Covid 19: ಮತ್ತೆ ಶುರು ಕೋವಿಡ್ ಭೀತಿ, ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣ ನಿಷೇಧ!

ಕೋವಿಡ್ -19 ಮರು-ಏರಿಕೆ ಮತ್ತು ಕಳೆದ ಕೆಲವು ವಾರಗಳಲ್ಲಿ ದೈನಂದಿನ ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ತ್ವರಿತ ಏರಿಕೆಯ ನಂತರ, ಕಟ್ಟೆಚ್ಚರ ವಹಿಸಿರುವ ಸೌದಿ ಅರೇಬಿಯಾ ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣ ನಿಷೇಧ ಹೇರಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ (Corona) ಸಾಂಕ್ರಾಮಿಕ ರೋಗ ಮತ್ತೆ ನಿಧಾನವಾಗಿ ಪ್ರಪಂಚದಲ್ಲಿ ತನ್ನ ದಾಪುಗಾಲು ಇಡುತ್ತಿದೆ. ಕೋವಿಡ್ (Covide), ಮಂಗನ ಕಾಯಿಲೆ (Monkey Pox) ಸುದ್ದಿ ಮಾಡುತ್ತಿದ್ದಂತೆ ಹಲವಾರು ದೇಶಗಳು ಈಗಾಗ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿವೆ. ಸದ್ಯ ಕೋವಿಡ್ ಅಧಿಕ ಸಂಖ್ಯೆ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ (Saudi Arabia) 16 ದೇಶಗಳಿಗೆ ಪ್ರಯಾಣ ಬೆಳೆಸುವುದನ್ನು ಬ್ಯಾನ್ ಮಾಡಿದೆ. ಪ್ರಯಾಣ ನಿಷೇಧವನ್ನು ಸೌದಿ ಸರ್ಕಾರದ ಡೈರೆಕ್ಟರೇಟ್ ಜನರಲ್ ಆಫ್ ಪಾಸ್‌ಪೋರ್ಟ್‌ಗಳು ತಿಳಿಸಿವೆ. ಹೌದು, ಕೋವಿಡ್ -19 ಮರು-ಏರಿಕೆ ಮತ್ತು ಕಳೆದ ಕೆಲವು ವಾರಗಳಲ್ಲಿ ದೈನಂದಿನ ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ತ್ವರಿತ ಏರಿಕೆಯ ನಂತರ, ಕಟ್ಟೆಚ್ಚರ ವಹಿಸಿರುವ ಸೌದಿ ಅರೇಬಿಯಾ ತನ್ನ ನಾಗರಿಕರಿಗೆ ಭಾರತ (India) ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣ (Travel) ನಿಷೇಧ ಹೇರಿದೆ.

ಈ ಹದಿನಾರು ದೇಶಗಳಿಗೆ ಪ್ರಯಾಣ ನಿಷೇಧ
ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್, ವೆನೆಜುವೆಲಾ, ಭಾರತ ಸೇರಿದಂತೆ ಸೌದಿ ಅರೇಬಿಯಾದ ಪ್ರಜೆಗಳು ಬೇರೆ ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಈಗಿನಂತೆ, ಮೇಲಿನ ದೇಶಗಳಿಗೆ ಪ್ರಯಾಣಿಸಲು ಬಯಸುವ ಸೌದಿ ನಾಗರಿಕರಿಗೆ ನಿಷೇಧವು ಅನ್ವಯಿಸುತ್ತದೆ. ಭಾರತೀಯ ಪ್ರಜೆಗಳನ್ನು ಸೌದಿ ಅರೇಬಿಯಾಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆಯೇ ಎಂಬುದರ ಕುರಿತು ಈವರೆಗೆ ಯಾವುದೇ ಹೊಸ ಮಾರ್ಗಸೂಚಿಗಳನ್ನು ಸೌದಿ ಬಿಡುಗಡೆ ಮಾಡಿಲ್ಲ. ವೈದ್ಯಕೀಯ ಅಧಿಕಾರಿಗಳು ಮೇ 17 ರಂದು 621 ಹೊಸ COVID-19 ಪ್ರಕರಣಗಳನ್ನು ಸೌದಿ ಅರೇಬಿಯಾದಲ್ಲಿ ದಾಖಲಿಸಿದ್ದಾರೆ.

ಈ ಬಗ್ಗೆ ಆರೋಗ್ಯ ಮಂತ್ರಿ ಹೇಳಿದ್ದು ಹೀಗೆ
ಇದಲ್ಲದೆ,ಅಮೇರಿಕಾ, ಯುರೋಪ್ ದೇಶಗಳಲ್ಲಿ ಹಾವಳಿ ಮಾಡುತ್ತಿರುವ ಮಂಗನ ಕಾಯಿಲೆ ಬಗ್ಗೆ ಸ್ಪಷ್ಟನೆ ನೀಡಿರುವ ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯವು, ದೇಶದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದೆ. "ಮಂಕಿಪಾಕ್ಸ್" ನ ಶಂಕಿತ ಪ್ರ ಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪತ್ತೆಹಚ್ಚಲು ಮತ್ತು ಸೋಂಕನ್ನು ಎದುರಿಸಲು ಸೌದಿ ಅರೇಬಿಯಾದ ಆರೋಗ್ಯ ವಲಯವು ಸಮರ್ಥವಾಗಿದೆ ಎಂದು ಉಪ ಆರೋಗ್ಯ ಮಂತ್ರಿ ಡಾ. ಅಬ್ದುಲ್ಲಾ ಅಸಿರಿ ಹೇಳಿದ್ದಾರೆ.

ಇದನ್ನೂ ಓದಿ: Vaccine Golmaal: ಸತ್ತವರಿಗೂ ಕೊಟ್ಟಿದ್ದಾರಂತೆ ಬೂಸ್ಟರ್ ಡೋಸ್! ಮೃತಳ ಮೊಬೈಲ್‌ಗೆ ಬಂತು ವ್ಯಾಕ್ಸಿನ್ ಸರ್ಟಿಫಿಕೇಟ್

"ಇಲ್ಲಿಯವರೆಗೆ, ಮನುಷ್ಯರ ನಡುವೆ ಹರಡುವ ಪ್ರಕರಣಗಳು ಬಹಳ ಸೀಮಿತವಾಗಿವೆ ಮತ್ತು ಆದ್ದರಿಂದ ಪ್ರಕರಣಗಳನ್ನು ಪತ್ತೆ ಮಾಡಿದ ದೇಶಗಳಲ್ಲಿಯೂ ಸಹ ಏಕಾಏಕಿ ಸಂಭವಿಸುವ ಸಾಧ್ಯತೆಯು ತುಂಬಾ ಕಡಿಮೆಯಾಗಿದೆ" ಎಂದು ಡಾ. ಅಬ್ದುಲ್ಲಾ ಅಸಿರಿ ಹೇಳಿದರು.

ಈ ತಿಂಗಳ ಆರಂಭದಲ್ಲಿ, ಸೌದಿ ಏರ್‌ಲೈನ್ಸ್ ಇಸ್ತಾನ್‌ಬುಲ್‌ಗೆ ತನ್ನ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಯನ್ನು ಸುಮಾರು ಎರಡು ವರ್ಷಗಳ ವಿರಾಮದ ನಂತರ ಪುನರಾರಂಭಿಸಿತು. ಕೋವಿಡ್ -19 ಹರಡುವಿಕೆ ಮೇಲೆ ಕಡಿವಾಣ ಹಾಕಲು ಈ ಏರ್‌ಲೈನ್ಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಭಾರತದಲ್ಲಿ ಹೆಚ್ಚಿದ ಕೋವಿಡ್ ಪ್ರಕರಣ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,226 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. ಈ ಎಣಿಕೆಯೊಂದಿಗೆ, ಒಟ್ಟು COVID-19 ಪ್ರಕರಣಗಳು 14,955 ಸಕ್ರಿಯ ಪ್ರಕರಣಗಳು ಸೇರಿದಂತೆ 4,31,36,371ಕ್ಕೆ ಏರಿಕೆ ಆಗಿದೆ.

ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 0.03 ರಷ್ಟಿದೆ. 65 ಹೊಸ ಸಾವುಗಳು ಭಾರತದ COVID-19 ಸಾವಿನ ಸಂಖ್ಯೆಯನ್ನು 5,24,413ಕ್ಕೆ ಏರಿಸಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಹೀಗಾಗಿ ಸೌದಿ ಅರೇಬಿಯಾ ಕೋವಿಡ್ ಹರಡುವ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ಪ್ರಜೆಗಳನ್ನು ಬೇರೆ ದೇಶಗಳಿಗೆ ಹೋಗುವುದನ್ನು ನಿಷೇಧಿಸಿದೆ.

ಕೊರೋನಾ ಸೋಂಕು ಮುಗಿದಿಲ್ಲ-WHO
ಇದರಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (WHO) 11 ದೇಶಗಳಲ್ಲಿ 80 ಮಂಕಿಪಾಕ್ಸ್ ಪ್ರಕರಣಗಳನ್ನು ದೃಢಪಡಿಸಿದೆ. ಶುಕ್ರವಾರ ನೀಡಿದ ಹೇಳಿಕೆಯಲ್ಲಿ, WHO ಹಲವಾರು ದೇಶಗಳಲ್ಲಿನ ಕೆಲವು ಪ್ರಾಣಿಗಳ ಜನಸಂಖ್ಯೆಯಲ್ಲಿ ವೈರಸ್ ಸ್ಥಳೀಯವಾಗಿದೆ, ಇದು ಸ್ಥಳೀಯ ಜನರು ಮತ್ತು ಪ್ರಯಾಣಿಕರಲ್ಲಿ ಸಾಂದರ್ಭಿಕ ಏಕಾಏಕಿ ಉಂಟಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Booster Dose: ಕೋವಿಡ್-19 ಎರಡು ಡೋಸ್ ಗಳಿಗಿಂತಲೂ ಬೂಸ್ಟರ್ ಡೋಸ್ ನ ಅಡ್ಡಪರಿಣಾಮ ಪ್ರಬಲ! ಈ ಬಗ್ಗೆ ಸಂಶೋಧನೆ ಹೇಳಿದ್ದು ಹೀಗೆ

ಒಮಿಕ್ರಾನ್ ತರಂಗದ ಉತ್ತುಂಗದಿಂದ ವರದಿಯಾದ ಪ್ರಕರಣಗಳಲ್ಲಿ ಇಳಿಮುಖವಾಗಿದ್ದರೂ, COVID-19 ಸಾಂಕ್ರಾಮಿಕವು "ಖಂಡಿತವಾಗಿಯೂ ಮುಗಿದಿಲ್ಲ" ಎಂದು ಎಚ್ಚರಿಸಿದೆ.
Published by:Ashwini Prabhu
First published: