ಸಿಎಂ ಗೃಹ ಕಚೇರಿಯಲ್ಲಿ 6 ಸಿಬ್ಬಂದಿ, ಕಾವೇರಿ ನಿವಾಸದಲ್ಲಿ ಅಡುಗೆಭಟ್ಟ, ಕಾರ್ ಡ್ರೈವರ್​ಗೂ ಕೊರೋನಾ ಪಾಸಿಟಿವ್

ಸಿಎಂ ಬಿಎಸ್​ವೈ ಸಂಪರ್ಕಕ್ಕೆ ಬಂದಿದ್ದ ಹಲವು ಗಣ್ಯರು ಎಚ್ಚರ ವಹಿಸಿ ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಹೊಸ ಪೊಲೀಸ್ ಆಯುಕ್ತ ಕಮಲ್ ಕಾಂತ್, ಮಾಜಿ ಶಾಸಕ ಜೀವರಾಜ್ ಮೊದಲಾದವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ಧಾರೆ.

news18-kannada
Updated:August 3, 2020, 12:36 PM IST
ಸಿಎಂ ಗೃಹ ಕಚೇರಿಯಲ್ಲಿ 6 ಸಿಬ್ಬಂದಿ, ಕಾವೇರಿ ನಿವಾಸದಲ್ಲಿ ಅಡುಗೆಭಟ್ಟ, ಕಾರ್ ಡ್ರೈವರ್​ಗೂ ಕೊರೋನಾ ಪಾಸಿಟಿವ್
ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು(ಆ. 03): ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟ ಬಳಿಕ ಅವರ ಸಂಪರ್ಕದಲ್ಲಿದ್ದವರಿಗೂ ಆತಂಕ ಶುರುವಾಗಿದೆ. ಇದರ ಬೆನ್ನಲ್ಲೇ ಈಗ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿರುವ ಇನ್ನಷ್ಟು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಕಚೇರಿಯಲ್ಲಿ ಕೆಲಸ ಮಾಡುವ 6 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.ಇನ್ನೊಂದೆಡೆ, ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿನ ಸಿಬ್ಬಂದಿಗೂ ಸೋಂಕು ಇರುವುದು ಬೆಳಕಿಗೆ ಬಂದಿದೆ. ಕಾವೇರಿಯಲ್ಲಿ ಅಡುಗೆ ಕೆಲಸ ಮಾಡುವ ಒಬ್ಬ ವ್ಯಕ್ತಿ ಹಾಗೂ ಮುಖ್ಯಮಂತ್ರಿಗಳ ಕಾರು ಚಾಲಕರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಈಗ ಸಿಎಂ ಗೃಹ ಕಚೇರಿ ಕೃಷ್ಣಾ ಮತ್ತು ಸಿಎಂ ನಿವಾಸ ಕಾವೇರಿ ಎರಡೂ ಕಡೆ ಪ್ರತಿಯೊಬ್ಬ ವ್ಯಕ್ತಿಯ ಸ್ಯಾಂಪಲ್​ಗಳನ್ನ ಪಡೆದು ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಿಎಂ ಬಿಎಸ್​ ಯಡಿಯೂರಪ್ಪ ಮಗ ವಿಜಯೇಂದ್ರಗೆ ಕೊರೋನಾ ನೆಗೆಟಿವ್, ಮಗಳು ಪದ್ಮಾವತಿಗೆ ಪಾಸಿಟಿವ್

ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಜೊತೆ ಇದ್ದ ಅವರ ಮಗಳು ಪದ್ಮಾವತಿ ಅವರಿಗೆ ಸೋಂಕು ತಗುಲಿದೆ. ಸದ್ಯ ಯಡಿಯೂರಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂಗೆ ಪಾಸಿಟಿವ್ ಬಂದಿದ್ದರೂ ಅವರಲ್ಲಿ ಇನ್ನೂ ರೋಗಲಕ್ಷಣ ಕಾಣಿಸಿಲ್ಲ. ಮಣಿಪಾಲ ಆಸ್ಪತ್ರೆಯಲ್ಲಿ ಅವರ ಆರೋಗ್ಯ ಸ್ಥಿರವಾಗಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಬಂದಿದೆ. ಪೊಲೀಸರು ಆಸ್ಪತ್ರೆ ಬಳಿ ಬಿಗಿಭದ್ರತೆ ಒದಗಿಸಿದ್ದಾರೆ.

ಇದೇ ವೇಳೆ, ಗುಪ್ತಚರ ಇಲಾಖೆ ಎಡಿಜಿಪಿ ಬಿ ದಯಾನಂದ್, ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಯಡಿಯೂರಪ್ಪ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಕಲೆಹಾಕಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರು, ಡಿಸಿಎಂ ಸೇರಿ ಹಲವರನ್ನು ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ; ಟ್ರಾವೆಲ್ ಹಿಸ್ಟರಿ ಬಗ್ಗೆ ಇಲ್ಲಿದೆ ವಿವರ

ಇನ್ನು, ಸಿಎಂ ಬಿಎಸ್​ವೈ ಸಂಪರ್ಕಕ್ಕೆ ಬಂದಿದ್ದ ಹಲವು ಗಣ್ಯರು ಎಚ್ಚರ ವಹಿಸಿ ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಹೊಸ ಪೊಲೀಸ್ ಆಯುಕ್ತ ಕಮಲ್ ಕಾಂತ್, ಮಾಜಿ ಶಾಸಕ ಜೀವರಾಜ್ ಮೊದಲಾದವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ಧಾರೆ.

ಮಣಿಪಾಲ ಆಸ್ಪತ್ರೆಯ ಐದನೇ ಮಹಡಿಯನ್ನು ಸಿಎಂಗಾಗಿ ಮೀಸಲಿರಸಲಾಗಿದೆ. ಆಸ್ಪತ್ರೆಯಲ್ಲೇ ಸಿದ್ಧಪಡಿಸಿದ ಆಹಾರವನ್ನು ಯಡಿಯೂರಪ್ಪಗೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಓದಲು ಯಡಿಯೂರಪ್ಪ ಹಲವು ಪುಸ್ತಕಗಳನ್ನೂ ತರಿಸಿಕೊಂಡಿದ್ದಾರೆ.
Published by: Vijayasarthy SN
First published: August 3, 2020, 12:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading