HOME » NEWS » Coronavirus-latest-news » FIRE AT MAKESHIFT COVID 19 CENTER IN VIJAYAWADA KILLS 7 SNVS

Fire Accident - ಆಂಧ್ರದ ಕೋವಿಡ್ ಸೆಂಟರ್​ನಲ್ಲಿ ಬೆಂಕಿ ಅವಘಡ: 7 ಮಂದಿ ಸಾವು

ಕಾರ್ಪೊರೇಟ್ ಸಂಸ್ಥೆಗಳಿಗೆ ಕೋವಿಡ್ ಕೇರ್ ಸೆಂಟರ್ ಆಗಿ ನಿರ್ವಹಿಸಲಾಗುತ್ತಿದ್ದ ಖಾಸಗಿ ಹೋಟೆಲ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

news18
Updated:August 9, 2020, 9:08 AM IST
Fire Accident - ಆಂಧ್ರದ ಕೋವಿಡ್ ಸೆಂಟರ್​ನಲ್ಲಿ ಬೆಂಕಿ ಅವಘಡ: 7 ಮಂದಿ ಸಾವು
ವಿಜಯವಾಡದ ತಾತ್ಕಾಲಿಕ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಬೆಂಕಿ ಅವಘಡ
  • News18
  • Last Updated: August 9, 2020, 9:08 AM IST
  • Share this:
ವಿಜಯವಾಡ(ಆ. 09): ಇಲ್ಲಿ ಕೋವಿಡ್-19 ಕೇರ್ ಸೆಂಟರ್ ಆಗಿ ಬಳಕೆಯಾಗುತ್ತಿದ್ದ ಸ್ವರ್ಣ ಪ್ಯಾಲೇಸ್ ಹೋಟೆಲ್​ನಲ್ಲಿ ಇಂದು ಬೆಳಗಿನ ಜಾವ 5 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 7 ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರ ಪೈಕಿ 3 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು 20 ಮಂದಿಯನ್ನು ಘಟನಾ ಸ್ಥಳದಿಂದ ಪಾರು ಮಾಡಲಾಗಿದೆ. ಇನ್ನೂ ಹಲವರು ಈ ಹೋಟೆಲ್ ಕಟ್ಟಡದಲ್ಲಿ ಸಿಲುಕಿದ್ದಾರೆ. ಅಗ್ನಿಶಾಮದ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಒಟ್ಟು 30 ರೋಗಿಗಳು ಇಲ್ಲಿ ದಾಖಲಾಗಿದ್ದರೆನ್ನಲಾಗಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಇದೇ ವೇಳೆ, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಗಳನ್ನ ಚುರುಕುಗೊಳಿಸಿ, ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದ್ಧಾರೆ. ಹಾಗೆಯೆ, ಈ ದುರ್ಘಟನೆ ಸಂಭವಿಸಲು ಕಾರಣ ಏನೆಂದು ಪತ್ತೆ ಹಚ್ಚಲು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.

ಇದನ್ನೂ ಓದಿ: ಮುಖೇಶ್ ಅಂಬಾನಿ ಈಗ ಜಗತ್ತಿನ 4ನೇ ಅತಿದೊಡ್ಡ ಶ್ರೀಮಂತ; ಅವರ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟು ಗೊತ್ತೇ?ಕೆಲ ದಿನಗಳ ಹಿಂದಷ್ಟೇ ಗುಜರಾತ್ ರಾಜ್ಯದ ಅಹ್ಮದಾಬಾದ್​ನ ಖಾಸಗಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್​ನ ಐಸಿಯುನಲ್ಲೂ ಅಗ್ನಿಅವಘಡವಾಗಿ 8 ಮಂದಿ ರೋಗಿಗಳು ದುರ್ಮರಣವಪ್ಪಿದ್ದರು. ಆಸ್ಪತ್ರೆ ಸಿಬ್ಬಂದಿಯೊಬ್ಬರ ಪಿಪಿಇ ಕಿಟ್​ಗೆ ಬೆಂಕಿ ತಗುಲಿ ಆ ಬೆಂಕಿ ಅಪಘಾತವಾಗಿತ್ತು.
Published by: Vijayasarthy SN
First published: August 9, 2020, 8:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading