ಕೊರೋನಾ ಸೋಂಕು ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಬಿಜೆಪಿ ಸಂಸದನ ವಿರುದ್ದ ಎಫ್​ಐಆರ್​ ದಾಖಲು

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬಂಕುರಾ(ಪಶ್ಚಿಮ ಬಂಗಾಳ); ಎರಡು ಶವಗಳ ಅಂತ್ಯಕ್ರಿಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಬಿಜೆಪಿ ಸಂಸದ ಸುಭಾಷ್ ಸರ್ಕಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

  ತೃಣಮೂಲ ಕಾಂಗ್ರೆಸ್ ಮುಖಂಡ ಜಯದೀಪ್ ಚಟ್ಟೋಪಾಧ್ಯಾಯ ಅವರು ಬಂಕುರಾ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬಂಕುರಾ ಸಂಸದನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  ಕೊರೋನಾ ವೈರಸ್​ನಿಂದ ಮೃತಪಟ್ಟ ಇಬ್ಬರ ಮೃತದೇಹಗಳನ್ನು ಅಧಿಕಾರಿಗಳು ಸರಿಯಾದ ರೀತಿ ಅಂತ್ಯಕ್ರಿಯೆ ಮಾಡಿಲ್ಲ ಎಂದು ಬಿಜೆಪಿ ಸಂಸದ ಆರೋಪಿಸಿ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು, ಪೋಸ್ಟ್ ಮಾಡಿದ್ದರು.

  ಸಂಸದರು ಸ್ವತಃ ವೈದ್ಯರಾಗಿದ್ದರೂ ಯಾವುದೇ ವರದಿಯನ್ನು ನೋಡದೆ ಇಬ್ಬರು  ಕೋವಿಡ್​-19 ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡಲು ಪ್ರಯತ್ನಿಸಿದ್ದು ದುರದೃಷ್ಟಕರ ಎಂದು ಎಂದು ಟಿಎಂಸಿ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಸಂಸದ, ಮೃತದೇಶಗಳ ಮರಣೋತ್ತರ ಪರೀಕ್ಷಾ ವರದಿ ಬರದೆ ಜಿಲ್ಲಾಡಳಿತ ಹೇಗೆ ಶವಸಂಸ್ಕಾರ ನಡೆಸಿತು ಎಂದು ಪ್ರಶ್ನಿಸಿದ್ದಾರೆ.

  ಇದನ್ನೂ ಓದಿ : ಲಾಕ್​​ ಡೌನ್​​ ಸಮಯದಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಿಸುವಂತಿಲ್ಲ; ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ

  ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಶವಗಳನ್ನು ಏಪ್ರಿಲ್ 12 ರ ಮಧ್ಯರಾತ್ರಿ ಅಧಿಕಾರಿಗಳು ಅಂತ್ಯಕ್ರಿಯೆ ನಡೆಸಿದ್ದರು. ಇಬ್ಬರು ಕೊರೋನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದರು.
  First published: