ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹೆಚ್ಚು ಶುಲ್ಕ ವಿಧಿಸಿದ್ರೆ ಕಠಿಣ ಕ್ರಮ : ಸಚಿವ ಶ್ರೀರಾಮುಲು ಎಚ್ಚರಿಕೆ

ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಚಿಕಿತ್ಸೆ ಕೊಡಿಸುತ್ತೇವೆ. ಆದರೆ ನಿಗದಿಪಡಿಸಿದ ದರದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

  • Share this:
ಬೆಂಗಳೂರು(ಜೂ.06): ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದರೇ ಕ್ರಮ ಕೈಗೊಳ್ಳಲಾಗುತ್ತದೆ. ನಾವು ನಿಗದಿಪಡಿಸಿದ ದರಕ್ಕೆ ಚಿಕಿತ್ಸೆ ನೀಡಬೇಕು. ಒಂದು ವೇಳೆ ನಾವು ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೇ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸಿದ್ದ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಕೆಲ ಜನರು ಮಾಹಿತಿ ಇಲ್ಲದೇ ಖಾಸಗಿ ಆಸ್ಪತ್ರೆ ಗೆ ಹೋಗುತ್ತಿದ್ದಾರೆ. ನಮ್ಮ ಸರ್ಕಾರಿ ಆಸ್ಪತ್ರೆಗಳೇ ಖಾಲಿ ಇವೆ, ಅವುಗಳು ತುಂಬಿದ್ದರೂ ವೈದ್ಯಕೀಯ ಆಸ್ಪತ್ರೆಗಳು ಇವೆ, ಇವುಗಳ ಜೊತೆಗೆ ಫೀಲ್ಡ್​ ಆಸ್ಪತ್ರೆ ವ್ಯವಸ್ಥೆ ಸಹ ಮಾಡಲಾಗಿದೆ, ಅಲ್ಲೇ ಇನ್ನೂ ಖಾಲಿ ಇವೆ. ಆದರೆ, ಕೆಲವರು ನಮಗೆ ಗೊತ್ತಾಗದೇ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಅವರಿಗೆ ಖಾಸಗಿಯವರು ಹೆಚ್ಚು ಶುಲ್ಕವನ್ನು ಕೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಆ ಬಗ್ಗೆ ಎರಡು ದಿನಗಳಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಸರ್ಕಾರ ನಿಗಧಿಪಡಿಸಿದ್ದ ಅಷ್ಟೇ ಶುಲ್ಕ ಮಾತ್ರ ತೆಗೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚು ಶುಲ್ಕ ತೆಗೆದುಕೊಂಡರೇ ಕ್ರಮ ಕೈಗೊಳ್ಳುತ್ತೇವೆ. ಕೊರೋನಾ ವಿಚಾರದಲ್ಲಿ  ಸರ್ಕಾರ , ಖಾಸಗಿ ಅಸ್ಪತ್ರೆ ಸಮವಾಗಿ ಸೇವ ಮಾಡಬೇಕಿದೆ ಎಂದು ತಿಳಿಸಿದರು.

ಖಾಸಗಿ ಅಸ್ಪತ್ರೆ ವಿರುದ್ದ ಸಣ್ಣ ದೂರು ಬಂದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕೋವಿಡ್ ಹೆಸರಿನಲ್ಲಿ ಖಾಸಗಿ ನರ್ಸಿಂಗ್ ಹೊಮ್​​ಗಳು ದಂಧೆ ಮಾಡುವುದಕ್ಕೆ ಸರ್ಕಾರ ಬಿಡಲ್ಲ. ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಚಿಕಿತ್ಸೆ ಕೊಡಿಸುತ್ತೇವೆ. ಆದರೆ ನಿಗದಿಪಡಿಸಿದ ದರದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು ಎಂದರು.

ಇದನ್ನೂ ಓದಿ ; ಉಪ್ಪಿಗೂ ಕಂಟಕವಾದ ಕೊರೋನಾ - ಸಾಣೆಕಟ್ಟಾದಲ್ಲಿ ರಫ್ತಾಗದೆ ಕರಗಿ ನೀರಾಗುತ್ತಿರುವ ಉಪ್ಪಿನ ರಾಶಿ

ಇನ್ನೂ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ ಹಾಗೂ ಕೋರ್ ಕಮಿಟಿ ಸದಸ್ಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಬ್ಬರನ್ನ ಆಯ್ಕೆ ಮಾಡುವ ಸಂಬಂಧ ಇವತ್ತು ತೀರ್ಮಾನ ಮಾಡಲಾಗುತ್ತದೆ. ಹಲವರು ಆಕಾಂಕ್ಷಿಗಳಿದ್ದಾರೆ. ಆದರೆ, ಇಬ್ಬರನ್ನ ಮಾತ್ರ ಆಯ್ಕೆ ಮಾಡಲಾಗುತ್ತದೆ. ಉಳಿದವರಿಗೆ ಬೇರೆಯ ಅವಕಾಶ ಕಲ್ಪಿಸಲಾಗುತ್ತದೆ. ಅಸಮಾಧಾನಿತರನ್ನ ಸಮಾಧಾನಪಡಿಸುವ ಕೆಲಸವನ್ನು ನಾಯಕರು ಮಾಡುತ್ತಾರೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದವಾಗಿರುತ್ತಾರೆ ಎಂದು ತಿಳಿಸಿದರು.
First published: