ಕುಳಿತುಕೊಂಡು ಹೆಚ್ ಡಿ ಕುಮಾರಸ್ವಾಮಿ  ವೀಡಿಯೋ ಕಾನ್ಪೆರೆನ್ಸ್ ನಡೆಸಿದರು.

ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜೆಡಿಎಸ್ ನ 20 ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಶಾಸಕರು ತಮ್ಮ ಕ್ಷೇತ್ರದ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಮ್ಮ ನಾಯಕರಾದ ಹೆಚ್ಡಿಕೆ ಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಕ್ಷೇತ್ರದಲ್ಲಿ ಇರುವ ಕೆಲ ಸಮಸ್ಯೆಗಳನ್ನು ಶಾಸಕರು ಹೆಚ್ಡಿಕೆ ಗಮನಕ್ಕೆ ತಂದರು.First published: May 26, 2020, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories