news18 Updated:March 30, 2020, 6:20 PM IST
ರಾಮನಗರದ ರೇಷ್ಮೆ ಮಾರುಕಟ್ಟೆ
- News18
- Last Updated:
March 30, 2020, 6:20 PM IST
ರಾಮನಗರ(ಮಾ. 30): ದೇಶಾದ್ಯಂತ ಕೊರೋನಾ ವೈರಸ್ ಹರಡುವುದನ್ನು ತಡೆಯಲು 21 ದಿನಗಳ ಕಾಲ ಲಾಕ್ಡೌನ್ ಮಾಡಲಾಗಿದೆ. ಅಂತೆಯೇ ಇಲ್ಲಿರುವ ಏಷ್ಯಾದ ನಂ. 1 ರೇಷ್ಮೆ ಮಾರುಕಟ್ಟೆ ಸಹ ಬಂದ್ ಆಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ರೈತರ ರೇಷ್ಮೆಗೂಡುಗಳು ಖರೀದಿಯಾಗದೇ ವ್ಯರ್ಥವಾಗುತ್ತಿದೆ. ಹಾಗಾಗಿ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂಬ ಕೂಗು ಕೇಳಿ ಬಂದಿದೆ.
ರೇಷ್ಮೆ ಮಾರುಕಟ್ಟೆ ಮುಚ್ಚಿರುವುದು ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ರೇಷ್ಮೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ದಿನವೊಂದಕ್ಕೆ 2 ಕೋಟಿ ರೂಪಾಯಿಯಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದ್ದ ಮಾರುಕಟ್ಟೆ ಈಗ ಸಂಪೂರ್ಣ ಬಂದ್ ಆಗಿದೆ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕೆಂದು ಕನ್ನಡಪರ ಹೋರಾಟಗಾರರು ನ್ಯೂಸ್18 ಮೂಲಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಮಾದರಿಯಾಯ್ತು ರಾಮನಗರದ ಈ ಗ್ರಾ.ಪಂ: ಕೂಲಿಕಾರ್ಮಿಕರು, ನಿರ್ಗತಿಕರಿಗೆ ದಿನಸಿ ಕಿಟ್ ವಿತರಣೆ
ರಾಮನಗರ, ಮಂಡ್ಯ, ಕೋಲಾರ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ರೇಷ್ಮೆ ಬೆಳೆಗಾರರು ರಾಮನಗರದ ರೇಷ್ಮೆ ಮಾರುಕಟ್ಟೆಗೆ ತಮ್ಮ ಗೂಡುಗಳನ್ನ ತಂದು ವ್ಯಾಪಾರ ಮಾಡ್ತಾರೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಾರುಕಟ್ಟೆ ಬಂದ್ ಆಗಿರುವುದರಿಂದ ಈಗ ರೈತರ ರೇಷ್ಮೆಗೂಡು ನಾಶವಾಗ್ತಿದೆ. ಸರ್ಕಾರ ಈ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮವಹಿಸಬೇಕು, ಇಲ್ಲವಾದ್ರೆ ರೈತರು ತೀರಾ ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ರೇಷ್ಮೆ ಬೆಳೆಗಾರರು ಆತಂಕವ್ಯಕ್ತಪಡಿಸಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
First published:
March 30, 2020, 6:20 PM IST