• Home
  • »
  • News
  • »
  • coronavirus-latest-news
  • »
  • ಕೊರೋನಾ ವಿರುದ್ಧ ಹೋರಾಟ: ವಿಜಯಪುರದ ಈ ಗ್ಯಾಸ್ ಏಜೆನ್ಸಿ ಕೈಗೊಂಡ ಕ್ರಮ ದೇಶದಲ್ಲೇ ಮೊದಲು

ಕೊರೋನಾ ವಿರುದ್ಧ ಹೋರಾಟ: ವಿಜಯಪುರದ ಈ ಗ್ಯಾಸ್ ಏಜೆನ್ಸಿ ಕೈಗೊಂಡ ಕ್ರಮ ದೇಶದಲ್ಲೇ ಮೊದಲು

ಸಿಲಿಂಡರ್​ ಗ್ಯಾಸ್​ ಸ್ಯಾನಿಟರ್​ ಸಿಂಪಡಣೆ ಮಾಡುತ್ತುರುವುದು

ಸಿಲಿಂಡರ್​ ಗ್ಯಾಸ್​ ಸ್ಯಾನಿಟರ್​ ಸಿಂಪಡಣೆ ಮಾಡುತ್ತುರುವುದು

ವಿಜಯಪುರದ ಪ್ರತಿಷ್ಠಿತ ಶ್ರೀ ಸಾಯಿ ಹೋಮ್ ನೀಡ್ಸ್ ಗ್ಯಾಸ್ ಏಜೆನ್ಸಿ ಗ್ಯಾಸ್ ಸಿಲೆಂಡರ್, ವಾಹನ ಹಾಗೂ ಸಿಬ್ಬಂದಿ ವರ್ಗಕ್ಕೆ ಸ್ಯಾನಿಟೈಜರ್ ಸಿಂಪಡಣೆ ಮಾಡುತ್ತಿದೆ.

  • Share this:

ವಿಜಯಪುರ(ಏ.06): ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಬಸವ ನಾಡಿನಲ್ಲಿ ವಿನೂತನ ಪ್ರಯೋಗ ನಡೆದಿದೆ. ನಗರದ ಗ್ಯಾಸ್ ಏಜೆನ್ಸಿಯೊಂದು ಕೈಗೊಂಡಿರುವ ಈ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿಬ್ಬಂದಿಯ ಜೊತೆಗೆ ಗ್ರಾಹಕರು ಖುಷ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಕೊರೊನಾ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಡಿಸಿಎಂ ಗೋವಿಂದ ಕಾರಜೋಳ ಮಗ ಉಮೇಶ ಕಾರಜೋಳ ಮಾಲಿಕತ್ವದ ಏಜೆನ್ಸಿ ಬೆಂಬಲವಾಗಿ ನಿಂತಿದೆ.  ಈ ನಿಟ್ಟಿನಲ್ಲಿ ವಿನೂತನ ಪ್ರಯೋಗವೊಂದನ್ನು ಮಾಡಿದೆ. 


ವಿಜಯಪುರದ ಪ್ರತಿಷ್ಠಿತ ಶ್ರೀ ಸಾಯಿ ಹೋಮ್ ನೀಡ್ಸ್ ಗ್ಯಾಸ್ ಏಜೆನ್ಸಿ ಗ್ಯಾಸ್ ಸಿಲೆಂಡರ್, ವಾಹನ ಹಾಗೂ ಸಿಬ್ಬಂದಿ ವರ್ಗಕ್ಕೆ ಸ್ಯಾನಿಟೈಜರ್ ಸಿಂಪಡಣೆ ಮಾಡುತ್ತಿದೆ. ಗ್ಯಾಸ್ ಏಜೆನ್ಸಿ ಬಳಿ ಆರಂಭವಾದ ಈ ಸೇವೆಗೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ ಅಗರವಾಲ್ ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದ ರೆಡ್ಡಿ ಸಮ್ಮುಖದಲ್ಲಿ ಚಾಲನೆ ನೀಡಿದ್ದಾರೆ.


ಪ್ರತಿನಿತ್ಯ ಸಾವಿರಾರು ಗ್ರಾಹಕರಿಗೆ ಈ ಏಜೆನ್ಸಿಯಿಂದ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಲಾಗುತ್ತಿದೆ. ಆದರೆ, ಕೊರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ಈ ಸಿಲಿಂಡರ್ ಪೂರೈಸುವ ಸಿಬ್ಬಂದಿ ಮತ್ತು ಗ್ರಾಹಕರಿಗೆ ಭಯ ಎದುರಾಗಿತ್ತು. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಏಜೆನ್ಸಿ ಮಾಲಿಕ ಉಮೇಶ ಗೋವಿಂದ ಕಾರಜೋಳ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಹೊಸ ಪ್ರಯೋಗವೊಂದನ್ನು ಮಾಡಿದ್ದಾರೆ.


ಮಾಸ್​​ಗಳು ಹಾಗೂ ಸ್ಯಾನಿಟೈಸರ್​​ ಬಾಟಲ್​​ಗಳು


ಈ ಏಜೆನ್ಸಿಯಿಂದ ಗ್ಯಾಸ್ ಸಿಲಿಂಡರ್ ವಿತರಣೆ ವಾಹನ ಮತ್ತು ಸಿಬ್ಬಂದಿ ಹೊರ ಹೋಗಬೇಕಾದರೆ ಮೊದಲಿಗೆ ಅವರಿಗೆ ರಾಸಾಯನಿಕವುಳ್ಳ ನೀರು ಸಿಂಪಡಿಸಲಾಗುತ್ತಿದೆ.  ಯಾಂತ್ರಿಕೃತವಾಗಿರುವ ಈ ಕ್ರಿಯೆಯಲ್ಲಿ ಸಿಬ್ಬಂದಿ, ಸಿಲಿಂಡರ್​ಗಳು ಮತ್ತು ಅವುಗಳನ್ನು ಸಾಗಿಸುವ ಎಲ್ಲ ವಾಹನಗಳೂ ಸ್ವಚ್ಛವಾಗುತ್ತಿವೆ.


ಇದನ್ನೂ ಓದಿ : ಕೊರೋನಾ ಲಾಕ್ ಡೌನ್ – ಬೆಳೆ ಹಾನಿಗೆ ಎಕರೆಗೆ 10 ರಿಂದ 20 ಸಾವಿರ ಪರಿಹಾರ ನೀಡಿ ; ಕುಮಾರಸ್ವಾಮಿ ಆಗ್ರಹ


ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಮೇಶ ಗೋವಿಂದ ಕಾರಜೋಳ, ದೇಶದಲ್ಲಿಯೇ ಇದು ಮೊದಲ ಪ್ರಯೋಗವಾಗಿದ್ದು, ಈ ಮೂಲಕ ಗ್ಯಾಸ್ ಸಿಲಿಂಡರ್ ವಿತರಣೆ ಸಿಬ್ಬಂದಿಯ ಆರೋಗ್ಯದ ಕಡೆಗೆ ಗಮನ ನೀಡಲಾಗುತ್ತಿದೆ. ಅಲ್ಲದೇ, ಗ್ರಾಹಕರ ಮನೆಗಳಿಗೂ ಸುರಕ್ಷಿತವಾಗಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ, 32 ಸಾವಿರ ಗ್ರಾಹಕರಿಗೆ ಮಾಸ್ಕ್ ಕೂಡ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಶ್ರೀ ಸಾಯಿ ಹೋಂ ನೀಡ್ಸ್ ನ ಈ ಕ್ರಮ ಸಿಬ್ಬಂದಿ ಅಷ್ಟೇ ಅಲ್ಲ, ಗ್ರಾಹಕ ಮೆಚ್ಚುಗೆಗೂ ಪಾತ್ರವಾಗಿದೆ.

Published by:G Hareeshkumar
First published: