ಬೆಳಗಾವಿಯಲ್ಲಿ ತೀವ್ರಗೊಂಡ ಕೊರೋನಾ: ಐದು ತಾಲೂಕುಗಳು ಮಾತ್ರ ಸಂಪೂರ್ಣ ಲಾಕ್​ಡೌನ್​

ಇನ್ನು, ಬೆಳಗಾವಿ ನಗರದಲ್ಲಿಯೂ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರದಲ್ಲಿ ಆತಂಕವನ್ನು ಮೂಡಿಸಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಸಂಖ್ಯೆ ಇದುವರೆಗೂ 500 ಗಡಿಯನ್ನು ದಾಟಿದೆ. ನಿನ್ನೆ ಒಂದೇ ದಿನ 64 ಹೊಸ ಕೇಸ್ ಪತ್ತೆಯಾಗಿವೆ. ಹಾಗೆಯೇ ಸದ್ಯ ಕೇಔಲ 183 ಆ್ಯಕ್ಟೀವ್​ ಕೇಸ್ ಇವೆ.

news18-kannada
Updated:July 15, 2020, 7:11 AM IST
ಬೆಳಗಾವಿಯಲ್ಲಿ ತೀವ್ರಗೊಂಡ ಕೊರೋನಾ: ಐದು ತಾಲೂಕುಗಳು ಮಾತ್ರ ಸಂಪೂರ್ಣ ಲಾಕ್​ಡೌನ್​
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ(ಜು.15): ಕೊರೋನಾ ವೈರಸ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಲಾಕ್​​ಡೌನ್ ಅಸ್ತ್ರವನ್ನು ಬಳಸಲಾಗಿದೆ. ಆದರೆ, ಬೆಳಗಾವಿಯಲ್ಲಿ ಮಾತ್ರ ಇಡೀ ಜಿಲ್ಲೆ ಲಾಕ್​​ಡೌನ್ ಆಗಿಲ್ಲ. ಬದಲಿಗೆ ಕೇವಲ 5 ತಾಲೂಕುಗಳನ್ನು 7 ದಿನ ಲಾಕ್​​ಡೌನ್ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ಇನ್ನು, ಬೆಳಗಾವಿ ನಗರದಲ್ಲಿಯೂ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರದಲ್ಲಿ ಆತಂಕವನ್ನು ಮೂಡಿಸಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಸಂಖ್ಯೆ ಇದುವರೆಗೂ 500 ಗಡಿಯನ್ನು ದಾಟಿದೆ. ನಿನ್ನೆ ಒಂದೇ ದಿನ 64 ಹೊಸ ಕೇಸ್ ಪತ್ತೆಯಾಗಿವೆ. ಹಾಗೆಯೇ ಸದ್ಯ ಕೇಔಲ 183 ಆ್ಯಕ್ಟೀವ್​ ಕೇಸ್ ಇವೆ.

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ನಿಪ್ಪಾಣಿ, ಗೋಕಾಕ್ ಹಾಗೂ ಮೂಡಲಗಿ ತಾಲೂಕುಗಳನ್ನು ನಿನ್ನೆಯಿಂದಲೇ 7 ದಿನಗಳ ಕಾಲ ಲಾಕ್​​ಡೌನ್ ಮಾಡಲಾಗಿದೆ. ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಸೋಂಕು ವ್ಯಾಪ್ತಿಸುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲಾಢಳಿತ ನಿರ್ಧಾರವನ್ನು ಕೈಗೊಂಡಿದೆ

ಜಿಲ್ಲೆಯ ಉತ್ತರ ಮತಕ್ಷೇತ್ರ ಶಾಸಕ ಅನಿಲ್ ಬೆನಕೆಗೆ ಸಹ ಮಂಗಳವಾರ ಕೊರೋನಾ ಸೋಂಕು ಇರೋದು ದೃಢವಾಗಿದೆ. ಕಳೆದ 5 ದಿನಗಳ ಹಿಂದೆಯೇ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಶಾಸಕರು ಸ್ವತಃ ಹೋಂ ಕ್ವಾರಂಟೈನ್ ಆಗಿದ್ದರು. ಜತೆಗೆ ಮೊನ್ನೆ ನಡೆದ ಹುಟ್ಟು ಹಬ್ಬದ ಆಚರಣೆಯಲ್ಲಿ ಸಹ ಪಾಲ್ಗೊಂಡಿರಲಿಲ್ಲ. ಸದ್ಯ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಕ್ವಾರಂಟೈನ್ ಆಗಿರೋ ಶಾಸಕರು ತಮ್ಮ ಬೆಂಬಲಿಗೆ ನನಗೆ ಯಾವುದೇ ತೊಂದರೆ ಇಲ್ಲ. ಶೀಘ್ರದಲ್ಲಿಯೇ ಗುಣಮುಖನಾಗುತ್ತೇನೆ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಐದು ತಾಲೂಕುಗಳನ್ನು ಲಾಕ್​​ಡೌನ್ ಮಾಡಲಾಗಿದ್ದು, ಬೆಳಗಾವಿ ತಾಲೂಕಿಗೆ ಈ ನಿಯಮ ಅನ್ವಯವಾಗಿಲ್ಲ. ಹೀಗಾಗಿ ಮದ್ಯಪ್ರಿಯನೋರ್ವ ಮದ್ಯದ ಅಂಗಡಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ. ದೇಶ ಕೊರೋನಾ ವೈರಸ್ ಎಂಬ ಮಹಮಾರಿಗೆ ತತ್ತರಿಸಿದೆ. ಆದರೇ ನನಗೆ ಮದ್ಯಪಾನ ಸಿಗುವುದರಲ್ಲಿ ಯಾವುದೇ ವ್ಯತ್ಯಾಸ ಆಗೊಲ್ಲ ಎನ್ನುವ ಸಂಭ್ರಮದಲ್ಲಿ ಪಟಾಕಿ ಸಿಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಲಾಕ್​ಡೌನ್; ಮೆಡಿಕಲ್ಸ್ ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಮಧ್ಯಾಹ್ನ 12ಗಂಟೆಯೊಳಗೆ ಮುಚ್ಚಬೇಕುಜಿಲ್ಲೆಯ ಬಿಮ್ಸ್ ಆಸ್ಪತ್ರೆ ಎಲ್ಲಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವ ಆಸ್ಪತ್ರೆಯಾಗಿದೆ. ಇಲ್ಲಿ ಕೆಲಸ ಮಾಡೋ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿ ಈಗಾಗಲೇ 9ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢವಾಗಿದೆ. ಇನ್ನೂ ಸೋಂಕಿತ ವ್ಯಕ್ತಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ ಸಹ ಹೋಂ ಕ್ವಾರಂಟೈನ್ ಆಗಿದ್ದಾರೆ.
Published by: Ganesh Nachikethu
First published: July 15, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading