ಕೊರೋನಾ ಸೋಂಕು: ಜುಬಿಲೆಂಟ್ಸ್ ಕಾರ್ಖಾನೆ ಉದ್ಯೋಗಿ ಡಿಸ್​ಚಾರ್ಜ್; ಇಂದು ಹೊಸ 5 ಕೇಸ್ ಪತ್ತೆ

ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿ P52 ಸೋಂಕಿತ ಬರೆದ ಪತ್ರವನ್ನ ಜಿಲ್ಲಾಧಿಕಾರಿಯವರು ಬಹಿರಂಗಪಡಿಸಿದ್ದಾರೆ.

news18-kannada
Updated:April 10, 2020, 9:00 PM IST
ಕೊರೋನಾ ಸೋಂಕು: ಜುಬಿಲೆಂಟ್ಸ್ ಕಾರ್ಖಾನೆ ಉದ್ಯೋಗಿ ಡಿಸ್​ಚಾರ್ಜ್; ಇಂದು ಹೊಸ 5 ಕೇಸ್ ಪತ್ತೆ
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ
  • Share this:
ಮೈಸೂರು(ಏ. 10): ಉದ್ಯಾನನಗರಿಯ ಪಾಲಿಗೆ ಮೃತ್ಯುಕೂಪವಾಗಿರುವ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ಇಂದು ಸಹ 5 ಹೊಸ ಕೊರನಾ ಪಾಸಿಟಿವ್ ಪತ್ತೆಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ 42 ಪಾಸಿಟಿವ್‌ ಪ್ರಕರಣ ಪತ್ತೆಯಾದಂತಾಗಿದೆ. ಈ ಪೈಕಿ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. 41 ಪ್ರಕರಣಗಳು ಆಕ್ಟಿವ್‌ ಆಗಿವೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 3,449 ಕೊರೋನಾ ನಿಗಾ ಪ್ರಕರಣಗಳಿವೆ. 569 ಮಂದಿಯ ಪರೀಕ್ಷೆಯಾಗಿದೆ. ಪರೀಕ್ಷೆಗೊಳಪಟ್ಟ 527 ಮಂದಿಯಲ್ಲಿ ಸೋಂಕು ಇಲ್ಲವೆಂಬುದು ದೃಢಪಟ್ಟಿದೆ. 42 ಮಂದಿಗೆ ಪಾಸಿಟಿವ್ ಬಂದಿದೆ. 42 ಮಂದಿಗೆ ಪಾಸಿಟಿವ್ ಬಂದಿದೆ. ಆಕ್ಟಿವ್ ಪಾಸಿಟಿವ್ ಪ್ರಕರಣಗಳಲ್ಲಿ ಎಲ್ಲಾ 41 ಮಂದಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದೇಶದಿಂದ ಬಂದು ಮನೆಯಲ್ಲೇ ನಿಗಾದಲ್ಲಿ ಇರುವವರ ಸಂಖ್ಯೆ – 1577 ,  14 ದಿನಗಳ ನಿಗಾ ಮುಗಿಸಿದವರು – 1831 ಮಂದಿ ಇದ್ದು ದಿನೆ ದಿನೆ ಸಂಖ್ಯೆ ಹೆಚ್ಚಾಗುತ್ತಲೆ ಇದೆ.

ಇನ್ನು ಇಂದು ಪತ್ತೆಯಾದ 5 ಪ್ರಕರಣಗಳು ಜುಬಿಲೆಂಟ್ಸ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳು. ನೌಕರರ ಪತ್ನಿ, ಪುತ್ರ ಸೇರಿದಂತೆ ಹೊಸ 5 ಮಂದಿಗೆ ಸೋಂಕು ದೃಢವಾಗಿದೆ. ಮೈಸೂರಿನಲ್ಲಿ 42ಕ್ಕೇರಿದ ಕೊರೊನಾ ಸೋಂಕಿತರರಲ್ಲಿ 8 ವರ್ಷ ಮಗುವೂ ಇದೆ. ಈ ಹಿನ್ನೆಲೆಯಲ್ಲಿ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದ್ದು ಜೀವಭಯದಲ್ಲಿ ಬದುಕುವಂತಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಒಂದೇ ದಿನ ಮೂರು ಕೊರೊನಾ ಪಾಸಿಟಿವ್ ಕೇಸ್; ಒಂದೇ ಕುಟುಂಬದ ನಾಲ್ವರಿಗೆ ಸೋಂಕು

ಮೈಸೂರಿನಲ್ಲಿ ಡಿಸ್​ಚಾರ್ಜ್ ಆಗಿರುವವರ ಸಂಖ್ಯೆ ಎರಡಾಗಿದೆ. ಮೊದಲ ಸೋಂಕಿತನಾಗಿದ್ದ ಜುಬಿಲೆಂಟ್ಸ್​ನ ಉದ್ಯೋಗಿ ಹಾಗೂ ಪೇಶಂಟ್‌ ನಂ 52 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಡೀ ಜುಬಿಲೆಂಟ್ಸ್ ಕಾರ್ಖಾನೆಗೆ ಸೋಂಕು ಹರಡಿಸಿದ್ದ P52 ಇಂದು  ಮೈಸೂರಿನ ಕೋವಿಡ್-19 ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದು 14 ದಿನಗಳ ಕಾಲ ಪ್ರತ್ಯೇಕವಾಗಿರಲಿದ್ದಾರೆ. ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್ ಅಧಿಕೃತ ಮಾಹಿತಿ  ನೀಡಿದ್ದಾರೆ.

ಆಸ್ಪತ್ರೆಯಿಂದ ಡಿಸ್ಟಾರ್ಜ್‌ ಆದ P52 ವ್ಯಕ್ತಿಯು ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.  ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿ P52 ಸೋಂಕಿತ ಬರೆದ ಪತ್ರವನ್ನ ಜಿಲ್ಲಾಧಿಕಾರಿಯವರು ಬಹಿರಂಗಪಡಿಸಿದ್ದಾರೆ.

ನನಗೆ 10 ದಿನಗಳ ಹಿಂದೆ ಜ್ವರ ಇತ್ತು. ಮೊದಲು ಸ್ಥಳಿಯ ಕ್ಲಿನಿಕ್‌ಗೆ ತೋರಿಸಿದ್ದೆ. ಮಾರ್ಚ್ 21ರಂದು ನಾನು ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರ ಮಾರ್ಚ್‌ 25ರಂದು ಕೆ.ಆರ್‌. ಆಸ್ಪತ್ರೆಗೆ ಕರೆತಂದರು. ನನಗೆ ಎಲ್ಲ ರೀತಿಯ ಪರೀಕ್ಷೆ ಮಾಡಿದರು. ಮಾರ್ಚ್ 30 ರಂದು ನನ್ನನ್ನ ಕೋವಿಡ್ ಆಸ್ಪತ್ರೆಗೆ ಕಳುಹಿಸಿದರು. 14 ದಿನಗಳ ಕಾಲ ನನಗೆ ಚಿಕಿತ್ಸೆ ನೀಡಿ ನನ್ನನ್ನು ಗುಣಮುಖರನ್ನಾಗಿ ಮಾಡಿದ್ದಾರೆ. ಕೊರೊನಾ ಪಿಡಿತರನ್ನ ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತದೆ. ಎಲ್ಲರೂ ಸರ್ಕಾರಕ್ಕೆ ಸಹಕಾರ  ನೀಡಿ ಎಂದು ಪತ್ರ ಬರೆದು ಧನ್ಯವಾದ ಹೇಳಿದ P52 ಸೋಂಕಿತ ವ್ಯಕ್ತಿ ತನ್ನನ್ನು ಜುಬಿಲೆಂಟ್ಸ್ ಕಾರ್ಖಾನೆ ನೌಕರ ಎಂದು ಹೇಳಿಕೊಂಡಿದ್ದಾನೆ.ಇದನ್ನೂ ಓದಿ: ಬೆಂಗಳೂರಲ್ಲಿ ಎರಡಲ್ಲ, ಇನ್ನೂ ಹೆಚ್ಚು ವಾರ್ಡ್​ಗಳಲ್ಲಿ ಸೀಲ್​ಡೌನ್ ಸಾಧ್ಯತೆ

ಇವೆಲ್ಲದರ ನಡುವೆ ಮೈಸೂರಿಗೆ ನೂತನ ಉಸ್ತುವಾರಿ ಸಚಿವರ ಆಗಮನವಾಗಿದೆ. ನಿನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಚಿವ ಎಸ್.ಟಿ. ಸೋಮಶೇಖರ್ ಇಲ್ಲಿಗೆ ಬಂದ ದಿನವೇ ಜಿಲ್ಲೆಯ ಅಧಿಕಾರಿಗಳ ತುರ್ತು ಸಭೆ ಕರೆದರು. ನಂತರ ಮಾತನಾಡಿದ ಅವರು, ನನಗೆ ಉಸ್ತುವಾರಿ ಕೊಟ್ಟಿದ್ದಕ್ಕೆ ಸಿಎಂಗೆ ಧನ್ಯವಾದ ಹೇಳ್ತಿನಿ.  ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಿಗೆ ದೊಡ್ಡ ಜವಾಬ್ದಾರಿ ಇದೆ. ಈ ಜವಾಬ್ದಾರಿಯನ್ನ ನಿಭಾಯಿಸುತ್ತೇನೆ. ಎಲ್ಲರ ಸಹಕಾರ ಮುಖ್ಯ. ಲಾಕ್‌ಡೌನ್ ಅನ್ನ ಇನ್ನಷ್ಟು ಬಿಗಿ ಮಾಡಬೇಕಾಗುತ್ತದೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲೆ ಹೆಚ್ಚು ಪ್ರಕರಣ ಇರೋದು. ಹಾಗಾಗಿ ಎಲ್ಲರ ಸಲಹೆ ಪಡೆದು ನಿರ್ಧಾರ ಮಾಡ್ತಿನಿ. ಲಾಕ್‌ಡೌನ್ ಮುಂದುವರೆಸೋ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದು ಸಿಎಂಗೆ ತಿಳಿಸುವೆ. ಲಾಕ್‌ಡೌನ್ ಮುಂದುವರೆಸೋ ಬಗ್ಗೆ ಅವರೇ ತೀರ್ಮಾನ ಮಾಡ್ತಾರೆ ಎಂದರು.

ನನ್ನ ಭೇಟಿಗೆ ಯಾರು ಬರಬೇಡಿ. ಹೂಗುಚ್ಛಗಳನ್ನು ತರಬೇಡಿ. ಬಂದರೂ ಒಬ್ಬರೆ ಬಂದು ಮಾತನಾಡಿ ಹೋಗಿ ಎಂದು ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಮನವಿ ಮಾಡಿ, ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡ್ತಿದೆ ಎಂದು ಎಸ್.ಟಿ. ಸೋಮಶೇಖರ್ ಶ್ಲಾಘನೆ ಮಾಡಿದರು.

First published: April 10, 2020, 9:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading