Nirmala Sitharaman: ಇಂದು 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಬಗ್ಗೆ ಇನ್ನಷ್ಟು ವಿವರಣೆ ನೀಡಲಿರುವ ನಿರ್ಮಲಾ ಸೀತಾರಾಮನ್

ಹಲವು ವಿಭಾಗಗಳಲ್ಲಿ ಅಸಂಘಟಿತ ವಲಯ ಪ್ರತ್ಯೇಕಿಸುವ ಸಾಧ್ಯತೆ ಇದೆ. ಕೆಲಸಗಳ ಆಧರಿಸಿ ಆದ್ಯತೆ ‌ಮೇರೆಗೆ ನೆರವು ನೀಡುವ ಪ್ರಯತ್ನ ಮಾಡಬಹುದು. ದಿನಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಒಂದು ವರ್ಗವಾಗಿದ್ದು ಅವರನ್ನು ಪ್ರತ್ಯೇಕವಾಗಿ ಪರಿಗಣಿಸಬಹುದು. ಕಟ್ಟಡ ಕಾರ್ಮಿಕರು ಖಾಸಗಿ ಕ್ಷೇತ್ರಗಳ ಶ್ರಮಿಕರ ಮತ್ತೊಂದು ವರ್ಗ ಅವರನ್ನು ಬೇರೊಂದು ರೀತಿಯಲ್ಲಿ ಗಣನೆಗೆ ತೆಗೆದುಕೊಳ್ಳಬಹುದು.

news18-kannada
Updated:May 14, 2020, 12:10 PM IST
Nirmala Sitharaman: ಇಂದು 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಬಗ್ಗೆ ಇನ್ನಷ್ಟು ವಿವರಣೆ ನೀಡಲಿರುವ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಬಗ್ಗೆ ನಿನ್ನೆಯಷ್ಟೇ ಮೊದಲ ಹಂತದ ವಿವರಣೆ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಸಂಜೆ 4 ಗಂಟೆಗೆ ಮತ್ತೊಂದು ಸುದ್ದಿಗೋಷ್ಟಿ ನಡೆಸಿ ಇನ್ನೊಂದಿಷ್ಟು ವಿವರಣೆ ನೀಡಲಿದ್ದಾರೆ.


ನಿನ್ನೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನಲ್ಲಿ‌ 5 ಸಾವಿರ ಕೋಟಿ ರೂಪಾಯಿ ಹಣವನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ(MSME)  ವಲಯಗಳಿಗೆ ಮತ್ತು ಹಣದ ಹರಿವು ಹೆಚ್ಚಿಸಲು ಕೈಗೊಳ್ಳುವ ಕ್ರಮಗಳ ಭಾಗವಾಗಿ ನೀಡಲಾಗುವುದೆಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದರು. ಇದೀಗ ಬಾಕಿ 15 ಸಾವಿರ ಲಕ್ಷ ಕೋಟಿ ರೂಪಾಯಿಗಳ ಬಗ್ಗೆ ಇಂದು ಇನ್ನಷ್ಟು ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು, ನಿರ್ಮಲಾ ಸೀತಾರಾಮನ್ ಅವರ ಸುದ್ದಿಗೋಷ್ಟಿ ಬಗ್ಗೆ  ಕುತೂಹಲ ಹೆಚ್ಚಾಗಿದೆ. ನಿರ್ಮಲಾ ಸೀತರಾಮನ್​ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ಬಗ್ಗೆ ಮೂರ್ನಾಲ್ಕು ಅಥವಾ ನಾಲ್ಕೈದು ಹಂತಗಳಲ್ಲಿ ಸುದ್ದಿಗೋಷ್ಟಿ ನಡೆಸಿ ವಿವರಣೆ ನೀಡಲಿದ್ದಾರೆ ಎಂಬ ಮಾಹಿತಿ ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.

ಇಂದು ನಿರ್ಮಲಾ ಸೀತರಾಮನ್ ಕೃಷಿ ಅಥವಾ ಅಸಂಘಟಿತ ಕಾರ್ಮಿಕ ವಲಯಗಳ ಬಗ್ಗೆ ಮಾಹಿತಿ ನೀಡಬಹುದು. ನಿನ್ನೆ ಕೈಗಾರಿಕೋದ್ಯಮಿಗಳ ಬಗ್ಗೆ ಮಾತನಾಡಿದ್ದ ಅವರು ಈಗ ಕಾರ್ಮಿಕರ ಬಗ್ಗೆ ಹೇಳಬಹುದು. ವಿಶೇಷವಾಗಿ ಅಸಂಘಟಿತ ವಲಯಕ್ಕೆ ಪ್ಯಾಕೇಜಿನಲ್ಲಿ ಏನೇನ್ನು ಕೊಡಲಾಗುತ್ತದೆ ಎಂದು ವಿವರಣೆ ನೀಡಬಹುದು ಎಂದು ಹೇಳಲಾಗುತ್ತಿದೆ‌.

ಪ್ರಧಾನಿ ಮೋದಿ ಏಕಾಏಕಿ ನೋಟು ರದ್ದುಗೊಳಿಸಿದ್ದರು. ಅದೇ ರೀತಿ ಏಕಾಏಕಿ ಲಾಕ್ಡೌನ್ ಮಾಡಿದ್ದರು. ಇದು ಸೂಕ್ತವಲ್ಲದ ತೀರ್ಮಾನ ಎಂದು ಗೊತ್ತಾಗಿದ್ದೇ ವಲಸೆ ಕಾರ್ಮಿಕರ ಸಮಸ್ಯೆ ತಾರಕಕ್ಕೆ ಏರಿದಾಗ. ಹಾಗಾಗಿ ಇವತ್ತು ನಿರ್ಮಲಾ ಸೀತಾರಾಮನ್ ವಲಸೆ ಕಾರ್ಮಿಕರ ಬಗ್ಗೆಯೇ ಪ್ಯಾಕೇಜಿನಲ್ಲಿ ಅವರಿಗೆ ಏನೇನೂ‌ ಸಿಗಲಿದೆ ಎಂದು ತಿಳಿಸುವ ಸಾಧ್ಯತೆ ಇದೆ.

ಈ ಶ್ರಮಿಕ ವರ್ಗ ಅಥವಾ ಅಸಂಘಟಿತ ವರ್ಗ ದೇಶದ ಆರ್ಥಿಕತೆ ಬೆನ್ನೆಲುಬು, ಉತ್ಪಾದನೆಯ ಮೂಲ ಶಕ್ತಿ. ಆದುದರಿಂದಲೇ ಅಸಂಘಟಿತ ವಲಯವನ್ನು ಭಾರತ, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕಿದೆ. ಹಾಗಾಗಿ ಈಗ ಕೈಯಲ್ಲಿ‌ ಕೆಲಸ ಮತ್ತು ಜೇಬಿನಲ್ಲಿ ಹಣ ಇಲ್ಲದ ಅಸಂಘಟಿತರೆಡೆಗೆ ಸಹಾಯಹಸ್ತ ಚಾಚಲೇಬೇಕಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 3,722 ಕೋವಿಡ್​​-19 ಕೇಸ್ ಪತ್ತೆ; 78 ಸಾವಿರ ದಾಟಿದ ಸೋಂಕಿತರ ಸಂಖ್ಯೆ; ಒಟ್ಟು 2,549 ಸಾವು

ಹಲವು ವಿಭಾಗಗಳಲ್ಲಿ ಅಸಂಘಟಿತ ವಲಯ ಪ್ರತ್ಯೇಕಿಸುವ ಸಾಧ್ಯತೆ ಇದೆ. ಕೆಲಸಗಳ ಆಧರಿಸಿ ಆದ್ಯತೆ ‌ಮೇರೆಗೆ ನೆರವು ನೀಡುವ ಪ್ರಯತ್ನ ಮಾಡಬಹುದು. ದಿನಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಒಂದು ವರ್ಗವಾಗಿದ್ದು ಅವರನ್ನು ಪ್ರತ್ಯೇಕವಾಗಿ ಪರಿಗಣಿಸಬಹುದು. ಕಟ್ಟಡ ಕಾರ್ಮಿಕರು ಖಾಸಗಿ ಕ್ಷೇತ್ರಗಳ ಶ್ರಮಿಕರ ಮತ್ತೊಂದು ವರ್ಗ ಅವರನ್ನು ಬೇರೊಂದು ರೀತಿಯಲ್ಲಿ ಗಣನೆಗೆ ತೆಗೆದುಕೊಳ್ಳಬಹುದು.

ತಿಂಗಳು ಸಂಬಂಳಕ್ಕೆ ದುಡಿಯುವವರು, ಆಟೋ ರಿಕ್ಷಾ ಕ್ಯಾಬ್ ಚಾಲಕರು ರಸ್ತೆ ಬದಿ ವ್ಯಾಪಾರಸ್ಥರು, ಗೂಡಗಂಡಿ ನಡೆಸುವರನ್ನು ವಿಂಗಡಿಸಿ ಆರ್ಥಿಕ ನೆರವು ಘೋಷಿಸಬಹುದು. ಈ ಕಾರ್ಮಿಕರಿಗೆ ಕಾರ್ಮಿಕರ ಕಲ್ಯಾಣ ನಿಧಿಯಡಿಯಿಂದ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬಹುದು. ಆರ್ಥಿಕ ನೆರವು ಹಾಗೂ ಸಾಲದ ರೂಪದಲ್ಲಿ ಎರಡೂ ವಿಧದಲ್ಲೂ ಸಹಾಯ ನೀಡಬಹುದು.

ಇದಲ್ಲದೆ ಕೃಷಿ ವಲಯಕ್ಕೆ ಪ್ಯಾಕೇಜಿನಲ್ಲಿ ಏನೇನು ಸೌಲಭ್ಯಗಳು ಆರ್ಥಿಕ ಸಹಕಾರಗಳನ್ನು ನಿರ್ಮಲಾ ಸೀತಾರಾಮ್ ಅವರು ವಿವರಿಸಬಹುದು. ಕೃಷಿ ವಲಯದಲ್ಲಿ ಸುಧಾರಣೆ ತರಲು ಕೃಷಿ ಕ್ಷೇತ್ರಕ್ಕೆ ಒಟ್ಟಾರೆ ವಿಶೇಷ ಪ್ಯಾಕೇಜ್ ಘೋಷಿಸಿಬಹುದು. ಮುಂಗಾರು ಆರಂಭವಾಗುತ್ತಿದ್ದು ಭಿತ್ತನೆ ಬೀಜ, ರಸಗೊಬ್ಬರಕ್ಕೆ ರಿಯಾಯಿತಿ ನೀಡಬಹುದು. ಕಡಿಮೆ ಬಡ್ಡಿದರ ಅಥವಾ ಬಡ್ಡಿ ರಹಿತ ಕೃಷಿ ಸಾಲ ನೀಡಬಹುದು ಎಂಬ ನಿರೀಕ್ಷೆಗಳಿವೆ.

ಇದನ್ನೂ ಓದಿ: 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್ ವಿವರಣೆ; ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಂದು ಸುದ್ದಿಗೋಷ್ಠಿ ಸಾಧ್ಯತೆ?

ಅಲ್ಲದೆ ಬೇರೆ ರೂಪಗಳಲ್ಲೂ ಕೃಷಿ ಕ್ಷೇತ್ರಕ್ಕೆ ಮತ್ತು ಕೃಷಿಕರಿಗೆ ಅನುಕೂಲ ಮಾಡಿಕೊಡಲು ಕೃಷಿ ಯಂತ್ರೋಪಕರಣಗಳ‌ ಖರೀದಿಗೆ ಪ್ರೊತ್ಸಾಹಿಸಬಹುದು. ಕೃಷಿ ಸಾಲ ಮರುಪಾವತಿ ಗೆ ಮತ್ತಷ್ಟು ಅವಕಾಶ ಅಥಾವ ಕೃಷಿ ಸಾಲದ ಮೇಲಿನ ಮೂರು ತಿಂಗಳ ಬಡ್ಡ ಮನ್ನಾ ಮಾಡಬಹುದು. ಭೂ ಹಿಡುವಳಿ ಆಧಾರದ ಮೇಲೆ ರೈತರನ್ನ ಪ್ರತ್ಯೇಕಿಸಿ ಕಿಸಾನ್ ಸಮ್ಮಾನ್ ಯೋಜನೆಯಡಿ ಒಂದು ಹಂತದಲ್ಲಿ ಆರ್ಥಿಕವಾಗಿ ನೆರವು ನೀಡಬಹುದು ಎಂದು ಹೇಳಲಾಗುತ್ತಿದೆ.

ಅನ್ನದಾತರ ಬಹಳ ದಿನಗಳ ಬೇಡಿಕೆ ಆಗಿರುವ ಕೃಷಿ ಉತ್ಪನ್ನಗಳಿಗೆ ಗೆ ಬೆಂಬಲ ಬೆಲೆ ಘೋಷಣೆ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅದೇ ರೀತಿ ವಾಣಿಜ್ಯ ಬೆಳೆಗಳ ರಫ್ತಿಗೆ ಹೆಚ್ಚು ಪ್ರೊತ್ಸಾಹ ನೀಡಬಹುದು ಎಂದು ಹೇಳಲಾಗುತ್ತಿದೆ‌.
First published: May 14, 2020, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading