• Home
 • »
 • News
 • »
 • coronavirus-latest-news
 • »
 • ಲಾಕ್​ಡೌನ್ ನಡುವೆಯೂ ದಾಖಲೆ ಪ್ರಮಾಣದ ರಸಗೊಬ್ಬರ ಮಾರಾಟ; ಉತ್ತಮ ಮುಂಗಾರು ಬಿತ್ತನೆಯ ಸೂಚನೆ

ಲಾಕ್​ಡೌನ್ ನಡುವೆಯೂ ದಾಖಲೆ ಪ್ರಮಾಣದ ರಸಗೊಬ್ಬರ ಮಾರಾಟ; ಉತ್ತಮ ಮುಂಗಾರು ಬಿತ್ತನೆಯ ಸೂಚನೆ

ಕೃಷಿಯಲ್ಲಿ ತೊಡಗಿರುವ ಕೃಷಿಕರು

ಕೃಷಿಯಲ್ಲಿ ತೊಡಗಿರುವ ಕೃಷಿಕರು

ಕೊರೋನಾ ಸಂಕಷ್ಟದ ಸಮಯದಲ್ಲೂ ಈ ಸಾಧನೆಗೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಹಾಗೂ ಅಭಿನಂದನೆಗಳು. ರಸಗೊಬ್ಬರ ದಾಸ್ತಾನು ಅಗತ್ಯವಿದ್ದ ಕಡೆ ಸುಸೂತ್ರವಾಗಿ ಸಾಗಣೆಯಾಗುವಂತೆ ವ್ಯವಸ್ಥೆ ಮಾಡಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.

 • Share this:

  ನವದೆಹಲಿ: ಕೊರೋನಾ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿರುವ ಲಾಕ್​ಡೌನ್ ಅಡಚಣೆ ಮಧ್ಯೆಯೂ ರಸಗೊಬ್ಬರ ಇಲಾಖೆಯು ಏಪ್ರಿಲ್ 22ರವರೆಗಿನ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟ ಆಗುವಂತೆ ನೋಡಿಕೊಂಡಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ.


  ಈ ಅವಧಿಯಲ್ಲಿ ಡೀಲರುಗಳು 15.77 ಲಕ್ಷ ಟನ್ ರಸಗೊಬ್ಬರ ಆವಕ ಮಾಡಿಕೊಂಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 46ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಡೀಲರುಗಳು 10.79 ಲಕ್ಷ ಟನ್ ರಸಗೊಬ್ಬರ ಖರೀದಿಸಿದ್ದರು. ಹಾಗೆಯೇ, ರೈತರು ಇದೇ ಅವಧಿಯಲ್ಲಿ 10.63 ಲಕ್ಷ ಟನ್ ರಸಗೊಬ್ಬರ ಖರೀದಿಸಿದ್ದಾರೆ. ಇದು ಕಳೆದ ವರ್ಷದ ಈ ಅವಧಿಯ ಖರೀದಿಗೆ ಹೋಲಿಸಿದರೆ ಶೇಕಡಾ 32ರಷ್ಟು ಜಾಸ್ತಿ. ರೈತರು ಕಳೆದ ವರ್ಷದ ಈ ಅವಧಿಯಲ್ಲಿ 8.02 ಲಕ್ಷ ಟನ್ ರಸಗೊಬ್ಬರ ಖರೀದಿಸಿದ್ದರು ಎಂದು ಸಚಿವ ಸದಾನಂದಗೌಡ ಅವರು ತಮ್ಮ ಫೇಸ್​ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.  ಈ ಬೆಳವಣಿಗೆಯು ಈ ಸಲ ಮುಂಗಾರು ಬಿತ್ತನೆ ಅತ್ಯುತ್ತಮ ಆಗುವುದರ ಶುಭ ಸೂಚನೆಯಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ಈ ಸಾಧನೆಗೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಹಾಗೂ ಅಭಿನಂದನೆಗಳು. ರಸಗೊಬ್ಬರ ದಾಸ್ತಾನು ಅಗತ್ಯವಿದ್ದ ಕಡೆ ಸುಸೂತ್ರವಾಗಿ ಸಾಗಣೆಯಾಗುವಂತೆ ವ್ಯವಸ್ಥೆ ಮಾಡಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.


  ಇದನ್ನು ಓದಿ: ಲಾಕ್​ಡೌನ್​ ಮತ್ತಷ್ಟು ಸಡಿಲ; ಪುಸ್ತಕ ಮಳಿಗೆ, ಮೊಬೈಲ್ ರೀಚಾರ್ಜ್ ಸೇರಿ ಹಲವು ಸೇವೆಗಳು ಪುನರಾರಂಭ


  Published by:HR Ramesh
  First published: