ಬೆಳಗ್ಗೆ 8.30ಕ್ಕೆ ವಂದೇ ಭಾರತ್ ಮಿಷನ್ ಅಡಿ ಅಮೆರಿಕದಿಂದ ಬೆಂಗಳೂರಿಗೆ ವಿಮಾನ ಆಗಮನ

ಮೊದಲ ಹಂತದಲ್ಲಿ ವಂದೇ ಭಾರತ್ ಮಿಷನ್ ‌ಮತ್ತು ಸಮುದ್ರ ಸೇತು ಹೆಸರಿನಲ್ಲಿ 12 ದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು 64 ವಿಶೇಷ ವಿಮಾನಗಳು ಮತ್ತು 11 ಹಡಗುಗಳ ಮೂಲಕ ಸ್ವದೇಶಕ್ಕೆ ವಾಪಸ್ ಕರೆತರಲಾಗುತ್ತಿದೆ. 2ನೇ ಹಂತದಲ್ಲಿ 31 ದೇಶಗಳಿಂದ 149 ವಿಶೇಷ ವಿಮಾನಗಳ ಮೂಲಕ‌ ಕರತರಲಾಗುತ್ತದೆ. 149 ವಿಮಾನಗಳು ದೇಶದ 15 ನಗರಗಳಿಗೆ ಆಗಮಿಸಲಿವೆ.

news18-kannada
Updated:May 21, 2020, 6:58 AM IST
ಬೆಳಗ್ಗೆ 8.30ಕ್ಕೆ ವಂದೇ ಭಾರತ್ ಮಿಷನ್ ಅಡಿ ಅಮೆರಿಕದಿಂದ ಬೆಂಗಳೂರಿಗೆ ವಿಮಾನ ಆಗಮನ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ವಂದೇ ಭಾರತ್ ಮಿಷನ್ ಅಡಿ ಇಂದು ಬೆಳಗ್ಗೆ  8.30ಕ್ಕೆ ಅಮೆರಿಕದಿಂದ ವಿಮಾನ ಬೆಂಗಳೂರಿಗೆ ಆಗಮಿಸಲಿದೆ. 

ಈ ವಿಮಾಣದಲ್ಲಿ ಸುಮಾರು 225 ಪ್ರಯಾಣಿಕರು ಆಗಮಿಸಲಿದ್ದಾರೆ. ಅಮೆರಿಕದಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದ್ದು, ಈವರೆಗೂ ಅಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದಾರೆ.

ಕ್ರೂರಿ ಕೊರೋನಾವನ್ನು ನಿಯಂತ್ರಿಸಲು ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಂದೇ ಭಾರತ್ ಮಿಷನ್ ಯೋಜನೆ ಆರಂಭಿಸಿದೆ. ಮೊದಲ ಹಂತದ ವಂದೇ ಭಾರತ್ ಮಿಷನ್ ಯೋಜನೆ ಮೇ 13ಕ್ಕೆ ಮುಕ್ತಾಯವಾಗಿದ್ದು, ಮೇ 16ರಿಂದ 2ನೇ ಹಂತದ ವಂದೇ ಭಾರತ್ ಮಿಷನ್ ಯೋಜನೆ ಆರಂಭವಾಗಿದೆ. ಮೊದಲ ಹಂತದಲ್ಲಿ ಸುಮಾರು 15 ಸಾವಿರ ಭಾರತೀಯರನ್ನು ‌ತಾಯ್ನಾಡಿಗೆ ಕರೆತರಲಾಗಿತ್ತು.‌ ಅದೇ ರೀತಿ ಎರಡನೇ ಹಂತದಲ್ಲೂ ವಿದೇಶದಲ್ಲಿ ಸಿಲುಕಿರುವ ಸುಮಾರು 15 ಸಾವಿರಕ್ಕೂ ಹೆಚ್ಚು ಸ್ವದೇಶಿಗರನ್ನು ಕರೆತರಲಿದೆ.

ಮೊದಲ ಹಂತದಲ್ಲಿ ವಂದೇ ಭಾರತ್ ಮಿಷನ್ ‌ಮತ್ತು ಸಮುದ್ರ ಸೇತು ಹೆಸರಿನಲ್ಲಿ 12 ದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು 64 ವಿಶೇಷ ವಿಮಾನಗಳು ಮತ್ತು 11 ಹಡಗುಗಳ ಮೂಲಕ ಸ್ವದೇಶಕ್ಕೆ ವಾಪಸ್ ಕರೆತರಲಾಗುತ್ತಿದೆ. 2ನೇ ಹಂತದಲ್ಲಿ 31 ದೇಶಗಳಿಂದ 149 ವಿಶೇಷ ವಿಮಾನಗಳ ಮೂಲಕ‌ ಕರತರಲಾಗುತ್ತದೆ. 149 ವಿಮಾನಗಳು ದೇಶದ 15 ನಗರಗಳಿಗೆ ಆಗಮಿಸಲಿವೆ.

ಇದನ್ನು ಓದಿ: Amphan Cyclone: ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಆರ್ಭಟ; 160-170 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತ; ಮೂವರು ಬಲಿ

ಈ ಪೈಕಿ 14 ದೇಶಗಳಿಂದ 17 ವಿಮಾನಗಳು ಕರ್ನಾಟಕಕ್ಕೆ ಆಗಮಿಸಲಿವೆ.‌‌ ಅಮೆರಿಕಾದಿಂದ 3, ಕೆನಡಾದಿಂದ 2, ಯುಎಇ, ಸೌದಿ ಅರೆಬಿಯಾ, ಮಲೇಷಿಯಾ, ಒಮನ್, ಫಿಲಿಪೈನ್ಸ್, ಫ್ರಾನ್ಸ್, ಜರ್ಮನಿ, ಕತಾರ್, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್ ಮತ್ತು ಆಸ್ಟ್ರೇಲಿಯಾದಿಂದ ತಲಾ ಒಂದೊಂದು ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದ ವಂದೇ ಭಾರತ್ ಮಿಷನ್ ಯೋಜನೆಯಂತೆ 2ನೇ ಹಂತದಲ್ಲೂ ವೃದ್ದರು, ಗರ್ಭಿಣಿಯರು, ಆರೋಗ್ಯದ ಸಮಸ್ಯೆ ಇರುವವರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ವಲಸೆ ಕಾರ್ಮಿಕರಿಗೆ ಮೊದಲ ಆದ್ಯತೆಯಾಗಿರುತ್ತದೆ. ಆಯಾ ದೇಶಗಳಲ್ಲಿ ಉದ್ಯೋಗಿ ಆಗಿರುವವರಿಗೆ ನಂತರದ ಆದ್ಯತೆ ನೀಡಲಾಗುತ್ತದೆ‌.
First published: May 21, 2020, 6:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading