ಕೇಂದ್ರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣ ಬಿಡುಗಡೆ: ಕರ್ನಾಟಕಕ್ಕೆ 1678 ಕೋಟಿ. ರೂ
ತೆರಿಗೆ ಹಣವನ್ನು ಬಿಡುಗಡೆ ಮಾಡಿದೆ. ಈ ಬಾರಿ ಬಜೆಟ್ನಲ್ಲಿ (2020-21) ಘೋಷಿಸಿದ್ದ ಅನುದಾನ, ಜಿಎಸ್ಟಿ ಪರಿಹಾರ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಜ್ಯ ಸರ್ಕಾರಗಳಿಗೆ ಹತ್ತಾರು ಸಾವಿರ ಕೋಟಿಗಳಷ್ಟು ಅನುದಾನ ಬರಬೇಕಿತ್ತು.
Updated:April 20, 2020, 9:40 PM IST

ಪ್ರಧಾನಿ ನರೇಂದ್ರ ಮೋದಿ.
- News18 Kannada
- Last Updated: April 20, 2020, 9:40 PM IST
ನವದೆಹಲಿ(ಏ.20): ಕೊರೋನಾ ಲಾಕ್ಡೌನ್ ಸಂದರ್ಭದಲ್ಲೇ ಕೇಂದ್ರ ಸರ್ಕಾರವೂ ರಾಜ್ಯಗಳಿಗೆ ನೀಡಬೇಕಿದ್ದ 46,038.70 ಕೋಟಿ ರೂ. ತೆರಿಗೆ ಹಣವನ್ನು ಬಿಡುಗಡೆ ಮಾಡಿದೆ. ಈ ಬಾರಿ ಬಜೆಟ್ನಲ್ಲಿ (2020-21) ಘೋಷಿಸಿದ್ದ ಅನುದಾನ, ಜಿಎಸ್ಟಿ ಪರಿಹಾರ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಜ್ಯ ಸರ್ಕಾರಗಳಿಗೆ ಹತ್ತಾರು ಸಾವಿರ ಕೋಟಿಗಳಷ್ಟು ಅನುದಾನ ಬರಬೇಕಿತ್ತು. ಅದರಂತೆಯೇ ಈಗ ಒಟ್ಟಿಗೆ ಎಲ್ಲಾ ರಾಜ್ಯಗಳ ಪಾಲಿನ ತೆರಿಗೆ ಅನುದಾನ ಬಿಡುಗಡೆ ಮಾಡಿದ್ದು, ಮೊದಲ ಕಂತಿನಲ್ಲಿ ಕರ್ನಾಟಕಕ್ಕೆ 1678 ಕೋಟಿ ರೂ. ನೀಡಲಾಗಿದೆ.
ಕೇಂದ್ರ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಏಪ್ರಿಲ್ ಕಂತಿನ ಹಣ ಹೀಗಿದೆ...
ಇದನ್ನೂ ಓದಿ: ಕೋವಿಡ್-19: ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರಾ ಗ್ರೂಪ್: ಹಾಡಿ ಹೊಗಳಿದ ಯುಎಸ್ ಕಾರ್ಯದರ್ಶಿ ಮೈಕ್ ಪೊಂಪಿಯೊ
ಕೇಂದ್ರ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಏಪ್ರಿಲ್ ಕಂತಿನ ಹಣ ಹೀಗಿದೆ...
- ಆಂಧ್ರಪ್ರದೇಶ- 1892.64 ಕೋಟಿ
- ಅರುಣಾಚಲ ಪ್ರದೇಶ - 810.28 ಕೋಟಿ
- ಅಸ್ಸಾಂ- 1441.48 ಕೋಟಿ
- ಬಿಹಾರ- 4631.96 ಕೋಟಿ
- ಛತ್ತೀಸ್ಗಢ- 1573.72 ಕೋಟಿ
- ಗೋವಾ- 177.72 ಕೋಟಿ
- ಗುಜರಾತ್- 1564.40 ಕೋಟಿ
- ಹರಿಯಾಣ- 498.15 ಕೋಟಿ
- ಹಿಮಾಚಲ ಪ್ರದೇಶ- 367.84 ಕೋಟಿ
- ಜಾರ್ಖಂಡ್- 1525.27 ಕೋಟಿ
- ಕರ್ನಾಟಕ- 1678.57 ಕೋಟಿ
- ಕೇರಳ- 894.53 ಕೋಟಿ
- ಮಧ್ಯಪ್ರದೇಶ- 3630.60 ಕೋಟಿ
- ಮಹಾರಾಷ್ಟ್ರ- 2824.47 ಕೋಟಿ
- ಮಣಿಪುರ- 330.56 ಕೋಟಿ
- ಮೇಘಾಲಯ- 352.20 ಕೋಟಿ
- ಮಿಜೋರಾಂ- 232.96 ಕೋಟಿ
- ನಾಗಾಲ್ಯಾಂಡ್- 263.80 ಕೋಟಿ
- ಒಡಿಶಾ- 2131.13 ಕೋಟಿ
- ಪಂಜಾಬ್- 823.16 ಕೋಟಿ
- ರಾಜಸ್ಥಾನ- 2752.65 ಕೋಟಿ
- ಸಿಕ್ಕಿಂ- 178.64 ಕೋಟಿ
- ತಮಿಳುನಾಡು- 1928.56 ಕೋಟಿ
- ತೆಲಂಗಾಣ- 982.00 ಕೋಟಿ
- ತ್ರಿಪುರಾ- 326.42 ಕೋಟಿ
- ಉತ್ತರ ಪ್ರದೇಶ- 8255.19 ಕೋಟಿ
- ಉತ್ತರಾಖಂಡ- 508.27 ಕೋಟಿ
- ಪಶ್ಚಿಮ ಬಂಗಾಳ- 46038.70 ಕೋಟಿ
ಇದನ್ನೂ ಓದಿ: ಕೋವಿಡ್-19: ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರಾ ಗ್ರೂಪ್: ಹಾಡಿ ಹೊಗಳಿದ ಯುಎಸ್ ಕಾರ್ಯದರ್ಶಿ ಮೈಕ್ ಪೊಂಪಿಯೊ