• Home
 • »
 • News
 • »
 • coronavirus-latest-news
 • »
 • ಪಾದರಾಯನಪುರ ಕಾರ್ಪೊರೇಟರ್​​ಗೆ ​ಕೊರೋನಾ: ಇಡೀ ಏರಿಯಾ ಸೀಲ್​​ಡೌನ್​​​, ಪಾಷಾ ವಿರುದ್ಧ ಎಫ್​ಐಆರ್​​

ಪಾದರಾಯನಪುರ ಕಾರ್ಪೊರೇಟರ್​​ಗೆ ​ಕೊರೋನಾ: ಇಡೀ ಏರಿಯಾ ಸೀಲ್​​ಡೌನ್​​​, ಪಾಷಾ ವಿರುದ್ಧ ಎಫ್​ಐಆರ್​​

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇನ್ನು, ಇಮ್ರಾನ್ ಪಾಷ ಜತೆಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಹೆಂಡತಿ, ಮೂವರು ಮಕ್ಕಳು, ಇಬ್ಬರು ಕಾರ್ ಚಾಲಕರು, ಮನೆ ಕೆಲಸದವರು, ಏಳು ಜನ ಕಚೇರಿ ಸಿಬ್ಬಂದಿ ಸೇರಿ ಒಟ್ಟು 21 ಜನರನ್ನು ಕ್ವಾರಂಟೈನ್​​ ಮಾಡಲಾಗಿದೆ. ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ.

 • Share this:

  ಬೆಂಗಳೂರು(ಮೇ.31): ಪಾದರಾಯನಪುರದ ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೋನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೀಗ ಇಡೀ ಏರಿಯಾ ಸೀಲ್ಡೌನ್​​ ಮಾಡಲಾಗಿದೆ. ಜತೆಗೆ ಕೊರೋನಾ ಪಾಸಿಟಿವ್​​ ಬಂದಾಗ ಕೂಡಲೇ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಾಗ ನೂರಾರು ಜನರನ್ನು ಮನೆ ಮುಂದೆ ಸೇರಿಸಿ ಹೈಡ್ರಾಮಾ ಸೃಷ್ಟಿಸಿದ್ದಕ್ಕೆ ಇಮ್ರಾನ್​​ ಪಾಷಾ ವಿರುದ್ಧ ಎಫ್​ಐಆರ್​​ ಕೂಡ ದಾಖಲಾಗಿದೆ. ಐಪಿಸಿ ಸೆಕ್ಷನ್​​​ 143, 188 , 270, 271 ಅಡಿ ಜೆಜೆ ನಗರ ಪೊಲೀಸರು ಎಫ್​​ಐಆರ್ ದಾಖಲಿಸಿಕೊಂಡಿದ್ದಾರೆ.

  ಇತ್ತೀಚೆಗೆ ಕಂಟೈನ್‍ಮೆಂಟ್ ಜೋನ್‍ ಇದ್ದರೂ ಮುಂಜಾಗೃತ ಕ್ರಮವಹಿಸದೇ ಇಮ್ರಾನ್ ಪಾಷಾ ಓಡಾಡಿಕೊಂಡಿದ್ದರು. ನಂತರ ಶುಕ್ರವಾರ ಬೆಳ್ಳಗ್ಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯರು ನೀಡಿದ ವರದಿಯಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಇಮ್ರಾನ್ ಪಾಷರ ಮನೆ ಇರುವ ಪಾದರಾಯನಪುರದ 13ನೇ ಕ್ರಾಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ.

  ಇನ್ನು, ಇಮ್ರಾನ್ ಪಾಷ ಜತೆಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಹೆಂಡತಿ, ಮೂವರು ಮಕ್ಕಳು, ಇಬ್ಬರು ಕಾರ್ ಚಾಲಕರು, ಮನೆ ಕೆಲಸದವರು, ಏಳು ಜನ ಕಚೇರಿ ಸಿಬ್ಬಂದಿ ಸೇರಿ ಒಟ್ಟು 21 ಜನರನ್ನು ಕ್ವಾರಂಟೈನ್​​ ಮಾಡಲಾಗಿದೆ. ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ.

  ಇದನ್ನೂ ಓದಿ: ಇಂದಿಗೆ ನಾಲ್ಕನೇ ಹಂತದ ಲಾಕ್​ಡೌನ್ ಮುಕ್ತಾಯ; ಐದನೇ ಹಂತದ ಲಾಕ್​ಡೌನ್​ನಲ್ಲಿ ಹಲವು ರಿಯಾಯಿತಿ?

  ಪಾಷಾ ಕೋವಿಡ್ 19 ಸೋಂಕು ಇರುವುದು ದೃಢಪಟ್ಟ ಬಳಿಕವೂ ಆಸ್ಪತ್ರೆಗೆ ತೆರಳದೇ ಮನೆಯಲ್ಲಿದ್ದರು. ಈ ವೇಳೆ ಪಾದರಾಯನಪುರ ಕಾರ್ಪೊರೇಟರ್​ಗೆ ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರದ ಎಚ್ಚರಿಕೆ ಬಳಿಕ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಖುದ್ದು ಕಾರ್ಪೊರೇಟರ್ ಇಮ್ರಾನ್ ಪಾಷಾ ಮನವೊಲಿಸಿ ಆಸ್ಪತ್ರೆಗೆ ದಾಖಲ ಆಗುವಂತೆ ಮಾಡಿದ್ದರು. ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಆಂಬುಲೆನ್ಸ್‌ನಲ್ಲಿ ಪಾಷಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

  ಕಾರ್ಪೊರೇಟರ್ ಆಗಿದ್ದುಕೊಂಡು ಈ ರೀತಿ ಮಾಡಬಾರದು. ಕೊರೊನಾ ವೈರಸ್‌ ಚಿಕಿತ್ಸೆಗೆ ಒಳಗಾಗದೇ ನಿರಾಕರಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿತ್ತು.

  First published: