ಭಾರತದಿಂದ ಅಬುಧಾಬಿಗೆ ಪ್ರಯಾಣ ಬೆಳೆಸುವ ಯುನೈಟೆಡ್ ಅರಬ್ ಎಮಿರೇಟ್ಸ್ ನಿವಾಸಿಗಳು 12 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗಬೇಕು ಎಂದು ಎತಿಹದ್ ಏರ್ವೇಸ್ ಹೇಳಿದೆ.
ಅಬುಧಾಬಿಗೆ ಬಂದ ನಂತರ, ಜನರು ಕ್ವಾರಂಟೈನ್ ಅವಧಿಯಲ್ಲಿ ವೈದ್ಯಕೀಯವಾಗಿ ಅನುಮೋದಿತ ರಿಸ್ಟ್ ಬ್ಯಾಂಡ್ ಧರಿಸಬೇಕು ಮತ್ತು ಇದು ಕಡ್ಡಾಯವಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಅಬುಧಾಬಿ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಎಲ್ಲಾ ರೀತಿಯ ಪ್ರಕ್ರಿಯೆ ಮುಗಿಸಿದ ನಂತರ ಈ ರಿಸ್ಟ್ ಬ್ಯಾಂಡ್ ಅನ್ನು ನೀಡಲಾಗುವುದು. ಅಬುದಾಬಿಗೆ ಬಂದ ನಂತರ ಆರನೇ ಮತ್ತು ಹನ್ನೊಂದನೇ ದಿನಗಳಲ್ಲಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
https://twitter.com/Peer42437721/status/1424016025436053515
ಯುಎಇಯ ಅತಿದೊಡ್ಡ ವಿಮಾನಯಾನ ಸಂಸ್ಥೆ ಮತ್ತು ಫ್ಲ್ಯಾಗ್ ಕ್ಯಾರಿಯರ್ ಎಮಿರೇಟ್ಸ್, ಟ್ವಿಟರ್ನಲ್ಲಿ , "ದುಬೈ ನಿವಾಸ ವೀಸಾ ಹೊಂದಿರುವವರು ಜಿಡಿಆರ್ಎಫ್ಎ ಅನುಮೋದನೆಯನ್ನು ಪ್ರಸ್ತುತಪಡಿಸುವವರೆಗೆ ಪ್ರಯಾಣಿಸಬಹುದು, ನಿರ್ಗಮನದ 48 ಗಂಟೆಗಳಲ್ಲಿ ನೆಗಿಟಿವ್ ಪಿಸಿಆರ್ ಪರೀಕ್ಷೆ ಮತ್ತು ಕ್ಷಿಪ್ರ ಪಿಸಿಆರ್ ಪರೀಕ್ಷೆಯನ್ನು ಪ್ರಯಾಣಕ್ಕೆ 04 ಗಂಟೆಗಳ ಮೊದಲು ಮಾಡಲಾಗುವುದು ಹಾಗೂ ಆ ಫಲಿತಾಂಶವನ್ನು ಪರಿಗಣಿಸಲಾಗುವುದು’’ ಎಂದು ಹೇಳಿದೆ.
https://twitter.com/Peer42437721/status/1423974540233768961
ಇಂಡಿಗೊ ಏರ್ಲೈನ್ಸ್ ಕೂಡ ನವೀಕೃತ ಮಾರ್ಗಸೂಚಿಗಳನ್ನು ವಿವರಿಸುವ ನೋಟಿಸ್ಅನ್ನು ಟ್ರಾವೆಲ್ ಏಜೆಂಟರಿಗೆ ಕಳುಹಿಸಿದೆ.
ಏಪ್ರಿಲ್ ಅಂತ್ಯದಲ್ಲಿ, ಕರೋನವೈರಸ್ ಸಾಂಕ್ರಾಮಿಕದ ಮಾರಣಾಂತಿಕ ಎರಡನೇ ಅಲೆ ಭಾರತ ದೇಶದಲ್ಲಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಯುಎಇ ಭಾರತದ ಪ್ರವಾಸಿಗರಿಗೆ ತನ್ನ ದೇಶಕ್ಕೆ ಪ್ರವೇಶಿಸುವುದನ್ನು ನಿಷೇದಿಸಿತ್ತು.
ದುಬೈ ಅಲ್ಲದೇ ಅನೇಕ ದೇಶಗಳು ಭಾರತದಿಂದ ಬರುವ ಪ್ರಯಾಣಿಕರನ್ನು ನಿಷೇಧಿಸಿದ್ದವು, ಭಾರತದಲ್ಲಿ ಕಂಡು ಬಂದ ಕೊರೋನಾ ರೂಪಾಂತರ ವೈರಸ್ ಮೊದಲ ಅಲೆಗಿಂತಲೂ ಹೆಚ್ಚಿನ ಹಾನಿಯನ್ನು ಎರಡನೇ ಅಲೆಯ ವೇಳೆ ಮಾಡಿತ್ತು. ಆದ ಕಾರಣ ಅನೇಕ ದೇಶಗಳು ಈ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದವು.
ಇದನ್ನೂ ಓದಿ: ಏಸುವಿನ ಹೆಸರು ಬಳಕೆ; ಮಲಯಾಳಂ ನಿರ್ದೇಶಕ ನಾದಿರ್ ಶಾ ವಿವಾದ ಸುಳಿಯಲ್ಲಿ!
ಅಲ್ಲದೇ ಅಮೇರಿಕಾದಲ್ಲಿಯೂ ಸಹ ಎರಡನೇ ಅಲೆ ಸಾಕಷ್ಟು ಹಾನಿ ಉಂಟು ಮಾಡಿದ್ದು, ಅನೇಕ ದೇಶಗಳು ಭಾರತದ ಕಡೆ ಬೊಟ್ಟು ಮಾಡುತ್ತಿರುವುದು ದುರದೃಷ್ಟಕರ ಎಂದೇ ಹೇಳಬಹುದು. ಈಗ ದುಬೈ ಕೂಡ ಭಾರತದ ಪ್ರಯಾಣಿಕರಿಗೆ ಬೇರೆಯದೇ ರೀತಿಯಲ್ಲಿ ನಿರ್ಬಂಧ ಹೇರಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ