CoronaVirus Update: ಛತ್ತೀಸ್ ಗಢ ಮಾಜಿ ಸಿಎಂ ರಮಣ್‌ ಸಿಂಗ್ ಪತ್ನಿಗೆ ಕೊರೋನಾ ಪಾಸಿಟಿವ್; ಬಿಜೆಪಿ ನಾಯಕ ಕ್ವಾರಂಟೈನ್‌

ಈ ನಡುವೆ ಜನರಲ್ಲಿ ಮನವಿ ಮಾಡಿರುವ ರಮಣ್ ಸಿಂಗ್ ಕಳೆದ ಒಂದು ವಾರದಿಂದ ತಮ್ಮ ಜೊತೆಗೆ ಸಂಪರ್ಕ ಹೊಂದಿದ್ದ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಗಾಗುವಂತೆ ಕೇಳಿಕೊಂಡಿದ್ದಾರೆ. 69 ವರ್ಷದ ರಮಣ್ ಸಿಂಗ್ ಸುಮಾರು 15 ವರ್ಷಗಳ ಕಾಲ ಛತ್ತೀಸ್‌ ಗಢ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಮಣ್ ಸಿಂಗ್.

ರಮಣ್ ಸಿಂಗ್.

  • Share this:
ರಾಯ್‌ಪುರ್‌ (ಆಗಸ್ಟ್‌ 12); ಛತ್ತೀಸ್‌ ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಬಿಜೆಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ರಮಣ್‌ ಸಿಂಗ್ ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ರಮಣ್ ಸಿಂಗ್ ಸಹ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ರಮಣ್ ಸಿಂಗ್ ಅವರ ಪತ್ನಿ ಇತ್ತೀಚೆಗೆ ತೀವ್ರ ಜ್ವರದಿಂದಾಗಿ ಬಳಲುತ್ತಿದ್ದರು. ಹೀಗಾಗಿ ಅವರನ್ನು ಪರೀಕ್ಷಿಸಿದಾಗ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಪರಿಣಾಮ ರಮಣ್ ಸಿಂಗ್ ಸಹ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಅಲ್ಲದೆ, ಅವರ ಕುಟುಂಬದ ಎಲ್ಲಾ ಸದಸ್ಯರನ್ನೂ ಪ್ರತ್ಯೇಕಗೊಳಿಸಲಾಗಿದ್ದು ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ.

ಈ ನಡುವೆ ಜನರಲ್ಲಿ ಮನವಿ ಮಾಡಿರುವ ರಮಣ್ ಸಿಂಗ್ ಕಳೆದ ಒಂದು ವಾರದಿಂದ ತಮ್ಮ ಜೊತೆಗೆ ಸಂಪರ್ಕ ಹೊಂದಿದ್ದ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಗಾಗುವಂತೆ ಕೇಳಿಕೊಂಡಿದ್ದಾರೆ. 69 ವರ್ಷದ ರಮಣ್ ಸಿಂಗ್ ಸುಮಾರು 15 ವರ್ಷಗಳ ಕಾಲ ಛತ್ತೀಸ್‌ ಗಢ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ಪ್ರಜಾಪ್ರಭುತ್ವವನ್ನು ಉಳಿಸುವ ನಮ್ಮ ಹೋರಾಟ ಮುಂದುವರೆಯಲಿದೆ; ಅಶೋಕ್‌ ಗೆಹ್ಲೋಟ್‌ ಅಭಿಮತ

ಉತ್ತರ ಪ್ರದೇಶ ಸಚಿವ ಸಂಪುಟದ ಮತ್ತೊಬ್ಬ ಸಚಿವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು ಇಂದು ವರದಿ ಕೈಸೇರಿದೆ. ಈ ವರದಿಯಲ್ಲಿ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ, ಕಳೆದ ಭಾರಿ ಸಚಿವ ಸುರೇಶ್ ಖನ್ನಾ ಅವರಿಗೆ ಪರೀಕ್ಷೆಗೆ ನಡೆಸಿದ್ದಾಗ ಕೊರೋನಾ ನೆಗೆಟಿವ್ ಬಂದಿತ್ತು ಎಂಬುದು ಉಲ್ಲೇಖಾರ್ಹ.

ಈ ನಡುವೆ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 23 ಲಕ್ಷ ಗಡಿ ದಾಟಿದ್ದು ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪೀಡಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಅಗ್ರ ಮೂರನೇ ಸ್ಥಾನದಲ್ಲಿದೆ. ಅಲ್ಲದೆ, ಕೊರೋನಾದಿಂದಾಗಿ ಮೃತಪಟ್ಟವರ ಸಂಖ್ಯೆಯೂ 46 ಸಾವಿರದ ಗಡಿ‌ ದಾಟಿದ್ದು 46,091ಕ್ಕೆ ಏರಿಕೆಯಾಗಿದೆ. ಮಂಗಳವಾರ ದೇಶದಲ್ಲಿ 834 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Published by:MAshok Kumar
First published: