ಚಿಕಿತ್ಸೆ ಸಿಗದೆ ಶಿಶು ನಿಧನ; ಸಿಎಂ ಮನೆ ಮುಂದೆ ಅಪ್ಪನ ಏಕಾಂಗಿ ಪ್ರತಿಭಟನೆ

ಜುಲೈ 11ರಂದು ವೆಂಕಟೇಶ್ ಅವರ 1 ತಿಂಗಳ ಹಸುಗೂಸು ಮೃತಪಟ್ಟಿತ್ತು. ಇದು ಜುಲೈ 16, ಅಂದರೆ ಗುರುವಾರ ತಡವಾಗಿ ಬೆಳಕಿಗೆ ಬಂದಿತ್ತು. ಇವತ್ತು ಸಿಎಂ ಅವರ ಧವಳಗಿರಿ ನಿವಾಸದೆದುರು ಮಗುವಿನ ತಂದೆ ಪ್ರತಿಭಟನೆ ನಡೆಸಿದರು.

news18-kannada
Updated:July 18, 2020, 2:22 PM IST
ಚಿಕಿತ್ಸೆ ಸಿಗದೆ ಶಿಶು ನಿಧನ; ಸಿಎಂ ಮನೆ ಮುಂದೆ ಅಪ್ಪನ ಏಕಾಂಗಿ ಪ್ರತಿಭಟನೆ
ಸಿಎಂ ನಿವಾಸದೆದುರು ಒಬ್ಬರೇ ಪ್ರತಿಭಟನೆ ನಡೆಸಿದ ಮಗುವಿನ ತಂದೆ
  • Share this:
ಬೆಂಗಳೂರು(ಜುಲೈ 18): ಕೊರೋನಾ ಸೋಂಕು ತಗುಲಿದರೂ ಚಿಕಿತ್ಸೆ ಸಿಗದ ಕಾರಣಕ್ಕೆ 1 ತಿಂಗಳ ಮಗುವೊಂದು ಸಾವನ್ನಪಿದ ಘಟನೆ ಬೆಳಕಿಗೆ ಬಂದಿದೆ. ಆ ಮಗುವಿನ ತಂದೆ ಮಂಜುನಾಥನಗರ ನಿವಾಸಿ ವೆಂಕಟೇಶ್ ಅವರು ಇಂದು ಮುಖ್ಯಮಂತ್ರಿಗಳ ಧವಳಗಿರಿ ನಿವಾಸದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಒಬ್ಬರೇ ನಿಂತು ಪ್ರತಿಭಟಿಸಿದ ಅವರು ಕೊರೋನಾಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಜುಲೈ 11ರಂದು ವೆಂಕಟೇಶ್ ಅವರ 1 ತಿಂಗಳ ಹಸುಗೂಸು ಮೃತಪಟ್ಟಿತ್ತು. ಇದು ಜುಲೈ 16, ಅಂದರೆ ಗುರುವಾರ ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆ ಬಗ್ಗೆ ನಿನ್ನೆ ಡಿಸಿಎಂ ಹಾಗೂ ಕೆಲ ಸಚಿವರು ಬೇಸರ ವ್ಯಕ್ತಪಡಿಸಿದ್ದರು.

ನೆಲಮಂಗಲ ಮೂಲದ ವೆಂಕಟೇಶ್ ಮೃತಪಟ್ಟ ತಮ್ಮ ಮಗುವಿನ ಫೋಟೋ ಇಟ್ಟು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ತಮಗೆ ಆದ ಅನ್ಯಾಯ ಬೇರೆಯವರಿಗೆ ಆಗದಿರಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ವೆಂಕಟೇಶ್ ನಾಯ್ಕ್ ಅವರನ್ನ ಸ್ಥಳದಿಂದ ಕರೆದೊಯ್ದರು.

ಇದನ್ನೂ ಓದಿ: BBMP Commissioner: ಬಿಬಿಎಂಪಿ ಕಮಿಷನರ್​ ಅನಿಲ್​ ಕುಮಾರ್​ ವರ್ಗಾವಣೆ; ಮಂಜುನಾಥ್ ಪ್ರಸಾದ್ ನೂತನ ಆಯುಕ್ತ

ರಾಜ್ಯದಲ್ಲಿ ಸೋಂಕು ಹರಡುವ ವೇಗ ಹೆಚ್ಚುತ್ತಲೇ ಇದೆ. ಸಾವಿನ ಗತಿಯೂ ಹೆಚ್ಚುತ್ತಿದೆ. ಬೆಂಗಳೂರಂತೂ ಕೊರೋನಾ ನಾಗಾಲೋಟ ನಡೆಯುತ್ತಿದೆ. ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಡುತ್ತಿರುವುದು ಸಾಮಾನ್ಯವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತಲೇ ಇದ್ದರೂ ಚಿಕಿತ್ಸೆಗೆ ಅಗತ್ಯ ಇರುವ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ತೀವ್ರ ಸೋಂಕಿನ ಪ್ರಕರಣಗಳಿಗೆ ಅಗತ್ಯ ಇರುವ ವೆಂಟಿಲೇಟರ್ ಮತ್ತು ಆಕ್ಸಿಜನ್ ಬೆಡ್​ಗಳ ಕೊರತೆ ಕಾಡುತ್ತಿದೆ. ಖಾಸಗಿ ಆಸ್ಪತ್ರೆಗಳನ್ನ ಜೋಡಿಸಿಕೊಂಡರೂ ಹಲವಾರು ರೋಗಿಗಳು ಬೆಡ್ ಸಿಗದೆ ಕಂಗಾಲಾಗಿದ್ಧಾರೆ.
Published by: Vijayasarthy SN
First published: July 18, 2020, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading