• Home
 • »
 • News
 • »
 • coronavirus-latest-news
 • »
 • ಭಾರತದಲ್ಲಿ ಭಾನುವಾರ ದಾಖಲೆ ಪ್ರಕರಣ; ಒಂದೇ ದಿನ ಸುಮಾರು 2 ಸಾವಿರ ಜನರಿಗೆ ಕೊರೋನಾ!

ಭಾರತದಲ್ಲಿ ಭಾನುವಾರ ದಾಖಲೆ ಪ್ರಕರಣ; ಒಂದೇ ದಿನ ಸುಮಾರು 2 ಸಾವಿರ ಜನರಿಗೆ ಕೊರೋನಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 27 ಸಾವಿರದ ಗಡಿ ಸಮೀಪಿಸಿದೆ. ದೇಶದಲ್ಲಿ ಒಟ್ಟು 26,917 ಜನರಿಗೆ ಕೊರೋನಾ ವೈರಸ್​ ಇರುವುದು ದೃಢಪಟ್ಟಿದೆ. ಈ ಪೈಕಿ 5,913 ಜನರು ಗುಣಮುಖರಾಗಿದ್ದಾರೆ.

 • Share this:

  ಬೆಂಗಳೂರು (ಏ.27): ಭಾರತದಲ್ಲಿ ಲಾಕ್​ಡೌನ್​ ಆದೇಶದ ನಡುವೆಯೂ ಕೊರೋನಾ ವೈರಸ್ ಬಹಳ ವೇಗವಾಗಿ ಹಬ್ಬುತ್ತಿದೆ. ಸರ್ಕಾರ ಎಷ್ಟೇ ಹರಸಾಹಸ ಪಟ್ಟರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮಧ್ಯೆ ಭಾನುವಾರ ಭಾರತದಲ್ಲಿ ದಾಖಲೆಯ ಕೊರೋನಾ ಪ್ರಕರಣ ದಾಖಲಾಗಿವೆ. ಒಂದೆ ದಿನ ಸುಮಾರು 2 ಸಾವಿರ ಮಂದಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.

  ಶನಿವಾರದಿಂದ ಭಾನುವಾರದವರೆಗೆ ಒಟ್ಟು 1,975 ಕೊರೋನಾ ಪ್ರಕರಣ ದಾಖಲಾಗಿವೆ. ಜನವರಿ 30ರಂದು ಕೇರಳದಲ್ಲಿ ಮೊದಲ ಕೇಸ್​ ಕಾಣಿಸಿಕೊಂಡಿತ್ತು. ಇದಾಗಿ ಸುಮಾರು ಎರಡು ತಿಂಗಳು ಕಳೆಯುತ್ತಾ ಬಂದಿವೆ. ಈ ಅವಧಿಯಲ್ಲಿ ಒಂದೇ ದಿನ ಇಷ್ಟೊಂದು ಪ್ರಕರಣ ದಾಖಲಾಗಿದ್ದು ಇದೇ ಮೊದಲು.

  ಇನ್ನು ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 27 ಸಾವಿರದ ಗಡಿ ಸಮೀಪಿಸಿದೆ. ದೇಶದಲ್ಲಿ ಒಟ್ಟು 26,917 ಜನರಿಗೆ ಕೊರೋನಾ ವೈರಸ್​ ಇರುವುದು ದೃಢಪಟ್ಟಿದೆ. ಈ ಪೈಕಿ 5,913 ಜನರು ಗುಣಮುಖರಾಗಿದ್ದಾರೆ. 826 ಜನರು ಮೃತಪಟ್ಟಿದ್ದಾರೆ.

  ಇದನ್ನೂ ಓದಿ: ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಮೋದಿ ಮಹತ್ವದ ಚರ್ಚೆ: ನಿರ್ಧಾರವಾಗಲಿದೆ ಲಾಕ್​ಡೌನ್​​ ಭವಿಷ್ಯ

  ಇನ್ನು, ದೆಹಲಿಯ ಆಸ್ಪತ್ರೆಗಳಲ್ಲೇ ಕೊರೋನಾ ಸೋಂಕಿನ ಅಬ್ಬರ ಜೋರಾಗಿದೆ. ನಿನ್ನೆ ಒಂದೇ ದಿನ ಆರೋಗ್ಯ ಸೇವೆಯ 51 ಜನರಲ್ಲಿ ಸೋಂಕು ಪತ್ತೆಯಾಗಿದೆ. ರೋಹಿಣಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ 32 ಜನ, ಜಗಜೀವನರಾಮ್ ಆಸ್ಪತ್ರೆಯಲ್ಲಿ 19 ನರ್ಸ್​​ಗಳು, ಎಮ್ಸ್ ಆಸ್ಪತ್ರೆಯ ನರ್ಸ್ ಮತ್ತು ಅವರ ಇಬ್ಬರು ಮಕ್ಕಳಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಇನ್ನು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ಗರ್ಭಿಣಿ ಮೃತಪಟ್ಟಿದ್ದರು.

  First published: