HOME » NEWS » Coronavirus-latest-news » FORMER CHIEF MINISTER H D KUMARSWAMU SLAMS AGAINST FORMER MLA BALAKRASHNA IN RAMANAGARA HK

ಮಣ್ಣಿನ ಮಕ್ಕಳು ಅಂತ ನಾವು ಕರೆದುಕೊಂಡಿದ್ದಲ್ಲ, ನಾಡಿನ ಜನರು ಕೊಟ್ಟ ಬಿರುದು; ಬಾಲಕೃಷ್ಣಗೆ ಕುಮಾರಸ್ವಾಮಿ ತಿರುಗೇಟು

ಮಣ್ಣಿನ ಮಕ್ಕಳು ಅಂತಾ ನಾವು ಬಿರುದನ್ನು ಹಾಕಿಕೊಂಡಿಲ್ಲ. ನಾಡಿನ ಜನ ನಮಗೆ ಕೊಟ್ಟಿರುವ ಬಿರುದು. ಮಣ್ಣಿನ ಮಕ್ಕಳು ಮನೆಯಲ್ಲಿ ಮಲಗಲ್ಲ, ಇವರಿಂದ ಕಲಿಯಬೇಕಿಲ್ಲ ಎಂದು ಬಾಲಕೃಷ್ಣ ಹೆಸರನ್ನು ಹೇಳದೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.

news18-kannada
Updated:April 22, 2020, 4:48 PM IST
ಮಣ್ಣಿನ ಮಕ್ಕಳು ಅಂತ ನಾವು ಕರೆದುಕೊಂಡಿದ್ದಲ್ಲ, ನಾಡಿನ ಜನರು ಕೊಟ್ಟ ಬಿರುದು; ಬಾಲಕೃಷ್ಣಗೆ ಕುಮಾರಸ್ವಾಮಿ ತಿರುಗೇಟು
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ
  • Share this:
ರಾಮನಗರ(ಏ.22): ಕೊರೋನಾ ಎಫೆಕ್ಟ್​ ನಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾನೇ ಮುಖ್ಯಮಂತ್ರಿ ಆಗಿದ್ರೆ ಇವತ್ತು 5 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿರುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ನಾವು ಕೊಟ್ಟ ಸಲಹೆಯನ್ನ ಪರಿಗಣಿಸುತ್ತಿಲ್ಲ. ರೈತರ ವಿಚಾರದಲ್ಲಿ ಯಾರು ಟೀಕೆ ಮಾಡಬೇಡಿ. ನಾನು ರೈತರ ಕಷ್ಟದಲ್ಲಿ ನೆರವಿಗೆ ಬಂದು ಹಲವರಿಗೆ ಸಹಾಯ ಮಾಡಿದ್ದೇನೆ ಎಂದರು.

ಮಣ್ಣಿನ ಮಕ್ಕಳು ಮನೆಯಲ್ಲಿ ಮಲಗಲ್ಲ : 

ಕೊರೋನಾ ಸಂದರ್ಭದಲ್ಲಿ ಮಣ್ಣಿನ ಮಕ್ಕಳು ಎಲ್ಲಿದ್ದಾರೆ ಎಂದಿದ್ದ ಮಾಜಿ ಶಾಸಕ ಬಾಲಕೃಷ್ಣ ಅವರಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ. ಅವರು 20 ಸಾವಿರ ರೂಪಾಯಿಯ ತರಕಾರಿ ಖರೀದಿ ಮಾಡಿ ಪ್ರಚಾರ ಮಾಡುತ್ತಾರೆ. ನಾನು ರಾಮನಗರ - ಚನ್ನಪಟ್ಟಣ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ವೆಚ್ಚದ ಆಹಾರ ಸಾಮಗ್ರಿ ಕೊಡುತ್ತಿದ್ದೇನೆ. ಮಣ್ಣಿನ ಮಕ್ಕಳು ಅಂತಾ ನಾವು ಬಿರುದನ್ನು ಹಾಕಿಕೊಂಡಿಲ್ಲ. ನಾಡಿನ ಜನ ನಮಗೆ ಕೊಟ್ಟಿರುವ ಬಿರುದು. ಮಣ್ಣಿನ ಮಕ್ಕಳು ಮನೆಯಲ್ಲಿ ಮಲಗಲ್ಲ, ಇವರಿಂದ ಕಲಿಯಬೇಕಿಲ್ಲ ಎಂದು ಬಾಲಕೃಷ್ಣ ಹೆಸರನ್ನು ಹೇಳದೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.

ರಾಮನಗರ ಜೈಲಿಗೆ ಪಾದರಾಯನಪುರದ ವಿಚಾರಣಾಧೀನ ಖೈದಿಗಳು ಶಿಫ್ಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ನಾನು ಈ ಬಗ್ಗೆ ಸಿಎಂ, ಗೃಹಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾಕೆ ಈ ನಿರ್ಧಾರ ಮಾಡಿದ್ದೀರಿ, ಈ ಸಲಹೆ ಕೊಟ್ಟವರು ಯಾರು ಜನ ನನಗೆ ಫೋನ್ ಮಾಡಿ ಈ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಹೇಳಿದ್ದೇನೆ. ಬೆಂಗಳೂರಿನಲ್ಲೇ ಸರ್ಕಾರಿ ಹಾಸ್ಟೆಲ್ ನಲ್ಲಿ, ಆಸ್ಪತ್ರೆಗಳಲ್ಲಿ, ಕಲ್ಯಾಣಮಂಟಪದಲ್ಲಿ ಇರಿಸಬಹುದಿತ್ತು ಸಿಎಂ ಹಾಗೂ ಗೃಹಮಂತ್ರಿಗಳಿಗೆ ಉದ್ಧಟತನ,ಅಧಿಕಾರದಲ್ಲಿದ್ರೆ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ.ನಾನು ಸಾರ್ವಜನಿಕರಿಗೆ ಅನಾನುಕೂಲವಾಗಲು ಅವಕಾಶ ಕೊಡಲ್ಲ.ಸರ್ಕಾರದ ಹಲವು ಲೋಪಗಳಿವೆ ಆದರೂ ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.

ನನ್ನ ಕುಟುಂಬದ ಮದುವೆ ಮಾಡಲು ಹೋದಾಗ ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಿದ್ದರು. ರಾಮನಗರ ಗ್ರೀನ್ ಜೋನ್ ನಲ್ಲಿದೆ. ಕುಮಾರಸ್ವಾಮಿ ಬೆಂಗಳೂರಿನಿಂದ ಜನರನ್ನ ಕರೆತಂದು ರೆಡ್ ಜೋನ್ ಗೆ ತರುತ್ತಿದ್ದಾರೆಂದಿದ್ದರು. ಆದರೆ, ಈಗ ಆ ಪುಣ್ಯಾತ್ಮರು ಎಲ್ಲಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ : ಇಂದು ಮಧ್ಯರಾತ್ರಿಯಿಂದಲೇ ಲಾಕ್​​ಡೌನ್‌ ಸಡಿಲಿಕೆ: ಯಾವ ಕ್ಷೇತ್ರಗಳಿಗೆ ವಿನಾಯಿತಿ? ಇಲ್ಲಿದೆ ಡೀಟೆಲ್ಸ್​ಸರ್ಕಾರದ ಆರೋಗ್ಯ ತಪಾಸಣಾ ಕಿಟ್ ನಲ್ಲಿ ಲೋಪದೋಷ ವಿಚಾರ ಈ ಬಗ್ಗೆ ಸಿಎಂ ರವರು ಸರ್ವಪಕ್ಷ ಸಭೆ ಕರೆದಾಗಲೇ ಎಚ್ಚರಿಕೆ ಕೊಟ್ಟಿದ್ದೆ. ನೀವು ತರಿಸುತ್ತಿರುವ ಕಿಟ್ ಗಳು ಕಳಪೆ ಗುಣಮಟ್ಟದವು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಸಲಹೆ ಕೊಟ್ಟಿದ್ದೆ. ಈಗ ಕೇಂದ್ರ ಸರ್ಕಾರ ಅದರಲ್ಲಿ ಲೋಪವಿದೆ ಎರಡು ದಿನ ತಪಾಸಣೆ ನಿಲ್ಲಿಸಿ ಎಂದಿದ್ದಾರೆ. ಹಾಗಾಗಿ ಸರ್ಕಾರ ಯಾವುದೇ ಲೋಪಕ್ಕೆ ಅವಕಾಶ ಕೊಡಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
First published: April 22, 2020, 4:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories