HOME » NEWS » Coronavirus-latest-news » FLIGHTS TO KOLKATA AIRPORT FROM 6 CITIES INCLUDING DELHI AND MUMBAI BANNED FROM JULY 6 19 RH

ದೆಹಲಿ, ಮುಂಬೈ ಸೇರಿ 6 ನಗರಗಳಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಜು.6ರಿಂದ 19ರವರೆಗೆ ವಿಮಾನ ಹಾರಾಟ ನಿಷೇಧ

ಕೋವಿಡ್-19 ಹಾಟ್​ಸ್ಪಾಟ್​ಗಳಾದ ದೆಹಲಿ, ಮುಂಬೈ, ಪುಣೆ, ನಾಗಪುರ, ಚೆನ್ನೈ, ಇಂಧೋರ್, ಅಹಮದಾಬಾದ್ ಮತ್ತು ಸುರತ್​ನಿಂದ ಎರಡು ವಾರಗಳ ಕಾಲ ಪಶ್ಚಿಮಬಂಗಾಳಕ್ಕೆ ಯಾವುದೇ ವಿಮಾನಗಳ ಹಾರಾಟ ನಡೆಸದಂತೆ ಮಮತಾ ಬ್ಯಾನರ್ಜಿ ಅವರು ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದರು

news18-kannada
Updated:July 4, 2020, 6:06 PM IST
ದೆಹಲಿ, ಮುಂಬೈ ಸೇರಿ 6 ನಗರಗಳಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಜು.6ರಿಂದ 19ರವರೆಗೆ ವಿಮಾನ ಹಾರಾಟ ನಿಷೇಧ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಪ್ರಯಾಣಿಕರೇ, ಜುಲೈ 6ರಿಂದ 19ರವರೆಗೆ ದೆಹಲಿ, ಮುಂಬಯಿ, ಪುಣೆ, ನಾಗಪುರ, ಚೆನ್ನೈ ಮತ್ತು ಅಹಮದಾಬಾದ್​ನಿಂದ ಕೊಲ್ಕತ್ತಾಗೆ ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದರೆ ನಿಮ್ಮ ದಿನಾಂಕವನ್ನು ಬದಲಿಸಿಕೊಳ್ಳಿ. ಏಕೆಂದರೆ ಈ ಆರು ನಗರಗಳಿಂದ ಕೊಲ್ಕತ್ತಾಗೆ ವಿಮಾನ ಹಾರಾಟವನ್ನು ಜುಲೈ 19ರವರೆಗೆ ರದ್ದು ಮಾಡಲಾಗಿದೆ.

ಈ ಆರು ನಗರದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಸ್ಥಳಗಳಿಂದ ವಿಮಾನ ಹಾರಾಟವನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರಮುಖೇನ ಮನವಿ ಮಾಡಿಕೊಂಡಿದ್ದರು.

ಕೊಲ್ಕತ್ತಾ ವಿಮಾನ ನಿರ್ವಹಣಾ ಪ್ರಾಧಿಕಾರ ಶನಿವಾರ ಈ ಸಂಬಂಧ ಟ್ವಿಟರ್​ನಲ್ಲಿ ಶನಿವಾರ ಅಧಿಕೃತ ಘೋಷಣೆ ಹೊರಡಿಸಿದೆ. ಜುಲೈ 6-19 ರಿಂದ ದೆಹಲಿ, ಮುಂಬೈ, ಪುಣೆ, ನಾಗಪುರ, ಚೆನ್ನೈ ಮತ್ತು ಅಹಮದಾಬಾದ್​ನಿಂದ ಪಶ್ಚಿಮ ಬಂಗಾಳ ರಾಜಧಾನಿಗೆ ಯಾವುದೇ ವಿಮಾನಗಳು ಹಾರಾಡುವುದಿಲ್ಲ ಎಂದು ತಿಳಿಸಿದೆ.

ಮೂಲಗಳ ಪ್ರಕಾರ, ನಾಗರಿಕ ವಿಮಾನಯಾನ ಸಚಿವಾಲಯವೂ ಈಗಾಗಲೇ ಈ ಸಂಬಂಧ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Vande Bharat Mission: ವಂದೇ ಭಾರತ್​ ಮಿಷನ್​ನಡಿ 137 ದೇಶಗಳಿಂದ 5.3 ಲಕ್ಷ ಭಾರತೀಯರು ವಾಪಾಸ್!

ಕೋವಿಡ್-19 ಹಾಟ್​ಸ್ಪಾಟ್​ಗಳಾದ ದೆಹಲಿ, ಮುಂಬೈ, ಪುಣೆ, ನಾಗಪುರ, ಚೆನ್ನೈ, ಇಂಧೋರ್, ಅಹಮದಾಬಾದ್ ಮತ್ತು ಸುರತ್​ನಿಂದ ಎರಡು ವಾರಗಳ ಕಾಲ ಪಶ್ಚಿಮಬಂಗಾಳಕ್ಕೆ ಯಾವುದೇ ವಿಮಾನಗಳ ಹಾರಾಟ ನಡೆಸದಂತೆ ಮಮತಾ ಬ್ಯಾನರ್ಜಿ ಅವರು ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದರು
Published by: HR Ramesh
First published: July 4, 2020, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories