ಲಾಕ್‌ಡೌನ್ ಪರಿಹಾರಕ್ಕಾಗಿ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ; ಯಾವ ವಲಯಕ್ಕೆ ಎಷ್ಟು ಹಣ? ಇಲ್ಲಿದೆ ಮಾಹಿತಿ

ದಿನಗೂಲಿ ನೌಕರರ ಕೂಲಿಯನ್ನು 180 ರಿಂದ 200 ರೂಪಾಯಿಗೆ ಏರಿಸಲಾಗಿದೆ. ಅಲ್ಲದೆ ಕಟ್ಟಡ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಖಾತೆಯಲ್ಲಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ ನಿಧಿಯಲ್ಲಿರುವ ಸುಮಾರು 31,000 ಕೋಟಿ ಹಣವನ್ನು ಆಯಾ ರಾಜ್ಯಗಳು ಕಾರ್ಮಿಕರಿಗೆ ಸಹಾಯ ಧನ ನೀಡಲು ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

MAshok Kumar | news18-kannada
Updated:March 26, 2020, 2:33 PM IST
ಲಾಕ್‌ಡೌನ್ ಪರಿಹಾರಕ್ಕಾಗಿ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ; ಯಾವ ವಲಯಕ್ಕೆ ಎಷ್ಟು ಹಣ? ಇಲ್ಲಿದೆ ಮಾಹಿತಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
  • Share this:
ನವ ದೆಹಲಿ (ಮಾರ್ಚ್‌ 26); ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ ಮತ್ತು ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿರುವ ಕ್ರಮದಿಂದಾಗಿ ನಷ್ಟ ಅನುಭವಿಸಲಿರುವ ಮಧ್ಯಮ ಮತ್ತು ಕೆಲ ವರ್ಗದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.

ಇಂದು ಪತ್ರಿಕಾಗೋಷ್ಠಿ ನಡೆಸಿರುವ ಹಣಕಾಸು ಸಚಿವೆ ಲಾಕ್‌ಡೌನ್ ನಡುವೆ ಮುಂದಿನ ಮೂರು ತಿಂಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಅಲ್ಲದೆ, ಈ ಪ್ಯಾಕೇಜ್‌ನಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಹತ್ತಾರು ನೂತನ ಯೋಜನೆಗಳನ್ನು ಘೋಷಿಸಲಾಗಿದೆ.

ಈ ಪ್ಯಾಕೇಜ್‌ನಲ್ಲಿ ತಿಳಿಸಲಾಗಿರುವಂತೆ ಮುಂದಿನ ಮೂರು ತಿಂಗಳು ಬಿಪಿಎಲ್‌ ಕಾರ್ಡುದಾರರಿಗೆ 5 ಕೆಜಿ ಉಚಿತ ಅಕ್ಕಿ ಮತ್ತು ಗೋದಿಯನ್ನು ನೀಡಲು ಉದ್ದೇಶಿಸಲಾಗಿದೆ. ಇನ್ನೂ ಉಜ್ವಲ ಯೋಜನೆಯ ಅಡಿಯಲ್ಲಿ 8.3 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ಮುಂದಿನ ಮೂರು ತಿಂಗಳಿಗೆ ಉಚಿತವಾಗಿ ಅಡಿಗೆ ಅನಿಲ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಸ್ಮನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಸುಮಾರು 8.9 ಕೋಟಿ ರೈತರ ಖಾತೆಗಳಿಗೆ ನೇರವಾಗಿ ಮುಂದಿನ ಮೂರು ತಿಂಗಳಿಗೆ ತಲಾ 2,000 ಹಣ ಜಮಾವಣೆ ಮಾಡಲಾಗುವುದು. ಮೊದಲ ಕಂತಿನ ಹಣವನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಹಾಕಲಾಗುವುದು ಎಂದು ತಿಳಿಸಲಾಗಿದೆ.

ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನ್‌ಧನ್ ಖಾತೆ ಹೊಂದಿರುವ ಎಲ್ಲಾ ಮಹಿಳೆಯರ ಖಾತೆಗಳಿಗೂ ನೇರವಾಗಿ 500 ರೂ ಹಾಕಲಾಗುವುದು. ಅಲ್ಲದೆ, ಮಹಿಳಾ ಸ್ವಸಹಾಯ ಸಂಘಗಳಿಗೆ 10 ಲಕ್ಷದವರೆಗೆ ಶ್ಯೂರಿಟಿ ಇಲ್ಲದೆ ಸಾಲ ನೀಡಲಾಗುವುದು ಈ ಮೂಲಕ ಸುಮಾರು 20 ಕೋಟಿ ಮಹಿಳೆಯರು ಅನುಕೂಲ ಪಡೆಯಲಿದ್ದಾರೆ.

ದಿನಗೂಲಿ ನೌಕರರ ಕೂಲಿಯನ್ನು 180 ರಿಂದ 200 ರೂಪಾಯಿಗೆ ಏರಿಸಲಾಗಿದೆ. ಅಲ್ಲದೆ ಕಟ್ಟಡ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಖಾತೆಯಲ್ಲಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ ನಿಧಿಯಲ್ಲಿರುವ ಸುಮಾರು 31,000 ಕೋಟಿ ಹಣವನ್ನು ಆಯಾ ರಾಜ್ಯಗಳು ಕಾರ್ಮಿಕರಿಗೆ ಸಹಾಯ ಧನ ನೀಡಲು ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸಂಘಟಿತ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2 ವಿಶೇಷ ಪ್ಯಾಕೇಜ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ವಲಯದ ಕಾರ್ಮಿಕರಿಗೆ ಸರ್ಕಾರ ದೀನ ದಯಾಳ ಉಪಾಧ್ಯಾಯ ಯೋಜನೆಯ ಅಡಿಯಲ್ಲಿ ತಲಾ 20 ಲಕ್ಷ ರೂ. ಸಾಲ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು 2 ಕೋಟಿ ಕುಟುಂಬಗಳು ಲಾಭ ಪಡೆಯಲಿವೆ.ಅಲ್ಲದೆ, ಕಾರ್ಮಿಕರ ಪಿಎಫ್ (ಭವಿಷ್ಯ ನಿಧಿ) ಹಣವನ್ನು ಹಿಂಪಡೆಯಲು ನಿಯಮವನ್ನು ಸರಳಗೊಳಿಸಲಾಗಿದೆ. 15,000 ಕ್ಕಿಂತ ಕಡಿಮೆ ವೇತನ ಹೊಂದಿರುವವರಿಗೆ ಕೇಂದ್ರ ಸರ್ಕಾರವೇ ಶೇ.24 ರಷ್ಟು ಪಿಎಫ್ ಹಣ ಭರಿಸಲಿದೆ. ಶೇ.75ರಷ್ಟು ಪಿಎಫ್ ಹಣವನ್ನು ಪಡೆಯಲು ಅವಕಾಶ ನೀಡಲಾಗಿದ್ದು, ಕಂಪೆನಿ ಮತ್ತು ಉದ್ಯೋಗಿ ಎರಡೂ ಪಾಲನ್ನೂ ಸರ್ಕಾರವೇ ನೀಡಲಿದೆ.

ವೃದ್ದಾಪ್ಯ, ವಿಧವಾ ಮತ್ತು ಅಂಗವಿಕಲರಿಗೆ 2000 ಹೆಚ್ಚುವರಿ ಪಿಂಚಣಿ ನಿಗದಿ ಮಾಡಲಾಗಿದ್ದು ಈ ಹಣ ನೇರವಾಗಿ ಅವರ ಖಾತೆಗೆ ವರ್ಗಾವಣೆಯಾಗುವಂತೆ ಆಯಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ, ಚಿಕಿತ್ಸೆ ಮತ್ತು ಪರೀಕ್ಷಾ ಲ್ಯಾಬ್ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕೊರೋನಾ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 25 ರಿಂದ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ಧಾರೆ. ಈ ಲಾಕ್‌ಡೌನ್‌ ನಿಂದಾಗಿ ದೇಶಕ್ಕೆ 9 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ನಿರ್ಧಾರದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನ ಸಾಕಷ್ಟು ನಷ್ಟ ಅನುಭವಿಸಲಿದ್ದಾರೆ. ಮತ್ತು ಸಂಕಷ್ಟಕ್ಕೆ ಎದುರಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಪರಿಣಾಮ ಇಂದು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ಇದನ್ನೂ ಓದಿ : Covid-19 ನಿವಾರಣೆಗೆ ಲಾಕ್‌ಡೌನ್ ಮೂಲಕ ಎರಡನೇ ಅವಕಾಶವನ್ನು ರಚಿಸಿದ್ದೀರಿ; ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ
First published: March 26, 2020, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading