ಕೆ.ಆರ್​​ ಮಾರ್ಕೆಟ್​​ ಕ್ಲೋಸ್​​ ಆದ್ರೇನು! ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ತಲೆಯೆತ್ತಿದೆ ಫುಟ್ಪಾತ್ ಮಾರ್ಕೆಟ್​

ಹಾಗಂತ ನಮ್ಮ ಜನ ಸುಮ್ಮನಿರ್ತಾರಾ? ಖಂಡಿತಾ ಇಲ್ಲ. ಮಾರ್ಕೆಟ್ ಇಲ್ಲದಿದ್ರೇನಾಯ್ತು? ಫುಟ್ಪಾತ್​​ಗಳಿಗೇನು ಬರವೇ? ಬೆಂಗ್ಳೂರಲ್ಲೀಗ. ಕಂಡಕಂಡಲ್ಲಿ ಮಾರ್ಕೆಟ್ ಎನ್ನುವಂತಾಗಿದೆ. ಯಾವ ರಸ್ತೆ, ಯಾವ ಫುಟ್ಪಾತ್ ನೋಡಿ ಅಲ್ಲೊಂದಷ್ಟು ಸೊಪ್ಪು-ತರಕಾರಿ-ಹಣ್ಣು ಮಾರುವವರು ಇರ್ತಾರೆ. ಬೀದಿ ಬೀದಿಯಲ್ಲಿ ಮಾರ್ಕೆಟ್ ತಲೆಯೆತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂ.27): ಕೊರೋನಾ ಸೋಂಕು ಅತೀ ವೇಗವಾಗಿ ಹರಡುವುದು ಜನರ ಗುಂಪುಗಳಲ್ಲಿ. ಹಾಗಾಗಿ ಸರ್ಕಾರ ಮೊದಲು ಮಾರ್ಕೆಟ್ ಅನ್ನು ಮುಚ್ಚಿತು. ಪ್ರಮುಖವಾಗಿ ಕೆ.ಆರ್​ ಮಾರ್ಕೆಟ್, ಯಶವಂತಪುರ ಮಾರ್ಕೆಟ್, ಎನ್.ಆರ್ ಕಾಲೋನಿ ತರಕಾರಿ ಮಾರ್ಕೆಟ್, ಜಯನಗರ ಮಾರ್ಕೆಟ್ ಹೀಗೆ ಬಹುತೇಕ ಎಲ್ಲಾ ತರಕಾರಿ ಮಾರ್ಕೆಟ್​ಗಳೂ ಕಳೆದ ಮೂರ್ನಾಲ್ಕು ತಿಂಗಳಿಂದ ಮುಚ್ಚಿವೆ.

ತರಕಾರಿ, ಹಣ್ಣು, ಹೂವುಗಳ ವ್ಯಾಪಾರ ಈ ಮಾರ್ಕೆಟ್​ಗಳಲ್ಲಿ ಹೆಚ್ಚಾಗಿ ನಡೆಯುತ್ತಿತ್ತು. ಒಂದೇ ಕಡೆ ಎಲ್ಲಾ ಬಗೆಯ ಅಗತ್ಯ ವಸ್ತುಗಳು ಸಿಕ್ತಾ ಇದ್ದಿದ್ರಿಂದ ಹೆಚ್ಚು ಜನ ಮಾರ್ಕೆಟ್ ಗಳಲ್ಲೇ ದೈನಂದಿನ ವ್ಯಾಪಾರ ಮಾಡ್ತಿದ್ರು. ಇದ್ರಿಂದಾಗಿ ಮಾರುಕಟ್ಟೆ ಸದಾ ಜನರಿಂದ, ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿತ್ತು. ಆದ್ರೆ ಈಗ ಸೋಂಕಿನ ಭಯದಿಂದ ವ್ಯಪಾರಿಗಳಿಗಂತೂ ಮಾರುಕಟ್ಟೆಯೊಳಗೆ ನೋ ಎಂಟ್ರಿ. ಮಾರುವವರೇ ಇಲ್ಲದ ಮೇಲೆ ಕೊಳ್ಳುವವರು ಎಲ್ಲಿರುತ್ತಾರೆ? ಪೋಲೀಸರು ಕೂಡಾ ಮಾರ್ಕೆಟ್​ಗಳ ಎಲ್ಲಾ ಎಂಟ್ರೆನ್ಸ್ ಕಡೆ ಬ್ಯಾರಿಕೇಡ್ ಹಾಕಿ ಇಡೀ ಪ್ರದೇಶಗಳನ್ನು ಸೀಲ್ ಮಾಡ್ಬಿಟ್ಟಿದ್ದಾರೆ.

ಹಾಗಂತ ನಮ್ಮ ಜನ ಸುಮ್ಮನಿರ್ತಾರಾ? ಖಂಡಿತಾ ಇಲ್ಲ. ಮಾರ್ಕೆಟ್ ಇಲ್ಲದಿದ್ರೇನಾಯ್ತು? ಫುಟ್ಪಾತ್​​ಗಳಿಗೇನು ಬರವೇ? ಬೆಂಗ್ಳೂರಲ್ಲೀಗ. ಕಂಡಕಂಡಲ್ಲಿ ಮಾರ್ಕೆಟ್ ಎನ್ನುವಂತಾಗಿದೆ. ಯಾವ ರಸ್ತೆ, ಯಾವ ಫುಟ್ಪಾತ್ ನೋಡಿ ಅಲ್ಲೊಂದಷ್ಟು ಸೊಪ್ಪು-ತರಕಾರಿ-ಹಣ್ಣು ಮಾರುವವರು ಇರ್ತಾರೆ. ಬೀದಿ ಬೀದಿಯಲ್ಲಿ ಮಾರ್ಕೆಟ್ ತಲೆಯೆತ್ತಿದೆ. ಒಂದಷ್ಟು ಸೊಪ್ಪು, ಒಂದೆರಡು ತರಕಾರಿ ಫುಟ್ಪಾತ್ ಮೇಲೆ ಹರಡಿಕೊಂಡು ವ್ಯಾಪಾರ ಶುರುವಾಗ್ಬಿಡುತ್ತೆ.

ಇದನ್ನೂ ಓದಿ: COVID-19: ಬೆಂಗಳೂರು ಕೊವೀಡ್-19 ಉಸ್ತುವಾರಿಗಾಗಿ ಸಚಿವರ ನಡುವೆ ಬಿಗ್​​ ಫೈಟ್

ಇನ್ನು ಕೆಲವು ಕಡೆ ತೆರೆದ ಆಟೋಗಳಲ್ಲಿ ಹಣ್ಣು, ತರಕಾರಿಗಳನ್ನು ಕೂಡಾ ರಾಜಾರೋಷವಾಗಿ ಮಾರುತ್ತಿದ್ದಾರೆ. ಜನ ಕೂಡಾ ತಮ್ಮ ಮನೆಯ ಬೀದಿಗಳ ಕೊನೆಯಲ್ಲೇ ಸಿಗೋ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ ಕೊಂಡು ಆರಾಮಾಗಿದ್ದಾರೆ. ಆದ್ರೆ ಮಾರ್ಕೆಟ್​ನಲ್ಲಿರಲಿ, ಬೀದಿ ಬದಿಯಲ್ಲಿರಲಿ ಸಾಮಾಜಿಕ ಅಂತರದ ಬಗ್ಗೆ ಗಮನವಿಲ್ಲ ಎನ್ನುವುದೇ ಆತಂಕದ ವಿಚಾರ. ಒಟ್ನಲ್ಲಿ ಯಾವ ನಿಯಮ ಮಾಡಿದ್ರೂ ನಮ್ಮ ಜನ ರಂಗೋಲಿ ಕೆಳಗೆ ತೂರುವ ದಾರಿ ಹುಡುಕಿಯೇ ಹುಡುಕ್ತಾರೆ ಅನ್ನೋದೂ ಸತ್ಯವೇ.
First published: