ಕೊರೋನಾ ನಡುವೆಯೂ ತುಮಕೂರಿನಲ್ಲಿ ಉತ್ತಮ ಮಳೆ - ಕೃಷಿಯಲ್ಲಿ ತೊಡಗಿದ ರೈತರು

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ವಿನ ಮಳೆಯಾದರೂ ಯಾವುದೇ ರೀತಿಯ ಹಾನಿ, ಪ್ರವಾಹ ಉಂಟಾಗಿಲ್ಲ. ಜಿಲ್ಲೆಯಲ್ಲಿ ಸುರಿಯುತ್ತಿರುವ ಹದವಾದ ಮಳೆ ರೈತರ ಕೃಷಿಚಟುವಟಿಕೆಗೆ ಪೂರಕವಾಗಿದೆ. ಇದೇ ರೀತಿಯ ಮಳೆ ಕಾಲ ಕಾಲಕ್ಕೆ ಸುರಿದರೆ ನಾವು ನೆಮ್ಮದಿಗಾಗಿ ಇರ್ತಿವಿ ಅಂತಾರೆ ಅನ್ನದಾತರು.

ಕೃಷಿ ಚಟುವಟಿಕೆ

ಕೃಷಿ ಚಟುವಟಿಕೆ

  • Share this:
ತುಮಕೂರು(ಆ.11): ತುಮಕೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಪರಿಣಾಮ ಕೃಷಿ ಚಟುವಟಿಕೆಗೆಳು ಚುರುಕುಗೊಂಡಿದೆ. ಕೊರೋನಾದಿಂದಾಗಿ ಕೆಲಸ ಇಲ್ಲದೇ ಬೆಸತ್ತ ಜಿಲ್ಲೆಯ ಜನತೆಗೆ ವರುಣ ದೇವ ಕೃಪೆ ತೋರಿದ್ದಾನೆ. ಕೊರಾನಾದಿಂದಾಗಿ ಕೆಲಸ ಇಲ್ಲದೇ ಬೆಸತ್ತಿದ್ದ ಜನರಿಗೆ ವರುಣ ದೇವ ತುಸು ನೆಮ್ಮದಿ ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ವಾಡಿಕೆಗಿಂತ %49 ರಷ್ಟು ಹೆಚ್ಚಿಗೆ ಮಳೆಯಾಗಿದೆ.  ವಾಡಿಕೆ ಪ್ರಕಾರ  ಈ ವೇಳೆಗೆ 274 ಮಿಲಿಮೀಟರ್ ಮಳೆಯಾಗಬೇಕಿತ್ತು. ಅದನ್ನು ಮೀರಿ ಇಂದಿಗೆ 408 ಮಿಲಿಮೀಟರ್  ಮಳೆಯಾಗಿದೆ ಎಂಬುದು ಸಂತಸದ ವಿಚಾರ.

ಇದರಿಂದ ರೈತ ವರ್ಗದವರಲ್ಲಿ ಹರ್ಷ ಮೂಡಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಳೆಗಾಲದಲ್ಲಿ ವ್ಯವಸಾಯ ಮಾಡಿ ಬೇಸಿಗೆಯಲ್ಲಿ ಅಲ್ಲೋ ಇಲ್ಲೋ ಕೆಲಸ ಮಾಡಿ ಸಂಪಾದನೆ ಮಾಡುತಿದ್ದ ರೈತರಿಗೆ ಮಹಾಮಾರಿ ಕೊರೋನಾ ಕಂಟಕವಾಗಿತ್ತು.

ಅಲ್ಲದೇ ರೈತರು ಬೆಳೆಸ ತರಕಾರಿ, ಧಾನ್ಯಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿಲ್ಲ. ಇದರಿಂದಾಗಿ ರೈತರು ಸಂಕಷ್ಟದಲ್ಲಿ ಇದ್ದರು. ಈಗ ನಿಯಮಿತವಾಗಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಮಳೆ ಬಂದು ಬೆಳೆ ಕೈ ಸೇರಿದರೆ ಮುಂದಿನ ದಿನದಲ್ಲಾದರೂ ನೆಮ್ಮದಿ ಜೀವನ ನಡೆಸಬಹುದು ಎಂದು ಕೃಷಿ ಚಟುವಟಿಕೆ ಯಲ್ಲಿ ತೊಡಗಿದ್ದಾರೆ.

ಭತ್ತ, ರಾಗಿ , ಜೋಳ ಶೇಂಗಾ ಹೀಗೆ ಎಲ್ಲಾ ರೀತಿಯ ಬಿತ್ತನೆ ಮಾಡಲಾಗಿದೆ. ಇಲ್ಲಿವರೆಗೆ 2411 ಎಕರೆ ಪ್ರದೇಶದಲ್ಲಿ ಭತ್ತ, ಜೋಳ 700 ಎಕರೆ ಪ್ರದೇಶ,ರಾಗಿ 1012 ಎಕರೆ ಪ್ರದೇಶ, ಮೆಕ್ಕೆಜೋಳ 2436 ಎಕರೆ ಪ್ರದೇಶ ಹಾಗೂ ಶೇಂಗಾ 1110 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿಗಿಂತ ಈ ವರ್ಷ ಹದವಾದ ಮಳೆ ಸುರಿದಿದ್ದರಿಂದ 20% ರಷ್ಟು ಬಿತ್ತನೆ ಹೆಚ್ಚಾಗಿದೆ. ಜತೆಗೆ ಕೊರೊನಾದಿಂದಾಗಿ ನಗರ ಪ್ರದೇಶದ ದಿಂದ ಹಳ್ಳಿಗಳಿಗೆ ಜನರು ವಾಪಸ್ಸಾಗಿದ್ದರಿಂದ ಬೀಳು ಬಿಟ್ಟ ಜಮೀನು ಕೂಡ ಸಾಗವಳಿಯಾಗಿದೆ.

ಇದನ್ನೂ ಓದಿ: Delhi Post | ಸಿಎಂ ಕುರ್ಚಿಗಾಗಿ ದೇವರ ಮೊರೆ ಹೋಗುತ್ತಿರುವ ನಾಯಕರು, ಖರ್ಗೆಗೆ ಈಗ ದಿಗ್ವಿಜಯ್ ಸಿಂಗ್ ಕಾಟ!

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ವಿನ ಮಳೆಯಾದರೂ ಯಾವುದೇ ರೀತಿಯ ಹಾನಿ, ಪ್ರವಾಹ ಉಂಟಾಗಿಲ್ಲ.  ಜಿಲ್ಲೆಯಲ್ಲಿ ಸುರಿಯುತ್ತಿರುವ ಹದವಾದ ಮಳೆ ರೈತರ ಕೃಷಿಚಟುವಟಿಕೆಗೆ ಪೂರಕವಾಗಿದೆ. ಇದೇ ರೀತಿಯ ಮಳೆ  ಕಾಲ ಕಾಲಕ್ಕೆ ಸುರಿದರೆ ನಾವು ನೆಮ್ಮದಿಗಾಗಿ ಇರ್ತಿವಿ ಅಂತಾರೆ ಅನ್ನದಾತರು.
Published by:Ganesh Nachikethu
First published: