ಕೊರೋನಾ ದುಡ್ಡಲ್ಲಿ ಲ್ಯಾಂಬೋರ್ಗಿನಿ ಕಾರ್​ ಖರಿದೀಸಿದ ಮಹಾ ಪ್ರಚಂಡ

ಪೇಚೆಕ್​​ ಪ್ರೊಟೆಕ್ಷನ್​​ ಪ್ರೋಗ್ರಾಮ್​​ ಲೋನ್​​ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಏನಾದರೂ ವ್ಯವಹಾರ ಮಾಡಲು ನೀಡಲಾಗುತ್ತಿದೆ. ಕೊರೋನಾದಿಂದ ತತ್ತರಿಸಿದ ಜನ ತಮ್ಮ ಬದುಕು ಕಟ್ಟಿಕೊಳ್ಳಲು ಸರ್ಕಾರ ಪೇಚೆಕ್​ ಪ್ರೊಟೆಕ್ಷನ್​​ ಪ್ರೋಗ್ರಾಮ್ ಲೋನ್​​ ಬ್ಯಾಂಕುಗಳಿಂದ ಕೊಡಿಸುತ್ತಿದೆ.

news18-kannada
Updated:July 29, 2020, 5:49 PM IST
ಕೊರೋನಾ ದುಡ್ಡಲ್ಲಿ ಲ್ಯಾಂಬೋರ್ಗಿನಿ ಕಾರ್​ ಖರಿದೀಸಿದ ಮಹಾ ಪ್ರಚಂಡ
ಲ್ಯಾಂಬೋರ್ಗಿನಿ ಕಾರ್​​
  • Share this:
ಫ್ಲಾರಿಡ(ಜು.29): ಮಹಾ ಪ್ರಚಂಡನೋರ್ವ ಕೊರೋನಾ ಹಣದಲ್ಲಿ ಲ್ಯಾಂಬೋರ್ಗಿನಿ ಕಾರ್​​ ಸೇರಿದಂತೆ ಹಲವು ಐಷಾರಾಮಿ ಖರಿದೀಸಿದ ಘಟನೆ ಅಮೆರಿಕದ ಫ್ಲಾರಿಡಲ್ಲಿ ನಡೆದಿದೆ.

ಖತರ್ನಾಕ್​​​​ ವ್ಯಕ್ತಿಯೋರ್ವ ಫ್ಲಾರಿಡದ ಬ್ಯಾಂಕ್​​ ಪೇಚೆಕ್​​​ ಪ್ರೊಟೆಕ್ಷನ್​​​​ ಪ್ರೋಗ್ರಾಮ್​​ ಲೋನ್​​ ಪಡೆದಿದ್ದ. ಬ್ಯಾಂಕ್​​ನವರು ಈತನಿಗೆ ಸುಮಾರು 4 ಮಿಲಿಯನ್​​​ ಡಾಲರ್ ಸಾಲ ನೀಡಿದ್ದರು. ಈಗ ಬ್ಯಾಂಕ್​ ಸಾಲ ನೀಡಿದ ಹಣದಲ್ಲಿ ವ್ಯಕ್ತಿ ಲ್ಯಾಂಬೋರ್ಗಿನಿ ಕಾರು ಖರೀದಿಸಿ ಜೈಲು ಸೇರಿದ್ಧಾನೆ.

ಪೇಚೆಕ್​​ ಪ್ರೊಟೆಕ್ಷನ್​​ ಪ್ರೋಗ್ರಾಮ್​​ ಲೋನ್​​ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಏನಾದರೂ ವ್ಯವಹಾರ ಮಾಡಲು ನೀಡಲಾಗುತ್ತಿದೆ. ಕೊರೋನಾದಿಂದ ತತ್ತರಿಸಿದ ಜನ ತಮ್ಮ ಬದುಕು ಕಟ್ಟಿಕೊಳ್ಳಲು ಸರ್ಕಾರ ಪೇಚೆಕ್​ ಪ್ರೊಟೆಕ್ಷನ್​​ ಪ್ರೋಗ್ರಾಮ್ ಲೋನ್​​ ಬ್ಯಾಂಕುಗಳಿಂದ ಕೊಡಿಸುತ್ತಿದೆ.

ಆದರೀಗ, ಡೇವಿಡ್​​ ಹೈನ್ಸ್​ ಎಂಬಾತ ಹೀಗೆ ಸರ್ಕಾರವನ್ನು ಕೊರೋನಾ ಹೆಸರಿನಲ್ಲಿ ಮೋಸ ಮಾಡಿದ್ದಾನೆ. ಹಲವು ಕಂಪನಿಗಳ ಪರವಾಗಿ ಡೇವಿಡ್​ ಹೈನ್ಸ್​​​ 13.5 ಮಿಲಿಯನ್​​ ಯುಎಸ್​ ಡಾಲರ್​​ ಪಿಪಿಪಿ ಲೋನ್​ಗೆ ಅಪ್ಲೈ ಮಾಡಿದ್ದ. ಇದೇ ದುಡ್ಡಿನಿಂದ ಈಗ ಐಷರಾಮಿ ವಸ್ತುಗಳನ್ನು ಖರಿದೀಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ಧಾನೆ.

ಇನ್ನು, ಡೇವಿಡ್​ ಹೈನ್ಸ್​ ಕಂಪನಿಯ ಉದ್ಯೋಗಿಗಳಿಗೆ ಸಂಬಳ ನೀಡಿರುವುದಾಗಿ ಸುಳ್ಳು ಹೇಳಿದ್ಧಾನೆ. ಈತನ ವಿರುದ್ಧ ಯುಎಸ್​​ ಪೊಲೀಸರು ಬ್ಯಾಂಕ್​​ ಫ್ರಾಡ್​​ ಅಡಿ ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚುನಾವಣೆ ಸೋತಾಗ ಅಧಿಕಾರಕ್ಕಾಗಿ ಮನೆ ಬಾಗಿಲಿಗೆ ಬಂದವರು ಯಾರು? - ಕಾಂಗ್ರೆಸ್​​ಗೆ ಎಚ್​​.ಡಿ ಕುಮಾರಸ್ವಾಮಿ ಪ್ರಶ್ನೆಡೇವಿಡ್​​​ ಹೈನ್ಸ್​​ಗೆ ಬ್ಯಾಂಕ್​ ಆಫ್​​ ಅಮೆರಿಕಾ ಸಾಲ ನೀಡಿದೆ. ಈಗ ಈತನ ಬ್ಯಾಂಕ್​​ ಅಕೌಂಟ್​​ ಸೀಜ್​ ಮಾಡಲಾಗಿದೆ. ಇವನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ಧಾರೆ.
Published by: Ganesh Nachikethu
First published: July 29, 2020, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading