Nirmala Sitharaman: ಇಂದು ಸಂಜೆ 4 ಗಂಟೆಗೆ ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ವಿವರ

Minister of Finance of India: ಪ್ರಧಾನಿ ಶೀರ್ಷಿಕೆಯೊಂದಿಗೆ ಖಾಲಿ ಪುಟವನ್ನು ನಮಗೆ ಕೊಟ್ಟಿದ್ದಾರೆ, ಖಾಲಿ ಬಿಟ್ಟ ಪುಟವನ್ನು ಇಂದು ಹಣಕಾಸು ಸಚಿವರು ಭರ್ತಿ ಮಾಡುವುದನ್ನು ನಾವು ಎದುರುನೋಡುತ್ತಿದ್ದೇವೆ. ಸರ್ಕಾರವು ಆರ್ಥಿಕತೆಗೆ ಹೆಚ್ಚುವರಿಯಾಗಿ ನೀಡುವ ಪ್ರತಿಯೊಂದು ರೂಪಾಯಿಯನ್ನೂ ನಾವು ಎಚ್ಚರಿಕೆಯಿಂದ ಎಣಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.

MAshok Kumar | news18-kannada
Updated:May 13, 2020, 1:14 PM IST
Nirmala Sitharaman: ಇಂದು ಸಂಜೆ 4 ಗಂಟೆಗೆ ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ವಿವರ
ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್.
  • Share this:
ನವ ದೆಹಲಿ (ಮೇ 13); ಸುದೀರ್ಘ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು ಇದರ ಚೇತರಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 20 ಲಕ್ಷ ಕೋಟಿ ಮೌಲ್ಯದ ಎರಡನೇ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಈ ಪ್ಯಾಕೇಜಿನ ಮಾಹಿತಿಯನ್ನು ಇಂದು ಸಂಜೆ 4 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ.

ನಿನ್ನೆ ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ, ಭಾರತದ ಜಿಡಿಪಿಯ ಶೇಕಡಾ 10 ರಷ್ಟು ಅಂದರೆ 20 ಲಕ್ಷ ಕೋಟಿ ರೂ.ಗಳನ್ನು ಆರ್ಥಿಕ ಮತ್ತು ವಿತ್ತೀಯ ಕ್ರಮಗಳಲ್ಲಿ 50 ದಿನಗಳ ಕೊರೋನಾ ಲಾಕ್‌ಡೌನ್‌ನಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ಬೆಂಬಲಿಸಲು ಘೋಷಿಸಿದರು.

ಈ ಪ್ಯಾಕೇಜ್‌ನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶವು ಲಾಕ್‌ಡೌನ್‌ಗೆ ಮೊರೆಹೋದ ಕೆಲವು ದಿನಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಘೋಷಿಸಿದ್ದ 1.74 ಲಕ್ಷ ಕೋಟಿ ರೂ.ಗಳ ನಿಧಿಯನ್ನು ಒಳಗೊಂಡಿದೆ.

ಪ್ರಧಾನಿ ಮೋದಿ ನಿನ್ನೆ ರಾತ್ರಿಯೇ ಪ್ಯಾಕೇಜಿನ ವಿವರಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ ಎಂದು ಹೇಳಿದ್ದರು. ಪ್ರಧಾನಿಯ ಭಾಷಣದ ನಂತರದ ಸರಣಿ ಟ್ವೀಟ್‌ಗಳಲ್ಲಿ  ಹಣಕಾಸು ಸಚಿವರು ಇದನ್ನು ಕೇವಲ ಹಣಕಾಸಿನ ಪ್ಯಾಕೇಜ್ ಮಾತ್ರವಲ್ಲದೆ “ಸುಧಾರಣಾ ಪ್ರಚೋದನೆ ಮತ್ತು ಮನಸ್ಥಿತಿಯ ಕೂಲಂಕುಷ ಪರೀಕ್ಷೆ” ಎಂದು ಕರೆದಿದ್ದಾರೆ.“#ಆತ್ಮನಿರ್ಭರಭಾರತ್ ಅಭಿಯಾನ ಕೇವಲ ಹಣಕಾಸಿನ ಪ್ಯಾಕೇಜ್ ಆಗಿರಬಾರದು, ಅದು ಸುಧಾರಣಾ ಪ್ರಚೋದನೆ, ಮನಸ್ಥಿತಿ ಕೂಲಂಕುಷ ಪರೀಕ್ಷೆ ಮತ್ತು ಆಡಳಿತದಲ್ಲಿ ಹೆಚ್ಚಿನ ಒತ್ತು ನೀಡಲಿದೆ”ಎಂದು ಅರ್ಥ ಸಚಿವೆ ಸೀತಾರಾಮನ್ ತನ್ನ ಟ್ವಿಟರ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಶಿರ್ಷಿಕೆಯೊಂದಿಗೆ ಖಾಲಿ ಪುಟ ಕೊಟ್ಟ ಪ್ರಧಾನಿ: ಪಿ. ಚಿದಂಬರಂ ಟೀಕೆ

ಪ್ರಧಾನಿ ಶೀರ್ಷಿಕೆಯೊಂದಿಗೆ ಖಾಲಿ ಪುಟವನ್ನು ನಮಗೆ ಕೊಟ್ಟಿದ್ದಾರೆ, ಖಾಲಿ ಬಿಟ್ಟ ಪುಟವನ್ನು ಇಂದು ಹಣಕಾಸು ಸಚಿವರು ಭರ್ತಿ ಮಾಡುವುದನ್ನು ನಾವು ಎದುರುನೋಡುತ್ತಿದ್ದೇವೆ. ಸರ್ಕಾರವು ಆರ್ಥಿಕತೆಗೆ ಹೆಚ್ಚುವರಿಯಾಗಿ ನೀಡುವ ಪ್ರತಿಯೊಂದು ರೂಪಾಯಿಯನ್ನೂ ನಾವು ಎಚ್ಚರಿಕೆಯಿಂದ ಎಣಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.ಯಾರಿಗೆ ಏನು ಸಿಗುತ್ತದೆ? ಎಂಬುದನ್ನೂ ನಾವು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ. ಬಡವರು, ಹಸಿವಿನಿಂದ ಕಂಗೆಟ್ಟಿರುವವರು ಮತ್ತು ಕೆಲಸದ ಸ್ಥಳಗಳಿಂದ ಬೇರ್ಪಟ್ಟು ನೂರಾರು ಕಿಲೋ ಮೀಟರ್ ದೂರ ನಡೆದು ತವರು ರಾಜ್ಯಗಳಿಗೆ ತೆರಳಿರುವ ವಲಸೆ ಕಾರ್ಮಿಕರಿಗೆ ಏನು ಸಿಗಬಹುದು ಎಂಬುದನ್ನು ಮೊದಲು ಗಮನಿಸುತ್ತೇವೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : PM Narendra Modi Speech: 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್, ಲಾಕ್​ಡೌನ್​ ವಿಸ್ತರಣೆ; ಮೋದಿ ಘೋಷಣೆ
First published: May 13, 2020, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading