ಕಲಬುರ್ಗಿಯಲ್ಲಿ ಒಂದೇ ದಿನ ಐದು ಪಾಸಿಟಿವ್ - ಕಂಟೇನ್​ಮೆಂಟ್​ ಝೋನ್​​ ಮೇಲೆ ದ್ರೋಣ್ ಕಣ್ಗಾವಲು

ಕಲಬುರ್ಗಿ ನಗರದ ಉತ್ತರ ಮತ ಕ್ಷೇತ್ರದಲ್ಲಿ‌ ಅತಿ ಹೆಚ್ಚು ಸೋಂಕಿತರಿದ್ದಾರೆ. ಹೀಗಾಗಿ ಉತ್ತರ ಮತಕ್ಷೇತ್ರದ ಮೋಮಿನ್‌ಪುರ, ಸಂತ್ರಸವಾಡಿ, ಮುಸ್ಲಿಂ ಚೌಕ್ ಸೇರಿದಂತೆ ಹಲವಡೆ‌ ಡ್ರೋಣ್ ಕ್ಯಾಮರಾ ಮೂಲ ನಿಗಾ ವಹಿಸಲಾಗಿದೆ.

news18-kannada
Updated:April 20, 2020, 3:08 PM IST
ಕಲಬುರ್ಗಿಯಲ್ಲಿ ಒಂದೇ ದಿನ ಐದು ಪಾಸಿಟಿವ್ - ಕಂಟೇನ್​ಮೆಂಟ್​ ಝೋನ್​​ ಮೇಲೆ ದ್ರೋಣ್ ಕಣ್ಗಾವಲು
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಏ.20): ಕಲಬುರ್ಗಿ ಜಿಲ್ಲೆಯಲ್ಲಿ ಒಂದೇ ದಿನ ಐದು ಕೊರೋನಾ ಪಾಸಿಟಿವ್ ಬಂದಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ 55 ವರ್ಷದ ಬಟ್ಟೆ ವ್ಯಾಪಾರಿಯಿಂದ ಮತ್ತೆ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

13 ವರ್ಷದ ಬಾಲಕ, 19 ವರ್ಷದ ಯುವಕ ಮತ್ತು 30 ವರ್ಷದ ಮಹಿಳೆಗೆ ಪೇಷಂಟ್ 205ರ ಸಂಪರ್ಕ ಬಂದಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ 65 ವರ್ಷದ ಹಣ್ಣಿನ ವ್ಯಾಪಾರಿ ಪೇಷಂಟ್ 177 ರಿಂದ ಅದೇ ಕುಟುಂಬದ 50 ವರ್ಷದ ವ್ಯಕ್ತಿಗೆ ಸೋಂಕು ಹರಡಿದೆ. ಹಾರ್ಡ್ ವೇರ್ ಅಂಗಡಿ ಮಾಲೀಕ ಪೇಷಂಟ್ 175 ರ ಸಂಪರ್ಕದಿಂದ 17 ವರ್ಷದ ಬಾಲಕನಿಗೆ ಸೋಂಕು ಹರಡಿರೋದು ದೃಢಪಟ್ಟಿದೆ. ಇಂದು ಸ್ಟೇಟ್ ಮೀಡಿಯಾ ಬುಲೆಟಿನ್ ನಲ್ಲಿ ಬಂದ ಎಲ್ಲ ಐದು ಪ್ರಕರಣಗಳೂ ಕಲಬುರ್ಗಿಗೆ ಸೇರಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 27ಕ್ಕೆ ಏರಿದೆ. ಜನರ ಆತಂಕ ದಿನೇ ದಿನೇ ಹೆಚ್ಚಾಗುತ್ತಿದ್ದು, ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

ದ್ರೋಣ್ ಕ್ಯಾಮರಾ ಕಣ್ಗಾವಲು :

ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ನಗರದ 7 ರೆಡ್ ಝೋನ್ ಏರಿಯಾಗಳ ಮೇಲೆ ಡ್ರೋಣ್ ಕಣ್ಗಾವಲಿಡಲಾಗಿದೆ. ಕಲಬುರ್ಗಿ ನಗರದ ಉತ್ತರ ಮತ ಕ್ಷೇತ್ರದಲ್ಲಿ‌ ಅತಿ ಹೆಚ್ಚು ಸೋಂಕಿತರಿದ್ದಾರೆ. ಹೀಗಾಗಿ ಉತ್ತರ ಮತಕ್ಷೇತ್ರದ ಮೋಮಿನ್‌ಪುರ, ಸಂತ್ರಸವಾಡಿ, ಮುಸ್ಲಿಂ ಚೌಕ್ ಸೇರಿದಂತೆ ಹಲವಡೆ‌ ಡ್ರೋಣ್ ಕ್ಯಾಮರಾ ಮೂಲ ನಿಗಾ ವಹಿಸಲಾಗಿದೆ. ಕೆಲ ಏರಿಯಾಗಳಲ್ಲಿ  ಜನರ ಮೇಲೆ ನಿಗಾವಹಿಸಲು ಡ್ರೋಣ್ ಮೊರೆ ಹೋಗಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಡ್ರೋಣ್ ಕಣ್ಗಾವಲಿರಿಸಿದ್ದಾರೆ. ಜನರು ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯ ಓಡಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಪೊಲೀಸರಿಗೆ ದೂರು ನೀಡಲು ಮಹಾನಗರ ಪಾಲಿಕೆ ಮುಂದಾಗಿದೆ.

ರಾವೂರಿನಲ್ಲಿ ಥ್ರೋಟ್ ಸ್ಯಾಂಪಲ್ ಸಂಗ್ರಹ :

ಸಿಲ್ ಡೌನ್ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆ ಚಿತ್ತಾಪುರದ ರಾವೂರ್ ಗ್ರಾಮ ಸಂಪೂರ್ಣ ಸ್ತಬ್ಧಗೊಂಡಿದೆ. ಗ್ರಾಮದ ಎಲ್ಲಾ ಬಡಾವಣೆಗಳಿಗೆ ಬ್ಯಾರಿಕೆಡ್ ಮತ್ತು ಬೇಲಿ ಹಾಕಿ ಪೊಲೀಸರು ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಮನೆಯಿಂದ ಯಾರೂ ಹೊರ ಬಾರದಂತೆ ನಿಂಬರ್ಧ ವಿಧಿಸಲಾಗಿದೆ. ಗ್ರಾಮದ ಸುತ್ತ ಪೋಲಿಸ್ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಇಂದು ಗ್ರಾಮಸ್ಥರ ಗಂಟಲು ದ್ರವ ಸಂಗ್ರಹ ಕಾರ್ಯ ನಡೆಯಿತು. ಇದೇ ವೇಳೆ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಸಮೀಕ್ಷೆ ಮಾಡಿದರು.

ಇದನ್ನೂ ಓದಿ : ಪಾದರಾಯನಪುರ ಹಲ್ಲೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ - ಸಚಿವ ಆರ್​​. ಅಶೋಕ್​ನಿಷೇಧಾಜ್ಞೆ ಉಲ್ಲಂಘಿಸಿ, ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸಿದ್ಧಲಿಂಗೇಶ್ವರ ಜಾತ್ರೆ ನೆರವೇರಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಇದುವರೆಗೂ 20 ರನ್ನು ಬಂಧಿಸಲಾಗಿದೆ. ಆದರೆ ಜಾತ್ರೆಗೆ ಮೂಲ ಕಾರಣರಾದ ಪ್ರಭಾವಿ ವ್ಯಕ್ತಿಗಳನ್ನು ಬಿಟ್ಟು ದೇವಸ್ಥಾನದಲ್ಲಿ ಕೆಲಸ ಮಾಡುವ ಅಮಾಯಕರ ಮೇಲೆ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಮಾಯಕರನ್ನು ಬಿಟ್ಟು, ಕಾನೂನು ಉಲ್ಲಂಘನೆ ಮಾಡಿದವರನ್ನು ಬಂಧಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.
First published: April 20, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading