• ಹೋಂ
  • »
  • ನ್ಯೂಸ್
  • »
  • Corona
  • »
  • ತುರುವೇಕೆರೆಯಲ್ಲಿ ಬಿಜೆಪಿ V/S​ ಜೆಡಿಎಸ್​​: ಹಾಲಿ ಮತ್ತು ಮಾಜಿ ಶಾಸಕರ ನಡುವೆ ಫೈಟ್​​; 144 ಸೆಕ್ಷನ್​​

ತುರುವೇಕೆರೆಯಲ್ಲಿ ಬಿಜೆಪಿ V/S​ ಜೆಡಿಎಸ್​​: ಹಾಲಿ ಮತ್ತು ಮಾಜಿ ಶಾಸಕರ ನಡುವೆ ಫೈಟ್​​; 144 ಸೆಕ್ಷನ್​​

ಬಿಜೆಪಿ ಮತ್ತು ಜೆಡಿಎಸ್​ ಸಾಂದರ್ಭಿಕ ಚಿತ್ರ

ಬಿಜೆಪಿ ಮತ್ತು ಜೆಡಿಎಸ್​ ಸಾಂದರ್ಭಿಕ ಚಿತ್ರ

ತುರುವೇಕೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಮಸಾಲಾ ಜಯರಾಮ್ ಹಾಗೂ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪರ ನಡುವೆ ರಾಜಕೀಯ ಬೃಹನ್ನಾಟಕ ನಡೆಯುತಿದೆ. ಕ್ಷುಲ್ಲಕ ಕಾರಣವೊಂದನ್ನು ಇಟ್ಟುಕೊಂಡು ಇಬ್ಬರು ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ.

  • Share this:

ತುಮಕೂರು(ಆ.30): ತುಮಕೂರು ಗ್ರಾಮಾಂತರ ಕ್ಷೇತ್ರದಂತೆ ತುರುವೇಕೆರೆ ಕ್ಷೇತ್ರದಲ್ಲೂ ಹಾಲಿ ಮಾತ್ತು ಮಾಜಿ ಶಾಸಕರುಗಳ ನಡುವೆ ಕ್ಷುಲ್ಲಕ ಕಾರಣವೊಂದಕ್ಕೆ ಫೈಟ್ ಶುರುವಾಗಿದೆ. ಇದರ ಪರಿಣಾಮ ಇಡೀ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿ ಸೋಮವಾರ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ದವಾದ ಜೆಡಿಎಸ್​​ಗೆ ಶಾಕ್ ಕೊಟ್ಟಿದೆ. ಆದರೂ ಪ್ರತಿಭಟನೆ ಮಾಡಿಯೇ ತೀರುತ್ತೆವೆ ಎಂಬ ಜೆಡಿಎಸ್ ನಾಯಕರ ಹೇಳಿಕೆಯಿಂದ ಪರಿಸ್ಥಿತಿ ಇನ್ನಷ್ಟು ವಿಷಮವಾಗುವ‌ ಸಾಧ್ಯತೆ ಇದೆ.


ತುರುವೇಕೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಮಸಾಲಾ ಜಯರಾಮ್ ಹಾಗೂ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪರ ನಡುವೆ ರಾಜಕೀಯ ಬೃಹನ್ನಾಟಕ ನಡೆಯುತಿದೆ. ಕ್ಷುಲ್ಲಕ ಕಾರಣವೊಂದನ್ನು ಇಟ್ಟುಕೊಂಡು ಇಬ್ಬರು ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ. ತುರುವೇಕೆರೆಯ ಗುಡ್ಡೇನಹಳ್ಳಿ ಬಳಿ ಒತ್ತುವರಿ ಜಮೀನೊಂದರಲ್ಲಿ ಬೆಳೆದಿದ್ದ ತೆಂಗಿನ ಸಸಿಗಳನ್ನ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿದ್ದು, ಹಾಲಿ ಮಾಜಿಗಳ ಕಚ್ಚಾಟಕ್ಕೆ ನೇರ ಕಾರಣವಾಗಿದೆ.


ಅಕ್ರಮವಾಗಿ ಬೆಳೆದಿದ್ದ ಈ ತೋಟ ಜೆಡಿಎಸ್ ಕಾರ್ಯಕರ್ತರದ್ದಾಗಿದ್ದು, ಬಿಜೆಪಿ ಶಾಸಕ ಮಸಾಲಾ ಜಯರಾಮ್ ಆಜ್ಞೆಯಂತೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಅನ್ನೋದು ಜೆಡಿಎಸ್ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪರ ಆರೋಪ. ಶಾಸಕರ ಮೇಲೆ ಆರೋಪ ಹೊರಿಸಿದ ಜೆಡಿಎಸ್ ಮುಖಂಡರು ಕೊಲೆ ಗಡುಕ ಶಾಸಕ ಎಂದು ಪ್ರತಿಭಟನೆಯ ಸಂಕೇತವಾಗಿ ಫ್ಲೆಕ್ಸ್ ಹಾಕಿದ್ರು. ಇದು ಬಿಜೆಪಿ ಅವರ ಕೆಂಗಣ್ಣಿಗೆ ಗುರಿಯಾಗಿತ್ತು.


ಇನ್ನು, ತಕ್ಷಣ ಪೊಲೀಸರು ಕೊಲೆ ಗಡುಕ ಎಂಬ ಪದ ತೆರವುಗೊಳಿಸಿ ಫ್ಲೆಕ್ಸ್ ಹಾಗೇ ಉಳಿಸಿದ್ದರು. ಬಳಿಕ ಬಿಜೆಪಿ ಕಾರ್ಯಕರ್ತರು ಎಲ್ಲಾ ಫ್ಲೆಕ್ಸ್​ಗಳನ್ನ ತೆರವುಗೊಳಿಸಿದರು. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ದ್ವೇಷಕ್ಕೆಕಾರಣವಾಯ್ತು. ಬಿಜೆಪಿಯವರ ಧೋರಣೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಮಾಡಲು ಜೆಡಿಎಸ್ ಸಿದ್ದವಾಗಿದೆ.


ಜೆಡಿಎಸ್ ಪ್ರತಿಭಟನೆ ಮಾಡಿದರೆ ನಾವೂ ಅದೇ ದಿನ ಪ್ರತಿಭಟನೆ ಮಾಡುತ್ತೆವೆ ಎಂದು ಬಿಜೆಪಿ ಪಕ್ಷದವರು ಕ್ಯಾತೆ‌ ತೆಗೆದಿದ್ದಾರೆ. ಎರಡೂ ಪಕ್ಷದವರು ಒಂದೇ ದಿನ ಒಂದೇ ಕಡೆ ಪ್ರತಿಭಟನೆ ನಡೆಸಿದರೆ ಘರ್ಷಣೆ ನಡೆದು ಪರಿಸ್ಥಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಅಲ್ಲದೇ ಕೊರೋನಾ ಸಂದರ್ಭದಲ್ಲಿ ಜನರನ್ನೂ ಸೇರಿಸಿ ಪ್ರತಿಭಟನೆ ಮಾಡೋದು ತಪ್ಪು. ಇದನ್ನು ಪರಿಗಣಿಸಿದ ಜಿಲ್ಲಾಡಳಿ ಸೋಮವಾರ 144‌ ಸೆಕ್ಷನ್ ಜಾರಿ ಗೊಳಿಸಿ ಆದೇಶ ಹೊರಡಿಸಿದೆ.


ಇದನ್ನೂ ಓದಿ: Gali Janardhana Reddy: ಮಾಜಿ ಸಚಿವ ಗಾಲಿ ಜನಾರ್ದನ್​​ ರೆಡ್ಡಿಗೆ ಕೊರೋನಾ ಪಾಸಿಟಿವ್​​​


ಜಿಲ್ಲಾಡಳಿತದ ಈ ಆದೇಶ ಜೆಡಿಎಸ್​​ನವರಿಗೆ ಶಾಕ್ ಕೊಟ್ಟಂತಾಗಿದೆ. 144 ಸೆಕ್ಷನ್ ಜಾರಿ ಇದ್ದರೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಜೆಡಿಎಸ್ ಮಾಜಿ ಶಾಸಕ ಕೃಷ್ಣಪ್ಪ ಗುಡುಗಿದ್ದಾರೆ . ಹಾಗಾಗಿ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ‌ 500 ಜನ ಪೊಲೀಸರು, 30 ಪಿಎಸ್ ಐ ,2 ಡಿಎಸ್ಪಿಗಳನ್ನು ಸ್ಥಳದಲ್ಲಿ ನಿಯೋಜಿಸಿ ಕಣ್ಣಿಡಲಾಗಿದೆ.

top videos
    First published: