HOME » NEWS » Coronavirus-latest-news » FIRST LOT OF SPUTNIK V VACCINES FROM RUSSIA ARRIVE IN HYDERABAD MAK

Vaccine Sputnik-V: ಮಾಸ್ಕೋದಿಂದ ಭಾರತಕ್ಕೆ ಬಂದಿಳಿದ ರಷ್ಯಾದ ಸ್ಪುಟ್ನಿಕ್-ವಿ ಕೊರೋನಾ ಲಸಿಕೆ!

ಇಂತಹ ಸಂದಿಗ್ಧ ಸಂದರ್ಭದಲ್ಲಿ ರಷ್ಯಾದಿಂದ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಆಗಮಿಸಿರುವುದು ಹೊಸದೊಂದು ಆಶಾವಾದವನ್ನು ಮೂಡಿಸಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಪುಟ್ನಿಕ್ ಲಸಿಕೆಯನ್ನು ಸರ್ಕಾರ ನೀಡಲಿದ್ದು, ಕೊರೋನಾವನ್ನು ನಿಯಂತ್ರಿಸುವ ವಿಶ್ವಾಸ ವ್ಯಕ್ತಪಡಿಸಿದೆ.

news18-kannada
Updated:May 1, 2021, 5:25 PM IST
Vaccine Sputnik-V: ಮಾಸ್ಕೋದಿಂದ ಭಾರತಕ್ಕೆ ಬಂದಿಳಿದ ರಷ್ಯಾದ ಸ್ಪುಟ್ನಿಕ್-ವಿ ಕೊರೋನಾ ಲಸಿಕೆ!
ಹೈದ್ರಾಬಾದ್​ಗೆ ಬಂದಿಳಿದಿರುವ ರಷ್ಯಾದ ಸ್ಪುಟ್ನಿಕ್ ಲಸಿಕೆ.
  • Share this:
ಹೈದ್ರಾಬಾದ್​ (ಮೇ 01); ರಷ್ಯಾದ ಸ್ಪುಟ್ನಿಕ್ ಕೊರೋನಾ ಲಸಿಕೆಯ ಮೊದಲ ಬ್ಯಾಚ್​ ಇಂದು ಹೈದ್ರಾಬಾದ್​ಗೆ ಬಂದಿಳಿದಿದೆ. ಮೊದಲ ಬ್ಯಾಚ್​ನಲ್ಲಿ 1.5 ಲಕ್ಷ ಡೋಸ್​ಗಳು ಭಾರತಕ್ಕೆ ಆಗಮಿಸಿದ್ದು, ಉಳಿದ 3 ಮಿಲಿಯನ್ ಡೋಸ್​ಗಳು ಈ ತಿಂಗಳ ಅಂತ್ಯದೊಳಗೆಬರಲಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ಲಸಿಕೆ ನೀಡಲು ಆಂಧ್ರಪ್ರದೇಶ ಮೂಲಕ ಡಾ. ರೆಡ್ಡಿ ಕೈಜೋಡಿಸಿದ್ದಾರೆ. ಹೀಗಾಗಿ ಈ ಲಸಿಕೆಗಳು ಇಂದು ಡಾ. ರೆಡ್ಡಿ ಅವರ ಪ್ರಯೋಗಾಲಯಗಳಿಗೆ ತಲುಪಿಸಲಾಗುವುದು. ನಂತರ ಜನರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ. ಏಪ್ರಿಲ್ 13 ರಂದು, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದೇಶದಲ್ಲಿ ಕೊರೋನಾ ವೈರಸ್ ವಿರುದ್ಧ ಸ್ಪುಟ್ನಿಕ್-ವಿ ಲಸಿಕೆ ಬಳಸಲು ಅನುಮೋದನೆ ನೀಡಿದೆ. ಭಾರತ ಸ್ಪುಟ್ನಿಕ್-ವಿ ಅನ್ನು ಅನುಮೋದಿಸಿದ 60 ನೇ ದೇಶ ಎಂಬುದು ಉಲ್ಲೇಖಾರ್ಹ.

ದೇಶದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಲೇ ಇದೆ. ಹೀಗಾಗಿ ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಕಳೆದ ವಾರ ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ ಮೇ.01 ರಿಂದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿತ್ತು. ಈ ಘೋಷಣೆಯಂತೆ ಇಂದಿನಿಂದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರ ಈವರೆಗೆ ಯಾವ ರಾಜ್ಯಗಳಿಗೂ ಅಗತ್ಯಕ್ಕೆ ತಕ್ಕಂತೆ ಲಸಿಕೆ ನೀಡಿಲ್ಲ. ಹೀಗಾಗಿ ಲಸಿಕೆ ಕಾರ್ಯಕ್ರಮವನ್ನೂ ಆರಂಭಿಸಲಾಗಿಲ್ಲ.

ಪರಿಣಾಮ ಸಾವಿನ ಸಂಖ್ಯೆ ಅಧಿಕವಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ರಷ್ಯಾದಿಂದ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಆಗಮಿಸಿರುವುದು ಹೊಸದೊಂದು ಆಶಾವಾದವನ್ನು ಮೂಡಿಸಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಪುಟ್ನಿಕ್ ಲಸಿಕೆಯನ್ನು ಸರ್ಕಾರ ನೀಡಲಿದ್ದು, ಕೊರೋನಾವನ್ನು ನಿಯಂತ್ರಿಸುವ ವಿಶ್ವಾಸ ವ್ಯಕ್ತಪಡಿಸಿದೆ.

ದೇಶದಲ್ಲಿ ಇಂದಿನ ಕೊರೋನಾ ಸ್ಥಿತಿ:

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.

ಇದನ್ನೂ ಓದಿ: Supreme Court: ಕೊನೆಗೂ ಉತ್ತರಪ್ರದೇಶ ಸ್ಥಳೀಯ ಚುನಾವಣೆ ಮತ ಎಣಿಕೆಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್

ಶುಕ್ರವಾರ 4,01,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 2,99,988 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,91,64,969ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಶುಕ್ರವಾರ 3,523 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,11,853ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Published by: MAshok Kumar
First published: May 1, 2021, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories