HOME » NEWS » Coronavirus-latest-news » FIVE COVID POSITIVE LABOURERS ALLEGEDLY ISOLATED IN CHAMBA PUBLIC TOILET KVD

ಎಲ್ಲಿಗೆ ಬಂತು ಪರಿಸ್ಥಿತಿ..? ಸಾರ್ವಜನಿಕ ಶೌಚಾಲಯದಲ್ಲಿ ಐವರು ಸೋಂಕಿತರಿಗೆ ಐಸೋಲೇಷನ್..!

ಚಂಬಾ ನಗರದಲ್ಲಿ ಬಸ್​ ನಿಲ್ದಾಣ ನಿರ್ಮಾಣ ಕೆಲಸಕ್ಕಾಗಿ 20 ಕಾರ್ಮಿಕರನ್ನು ಕಂಟ್ರ್ಯಾಕ್ಟರ್​​ ಕರೆ ತಂದಿದ್ದರು. 20 ಮಂದಿಯಲ್ಲಿ ಐವರು ಕಾರ್ಮಿಕರ ಕೋವಿಡ್​ ರಿಪೋರ್ಟ್​ ಪಾಸಿಟಿವ್​ ಬಂದಿದೆ.

Kavya V | news18-kannada
Updated:April 30, 2021, 7:13 PM IST
ಎಲ್ಲಿಗೆ ಬಂತು ಪರಿಸ್ಥಿತಿ..? ಸಾರ್ವಜನಿಕ ಶೌಚಾಲಯದಲ್ಲಿ ಐವರು ಸೋಂಕಿತರಿಗೆ ಐಸೋಲೇಷನ್..!
ಸಾರ್ವಜನಿಕ ಶೌಚಾಲಯದಲ್ಲಿ ಐಸೋಲೇಷನ್​
  • Share this:
ಚಂಬಾ: ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್​ ಸಿಗುತ್ತಿಲ್ಲ, ಆಕ್ಸಿಜನ್​ ಸಿಗುತ್ತಿಲ್ಲ ಎಂಬ ಪರಿಸ್ಥಿತಿಯೇ ಎಲ್ಲೆಡೆ ನಿರ್ಮಾಣವಾಗಿದೆ. ಸೋಂಕು ಸರ್ವವ್ಯಾಪಿ ಆಗುತ್ತಿರೋದರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಒದಗಿಸುವುದರಲ್ಲಿ ಸರ್ಕಾರಗಳು ಸೋಲುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತಹ ಅಮಾನವೀಯ ಘಟನೆ ಹಿಮಾಚಲ ಪ್ರದೇಶದ ಚಂಬಾ ನಗರದಲ್ಲಿ ನಡೆದಿದೆ. ಐವರು ಸೋಂಕಿತ ಕಾರ್ಮಿಕರನ್ನು ಸುಲಭ್​ ಶೌಚಾಲಯದಲ್ಲಿ ಐಸೋಲೇಷನ್ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​ ಬೇಡ, ಕನಿಷ್ಟ ಸೋಂಕಿತರನ್ನು ಐಸೋಲೇಷನ್​ ಮಾಡಲು ಸ್ಥಳೀಯ ಆಡಳಿತ ವಿಫಲವಾಗಿದೆ.

ಚಂಬಾ ನಗರದಲ್ಲಿ ಬಸ್​ ನಿಲ್ದಾಣ ನಿರ್ಮಾಣ ಕೆಲಸಕ್ಕಾಗಿ 20 ಕಾರ್ಮಿಕರನ್ನು ಕಂಟ್ರ್ಯಾಕ್ಟರ್​​ ಕರೆ ತಂದಿದ್ದರು. 20 ಮಂದಿಯಲ್ಲಿ ಐವರು ಕಾರ್ಮಿಕರ ಕೋವಿಡ್​ ರಿಪೋರ್ಟ್​ ಪಾಸಿಟಿವ್​ ಬಂದಿದೆ. ಸೋಂಕಿತರನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸುವ ಬದಲು ಸಾರ್ವಜನಿಕ ಶೌಚಾಲಯದಲ್ಲಿ ಇರಿಸಲಾಗಿದೆ. ಅಮಾಯಕ ಬಡ ಸೋಂಕಿತರು ಶೌಚಾಲಯದಲ್ಲೇ ದಿನದೂಡಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲೇ ಸೋಂಕಿತ ಕಾರ್ಮಿಕರನ್ನು ಐಸೋಲೇಟ್​ ಮಾಡಬಹುದಿತ್ತು. ಆದರೆ ಕಂಟ್ರ್ಯಾಕ್ಟರ್​​ ಕಾರ್ಮಿಕರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಇದನ್ನೂ ಓದಿ: ಆಗಸದಲ್ಲಿ ಹಾರಿ ಬರುತ್ತಾ ವ್ಯಾಕ್ಸಿನ್.. ತೆಲುಗು ಸಿನಿಮಾಗಳ ಶೈಲಿಯಲ್ಲೇ ಇದೆ ತೆಲಂಗಾಣ ಸರ್ಕಾರದ ಐಡಿಯಾ!

ಶೌಚಾಲಯದಲ್ಲಿ ಕಾರ್ಮಿಕರನ್ನು ಐಸೋಲೇಷನ್​ ಮಾಡಿರುವುದನ್ನು ಸ್ಥಳೀಯ ಮುಖಂಡರು ಖಂಡಿಸಿದ್ದಾರೆ. ಆಮ್​​ ಆದ್ಮಿ ಪಕ್ಷದ ಮುಖಂಡ ಸಲೀಂ ಈ ಘಟನೆ ಹಿಮಾಚಲ ಪ್ರದೇಶಕ್ಕೆ ಅವಮಾನಕರ ಸಂಗತಿ ಎಂದು ಟೀಕಿಸಿದ್ದಾರೆ. ಇನ್ನು ಚಂಬಾ ವೈದ್ಯಾಧಿಕಾರಿ ಪ್ರತಿಕ್ರಿಯಿಸಿ ಘಟನೆ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕಳುಹಿಸಿದ್ದೇವೆ. ಸೋಂಕಿತ ಕಾರ್ಮಿಕರನ್ನು ಕೋವಿಡ್​ ಕೇರ್​ ಸೆಂಟರ್​ಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
Published by: Kavya V
First published: April 30, 2021, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories