ಆಟೋವನ್ನು ಆ್ಯಂಬುಲೆನ್ಸ್ ಮಾಡಿದ ಬಂಗಾಳದ ಮೊದಲ ಇ-ಆಟೋ ಚಾಲಕಿ

ಉತ್ತರ ಬಂಗಾಳದ ಮೊದಲ ಇ-ಆಟೋ ಚಾಲಕಿಯಾದ ಮುನ್ಮನ್ ಸರ್ಕಾರ್ ತಮ್ಮ ಆಟೋವನ್ನೇ ಆಂಬುಲೆನ್ಸ್ ಮಾಡಿಕೊಂಡು, ಕೊರೊನಾ ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗೆ ತಲುಪಿಸುತ್ತಾ, ದಿನದ 24 ಗಂಟೆಯನ್ನು ಇದಕ್ಕೆ ಮುಡಿಪಾಗಿ ಟ್ಟಿದ್ದಾರೆ.

ಆಂಬ್ಯುಲೆನ್ಸ್​ ಆದ ಆಟೋ.

ಆಂಬ್ಯುಲೆನ್ಸ್​ ಆದ ಆಟೋ.

  • Share this:
ಕೋವಿಡ್ ಸಂಕಷ್ಟ ಕಾಲದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಚಾಲಕರೇ ದುಬಾರಿ ಹಣ ಪಡೆಯುತ್ತಿರುವವರ ಮಧ್ಯೆ ಸಿಲಿಗುರಿಯ 49 ವರ್ಷ ವಯಸ್ಸಿನ ಮುನ್ಮನ್ ಸರ್ಕಾರ್ ಸಂತ್ರಸ್ತರ ನೆರವಿಗೆ ದಾವಿದ್ದಾರೆ. ಉತ್ತರ ಬಂಗಾಳದ ಮೊದಲ ಇ-ಆಟೋ ಚಾಲಕಿಯಾದ ಮುನ್ಮನ್ ಸರ್ಕಾರ್ ತಮ್ಮ ಆಟೋವನ್ನೇ ಆಂಬುಲೆನ್ಸ್ ಮಾಡಿಕೊಂಡು, ಕೊರೊನಾ ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗೆ ತಲುಪಿಸುತ್ತಾ, ದಿನದ 24 ಗಂಟೆಯನ್ನು ಇದಕ್ಕೆ ಮುಡಿಪಾಗಿ ಟ್ಟಿದ್ದಾರೆ. ಕೊರೋನಾ ಎರಡನೇ ಅಲೆಯಿಂದ ಸಾಕಷ್ಟು ಮಂದಿ ತತ್ತರಿಸಿ ಹೋಗಿದ್ದನ್ನು ನಾವು ಕಂಡಿದ್ದೇವೆ. ಈ ಸಮಯದಲ್ಲಿ ಮುನ್ಮನ್ ತಮ್ಮ ದಿನ ಸಂಪಾದನೆಯನ್ನೂ ಬಿಟ್ಟು ಸಂತ್ರಸ್ತರ ಸೇವೆಗೆ ತಮ್ಮನ್ನು ಮುಡಿಪಾಗಿಸಿಕೊಂ ಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಗಂಡನ ನಿಧನದ ನಂತರ ಮುನ್ಮುನ್ ಜೀವನೋಪಾಯಕ್ಕಾಗಿ ಆಟೋ ಚಾಲಕಿ ಆಗಲು ನಿರ್ಧರಿಸಿದರು. ಆಗಲೂ ಅವರು ಪರಿಸರ ಸ್ನೇಹಿಯಾದ ಇ-ಆಟೋವನ್ನೇ ಖರೀದಿಸಿದ್ದರು. ಕೊರೊನಾದಿಂದಾಗಿ ಕೆಲ ಸಮಯ ಮನೆಯಲ್ಲೇ ಇದ್ದ ಮುನ್ಮನ್‌ಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮಿಂದ ಆದ ನೆರವು ನೀಡಬೇಕೆಂದು ನಿರ್ಧರಿಸಿದರು.

'ಕಳೆದ ವರ್ಷ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಚಾಲಕರು ಕೋರೋನಾ ಸೋಂಕಿತರ ಕುಟುಂಬದವರ ಬಳಿ ಸಿಕ್ಕಾಪಟ್ಟೆ ದುಡ್ಡು ಪಡೆಯುತ್ತಿದ್ದರು. ಆಗಲೇ ನನ್ನ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲು ಮತ್ತು ಕೋವಿಡ್ ಸಂತ್ರಸ್ತರನ್ನು ಉಚಿತವಾಗಿ ಕರೆದೊಯ್ಯಲು ನಿರ್ಧರಿಸಿದೆ' ಎಂದು ಮುನ್ಮನ್ ಎಎನ್‌ಐಗೆ ತಿಳಿಸಿದ್ದಾರೆ.

ಕೇವಲ ಆಸ್ಪತ್ರೆಗೆ ಕರೆದೊಯ್ಯುವುದಲ್ಲದೇ ಅವರನ್ನು ಮತ್ತೆ ಮನೆಗೆ ವಾಪಸ್ ಕರೆದುಕೊಂಡು ಬರುತ್ತಿದ್ದರು. ಇಲ್ಲಿಯವರೆಗೆ ಮುನ್ಮನ್ ಸುಮಾರು 5000 ರೋಗಿಗಳನ್ನು ತಮ್ಮ ಆಟೋದಲ್ಲಿ ಕರೆದೊಯ್ದಿದ್ದಾರೆ. ಸೋಂಕಿತರನ್ನು ಹೊರತುಪಡಿಸಿ, ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವವರನ್ನು, ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವವರನ್ನೂ ಇವರು ಉಚಿತವಾಗಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿ ಬಂಗಾಳದ ಬಿಜೆಪಿ; ರಾಜ್ಯಪಾಲರ ಭೇಟಿಗೆ 24 ಕಮಲ ಶಾಸಕರು ಗೈರು, ಹೈಕಮಾಂಡ್​ಗೆ ತಲೆನೋವಾದ ವಲಸೆ!

ಕೊರೋನಾದ ಭಯ ನಿಮಗಿರಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, 'ನಾನೂ ಸತ್ತ ಮೇಲೂ ಜನ ನನ್ನನ್ನು ನೆನಪಿಸಿಕೊಳ್ಳುವಂತಹ ಏನಾದರೂ ಕೆಲಸ ಮಾಡಬೇಕು ಎನ್ನುವ ಬಯಕೆ ನನಗಿತ್ತು. ಯಾರಿಗಾದರು ಈ ಸೇವೆ ಉಪಯೋಗ ಆಗಿದ್ದರೆ ನನ್ನನ್ನು ಮುಂದೆ ಎಂದಾದರು ನೆನೆಯುತ್ತಾರೆ. ಈ ಭೂಮಿ ಮೇಲೆ ನಾನಿಲ್ಲದಿದ್ದರು ನನ್ನ ಸೇವೆ ನೆನಪಲ್ಲಿ ಉಳಿದರೆ ಅಷ್ಟೆ ಸಾಕು' ಎಂದರು.

'ಮುನ್ಮನ್ ದೀದಿಯನ್ನು ನೋಡಿ ಸಮಾಜ ಕಲಿಯಬೇಕಿದೆ. ಯಾವುದೇ ಹಿಂಜರಿಕೆ ಇಲ್ಲದೆ, ಎಂತಹ ಸಂದರ್ಭದಲ್ಲೂ ಸಹಾಯ ಮಾಡುವ ಇಂತಹ ಸಾಕಷ್ಟು ಜನರ ಅಗತ್ಯ ಈ ವಿಶ್ವಕ್ಕಿದೆ' ಎನ್ನುತ್ತಾರೆ ಸಿಲಿಗುರಿಯ ಜನರು.

ಇದನ್ನೂ ಓದಿ: BS Yediyurappa: ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ; ಸಿಎಂ ಕುರ್ಚಿಗೆ ಕಂಟಕ ತರುತ್ತಾ ಹಳೇ ಕೇಸ್?

ಆಟೋದಲ್ಲಿ ಸ್ಯಾನಿಟೈಸರ್ ಟ್ಯಾಂಕ್:

ಕೋವಿಡ್ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕು ಎನ್ನುವ ಅರಿವಿದ್ದ ಮುನ್ಮನ್ ಅವರು ಸದಾ ಪಿಪಿಐ ಕಿಟ್ ಧರಿಸಿ, ದಿನವೆಲ್ಲ ಸೇವೆಗೆ ಸಿದ್ಧವಿರುತ್ತಿದ್ದರು. ಇವರ ಸೇವೆಯನ್ನು ಗುರುತಿಸಿದ ಬಂಗಾಳದ ಸಮಾಜ ಮುಖಿ ಕಾರ್ಯಕರ್ತರು, ಆಟೋಗೆ ಸ್ಯಾನಿಟೈಸರ್ ಟ್ಯಾಂಕ್ ಅಳವಡಿಸಿಕೊಟ್ಟಿದ್ದಾರೆ. ಕೋವಿಡ್ ಸೋಂಕಿತರು ಆಟೋ ಹತ್ತಿ ಇಳಿದ ಮೇಲೆ ಮುನ್ಮನ್ ಪೂರ್ತಿ ಆಟೋವನ್ನು ಸ್ಯಾನಿಟೈಸ್ ಮಾಡುತ್ತಿದ್ದರು.

ತಮ್ಮ ಆಟೋದಲ್ಲಿನ ಸ್ಯಾನಿಟೈಸರ್ ಟ್ಯಾಂಕ್ ಬಳಸಿಕೊಂಡೇ, ಪದೇ ಪದೇ ಸ್ಯಾನಿಟೈಸೇಷನ್ ಮಾಡುವ ಅಗತ್ಯ ಇರುವ ಸ್ಥಳಗಳಾದ ಪೊಲೀಸ್ ಠಾಣೆ, ಬ್ಯಾಂಕ್, ಸರ್ಕಾರಿ ಕಚೇರಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಇವರೇ ಉಚಿತವಾಗಿ ಸ್ಯಾನಿಟೈಸ್ ಮಾಡುತ್ತಿದ್ದಾರೆ.
Published by:MAshok Kumar
First published: