HOME » NEWS » Coronavirus-latest-news » FIRST CONFIRMED CASE IN INDIA AS KERALA STUDENT TESTS POSITIVE CORONAVIRUS SESR

ಕೇರಳದ ವಿದ್ಯಾರ್ಥಿಯಲ್ಲಿ ಮಹಾಮಾರಿ ಕರೋನಾ ವೈರಸ್​ ಪತ್ತೆ; ಹೆಚ್ಚಿದ ಭೀತಿ

ಚೀನಾದ ವುಹಾನ್​ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿರುವ ಕೇರಳ ವಿದ್ಯಾರ್ಥಿಯನ್ನು ಪರೀಕ್ಷಿಸಿದ ವೈದ್ಯರಿಗೆ ಕರೋನಾ ವೈರಸ್​ ಸೋಂಕಿಗೆ ತುತ್ತಾಗಿರುವುದಾಗಿ ತಿಳಿಸಿದ್ದಾರೆ. ಆತನನ್ನು ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ. ಆತನ ಆರೋಗ್ಯ ಸ್ಥಿರವಾಗಿದೆ. ಆತನ ರಕ್ತದಲ್ಲಿ ಈ ಡೆಡ್ಲಿ ವೈರಸ್​ ಸೋಂಕು ಪತ್ತೆಯಾಗಿದೆ ಎಂದು ಕೇರಳ ವೈದ್ಯರು ತಿಳಿಸಿದ್ದಾರೆ.

Seema.R | news18-kannada
Updated:January 30, 2020, 2:19 PM IST
ಕೇರಳದ ವಿದ್ಯಾರ್ಥಿಯಲ್ಲಿ ಮಹಾಮಾರಿ ಕರೋನಾ ವೈರಸ್​ ಪತ್ತೆ; ಹೆಚ್ಚಿದ ಭೀತಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜ.30): ಚೀನಾದಲ್ಲಿ ಆತಂಕ ಹುಟ್ಟಿಸಿರುವ ಮಹಾಮಾರಿ ಕರೋನಾ ವೈರಸ್​ ಭೀತಿ ಭಾರತದಲ್ಲಿಯೂ ಮೂಡಿದೆ. ದೇಶದಲ್ಲಿ ಈ ಸೋಂಕಿನ  ಬಗ್ಗೆ ಕಟ್ಟೆಚ್ಚರವಹಿಸಿದ್ದು, ವಿದೇಶದಿಂದ ಆಗಮಿಸುವವರ ಆರೋಗ್ಯದ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಈ ನಡುವೆ, ಕೇರಳದ ವಿದ್ಯಾರ್ಥಿಯೊಬ್ಬರನ್ನು ತಪಾಸಣೆ ನಡೆಸಿರುವ ವೈದ್ಯರು ಕರೋನಾ ವೈರಸ್​ ಸೋಂಕಿಗೆ ತುತ್ತಾಗಿರುವುದು ದೃಢಪಡಿಸಿದ್ದಾರೆ.

ಚೀನಾದ ವುಹಾನ್​ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿರುವ ಕೇರಳ ವಿದ್ಯಾರ್ಥಿಯನ್ನು ಪರೀಕ್ಷಿಸಿದ ವೈದ್ಯರಿಗೆ ಕರೋನಾ ವೈರಸ್​ ಸೋಂಕಿಗೆ ತುತ್ತಾಗಿರುವುದಾಗಿ ತಿಳಿಸಿದ್ದಾರೆ. ಆತನನ್ನು ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ. ಆತನ ಆರೋಗ್ಯ ಸ್ಥಿರವಾಗಿದೆ. ಆತನ ರಕ್ತದಲ್ಲಿ ಈ ಡೆಡ್ಲಿ ವೈರಸ್​ ಸೋಂಕು ಪತ್ತೆಯಾಗಿದೆ ಎಂದು ಕೇರಳ ವೈದ್ಯರು ತಿಳಿಸಿದ್ದಾರೆ.  ರೋಗಿಯ ಮಾಹಿತಿ ರಹಸ್ಯ ಕಾಯ್ದುಕೊಳ್ಳಲಾಗಿದೆ ಎಂದು ಪಿಐಬಿ ವರದಿ ಮಾಡಿದೆ.

ಚೀನಾದಲ್ಲಿ ಈಗಾಗಲೇ 170 ಜನರನ್ನು ಬಲಿತೆಗೆದುಕೊಂಡಿರುವ ಈ ವೈರಸ್​ ಸೋಂಕಿಗೆ 1.700ಜನ ತುತ್ತಾಗಿದ್ದಾರೆ.

ಇನ್ನು ದೆಹಲಿಯಲ್ಲಿ ಕೂಡ ಮೂವರಲ್ಲಿ ಈ ಸೋಂಕಿನ ಕುರಿತು ಅನುಮಾನ ವ್ಯಕ್ತವಾಗಿದ್ದು, ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆರ್​ಎಂಎಲ್​ ಆಸ್ಪತ್ರೆಯಲ್ಲಿ ದಾಖಲಾಗಿರುವ ಈ ಮೂವರ ರಕ್ತ ಪರೀಕ್ಷಿಸಿದ್ದು, ಸೋಂಕಿನ ಯಾವುದೇ ಆಂತಕವಿಲ್ಲ ಎಂದು ಆಸ್ಪತ್ರೆ ದೃಢಿಕರಿಸಿದೆ.

ಇದನ್ನು ಓದಿ: ಕರೊನಾ ವೈರಸ್​ಗೆ ತುತ್ತಾಗಿರುವ ಚೀನಾದಲ್ಲಿರುವ ಭಾರತೀಯ ಮಹಿಳೆ; ಸಹಾಯದ ನಿರೀಕ್ಷೆಯಲ್ಲಿ...

ಈ ಮಾರಣಾಂತಿಕ ವೈರಸ್ ದೇಶದಲ್ಲಿ ಹರಡಿದರೂ ಸಹ ಅದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸನ್ನದ್ಧವಾಗಿದ್ದು, ಈ ಕುರಿತ ಸಿದ್ಧತೆಗಳನ್ನು ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮಂಗಳವಾರ ಪರಿಶೀಲಿಸಿದ್ದಾರೆ ಎನ್ನಲಾಗಿದೆ.
First published: January 30, 2020, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories