HOME » NEWS » Coronavirus-latest-news » FOR REORDER TO REQUIREMENTS AIDED SCHOOLS POSTS MLC BASAVARAJ HORATTI TO WARN STATE GOVERNMENT HK

ಅನುದಾನಿತ ಶಿಕ್ಷಣ ಸಂಸ್ಥೆಗಳ ಹೊಸ ನೇಮಕಾತಿ ರದ್ದು - ಸರ್ಕಾರದ ಆದೇಶ ವಾಪಸ್ ಪಡೆಯಲು ಬಸವರಾಜ್​​ ಹೊರಟ್ಟಿ ಆಗ್ರಹ

ಕೊರೋನಾ ನೆಪವನ್ನು ಇಟ್ಟುಕೊಂಡು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ಸರ್ಕಾರ ಬ್ರೇಕ್ ಹಾಕಿದೆ. ಉಪನ್ಯಾಸಕರ ನೇಮಕಕ್ಕೂ ಅನುಮತಿ ಕೊಟ್ಟಿಲ್ಲ. ಇದರಿಂದ ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ

news18-kannada
Updated:June 16, 2020, 4:02 PM IST
ಅನುದಾನಿತ ಶಿಕ್ಷಣ ಸಂಸ್ಥೆಗಳ ಹೊಸ ನೇಮಕಾತಿ ರದ್ದು - ಸರ್ಕಾರದ ಆದೇಶ ವಾಪಸ್ ಪಡೆಯಲು ಬಸವರಾಜ್​​ ಹೊರಟ್ಟಿ ಆಗ್ರಹ
ವಿಧಾನ ಪರಿಷತ್​ ಸದಸ್ಯ ಬಸವರಾಜ್​​​​ ಹೊರಟ್ಟಿ
  • Share this:
ಬೆಂಗಳೂರು(ಜೂ.15): ಅನುದಾನಿತ ಶಿಕ್ಷಣ ಸಂಸ್ಥೆಗಳ ಅನುದಾನಕ್ಕೆ ಆರ್ಥಿಕ ಇಲಾಖೆ ಹಾಕಿದ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ ಕೊನೆಯವರೆಗೆ ಸರ್ಕಾರಕ್ಕೆ ಸಮಯ ನೀಡುತ್ತೇವೆ. ಸರ್ಕಾರ ಕ್ರಮ ತೆಗೆದುಕೊಳ್ಳದೇ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ಕೂಡಲೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೇಮಕಾತಿಗೆ ಅವಕಾಶ ನೀಡಬೇಕು. ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗೆ ಯಾವುದೇ ನಿಬಂಧನೆ ಹಾಕಬಾರದು ಎಂದು ಆಗ್ರಹಿಸಿದರು.

ಕೊರೋನಾ ನೆಪವನ್ನು ಇಟ್ಟುಕೊಂಡು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ಸರ್ಕಾರ ಬ್ರೇಕ್ ಹಾಕಿದೆ. ಉಪನ್ಯಾಸಕರ ನೇಮಕಕ್ಕೂ ಅನುಮತಿ ಕೊಟ್ಟಿಲ್ಲ. ಇದರಿಂದ ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ. 2015ರ ನೇಮಕಾತಿಗೆ ಕೊಟ್ಟಿರುವ ಅನುಮತಿ ಮುಂದುವರಿಸಬೇಕು. ಸರ್ಕಾರದಲ್ಲಿ ತಾಳ ತಂತಿ ಇಲ್ಲದಂತೆ ಆಗಿದೆ. ಸರ್ಕಾರ ಆದೇಶ ವಾಪಸ್ ಪಡೆಯದೇ ಹೋದಲ್ಲಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ‌ ಎಂದು ಎಚ್ಚರಿಕೆ ನೀಡಿದರು.

10ನೇ ತರಗತಿ ವರೆಗೆ ಆನ್‌ಲೈನ್ ಶಿಕ್ಷಣ‌ ಬೇಡ :

ಹಳ್ಳಿಗಳಲ್ಲಿ ವಿದ್ಯುತ್​ ಎಲ್ಲಿದೆ, ಸ್ಮಾರ್ಟ್ ಫೋನ್ ಎಲ್ಲಿದೆ? ಹೀಗಾಗಿ ನೆಟ್ ವರ್ಕ್ ಎಲ್ಲಿಂದ ಸಿಗುತ್ತೆ ? ಹಾಗಾಗಿ 10 ನೇ ತರಗತಿವರೆಗೆ ಆನ್ ಲೈನ್ ತರಗತಿ ಮಾಡಬಾರದು. ಪಿಯುಸಿ ಬಳಿಕ ಬೇಕಾದರೆ ಆನ್‌ಲೈನ್ ಶಿಕ್ಷಣ ಮಾಡಿ ಎಂದು ತಿಳಿಸಿದರು.

ಇದನ್ನೂ ಓದಿ : ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹೊಸ ನೇಮಕಕ್ಕೆ ಬ್ರೇಕ್ ; ಆರ್ಥಿಕ ಇಲಾಖೆ ಆದೇಶ

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ‌ಗೆ ನನ್ನ ವಿರೋಧ ಇದೆ. ಕೃಷಿಗೆ ಕೊಟ್ಟ ಭೂಮಿ ಕೃಷಿಗೆ ಬಳಕೆ ಮಾಡಬೇಕು. ಹಾಗಾದರೆ ಎಷ್ಟು ಎಕರೆ ಭೂಮಿಯನ್ನಾದರು ತೆಗೆದುಕೊಳ್ಳಲಿ. ಒಂದು ವೇಳೆ ಕೃಷಿಯೇತರ ಉದ್ದೇಶಕ್ಕೆ ಬಳಿಸಿದರೆ ಅವರಿಗೆ ಜೈಲು ಶಿಕ್ಷೆಯಾಗಬೇಕು. ಸರ್ಕಾರ ಈ ಸಂಬಂಧ ತಿದ್ದುಪಡಿ ಮಾಡಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಶೇ. 28 ರಷ್ಟು ಭೂಮಿ ರಿಯಲ್ ಎಸ್ಟೇಟ್ ಗೆ ಹೋಗಿದೆ. ಈಗ ಈ ಕಾಯ್ದೆ ತಂದಲ್ಲಿ ಮತ್ತಷ್ಟು ಭೂಮಿ ರಿಯಲ್ ಎಸ್ಟೇಟ್ ಗೆ ಹೋಗುತ್ತೆ. ಕಾಯ್ದೆಯಲ್ಲಿ ಲೋಪ ಇದೆ. ಕೃಷಿಗೆ ತೆಗೆದುಕೊಂಡ ಭೂಮಿ ಕೃಷಿಗೆ ಬಳಸಬೇಕು. ರೈತರ ಪರ ಅಂತ ಯಡಿಯೂರಪ್ಪ ಹೇಳ್ತಾರೆ. ಹಸಿರು ಟವೆಲ್ ಹಾಡುತ್ತಾರೆ. ಹೀಗೆ ಮಾಡಿದ್ರೆ ರೈತರಿಗೆ ಅನ್ಯಾಯ ಆಗುತ್ತದೆ ಎಂದು ಕಿಡಿ ಕಾರಿದರು.
First published: June 16, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories