SSLC Exam 2020: ಫೇಸ್​ಬುಕ್​​​ ಮೂಲಕ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪಾಠ ಮಾಡಿದ ಮಾಜಿ ಶಾಸಕ ವೈಎಸ್​​ವಿ ದತ್ತಾ

ಇನ್ನು, ಫೇಸ್​​ಬುಕ್​​ನಲ್ಲಿ ದತ್ತಣ್ಣಾ ಗಣಿತ ಪಠ್ಯದ ಸಮಸ್ಯೆಗಳನ್ನು ಬಿಡಿಸಿ ಎಸ್​ಎಸ್ಎಲ್​​ಸಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಮುಂದೆ ಭೌತಶಾಸ್ತ್ರದ ಪಾಠವನ್ನು ಕೂಡ ಮಾಡಲಿದ್ದೇನೆ. ಮಕ್ಕಳ ಪ್ರಶ್ನೆಗಳಿಗೆ ಆನ್​​ಲೈನ್​ ಮೂಲಕ ಉತ್ತರಿಸಲು ಯತ್ನಿಸುತ್ತೇನೆ ಎಂದಿದ್ಧಾರೆ.

ಜೆಡಿಎಸ್ ಹಿರಿಯ ಮುಖಂಡ ವೈಎಸ್​ವಿ ದತ್ತಾ.

ಜೆಡಿಎಸ್ ಹಿರಿಯ ಮುಖಂಡ ವೈಎಸ್​ವಿ ದತ್ತಾ.

  • Share this:
    ಬೆಂಗಳೂರು(ಮೇ.07): ಕೊರೋನಾ ಲಾಕ್​​ಡೌನ್​​ನಿಂದಾಗಿ ಮುಂದೂಡತ್ತಲೇ ಇರುವ ಎಸ್​ಎಸ್​ಎಲ್​​ಸಿ ಪರೀಕ್ಷೆಗೆ ಬೇಕಾದ ಎಲ್ಲ ರೀತಿಯ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಿಂದ ಬಂದ ಒಟ್ಟಾಭಿಪ್ರಾಯದಂತೆ ಮಕ್ಕಳು ತಮ್ಮ ಪರೀಕ್ಷಾ ದಿನಾಂಕ ತಿಳಿಯಲು ಉತ್ಸುಕರಾಗಿದ್ದಾರೆ. ತಮ್ಮ ಪರಿಶ್ರಮದ ಆಧಾರದಲ್ಲಿ ಪರೀಕ್ಷಾ ಫಲಿತಾಂಶವನ್ನು ಪಡೆಯಬೇಕೆಂದು ಬಯಸುತ್ತಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ಕೊರೋನಾ ನಂತರದ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಈ ಕೂಡಲೇ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಗಮನ ಹರಿಸಬೇಕೆಂದು ಸುರೇಶ್​​ ಕುಮಾರ್​​ ಸೂಚನೆ ನೀಡಿದ್ದಾರೆ.

    ಅತ್ತ ಸುರೇಶ್​ ಕುಮಾರ್​​ ಆದೇಶದ ಬೆನ್ನಲ್ಲೇ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಎದುರಿಸಲು ಬಹಳ ಉತ್ಸುಕರಾಗಿದ್ದಾರೆ. ಅದಕ್ಕಾಗಿ ಯಾವಾಗ ಪರೀಕ್ಷೆ ದಿನಾಂಕ ಘೋಷಣೆ ಆಗಲಿದೆಯೋ ಎಂದು ಕಾಯುತ್ತಿದ್ದಾರೆ.ಮೇ 17ರ ಬಳಿಕ ಪರೀಕ್ಷೆ ದಿನಾಂಕ ಘೋಷಿಸಲು ಸುರೇಶ್​ ಕುಮಾರ್​​​ ಕೂಡ ಸಿದ್ದತೆ ನಡೆಸಿಕೊಂಡಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಮತ್ತೆ ಸಿಲಬಸ್​​ ರಿವಿಜನ್​​ ಶುರು ಮಾಡಿದ್ದಾರೆ. ಈ ಮಧ್ಯೆ ಕಡೂರಿನ ಮಾಜಿ ಶಾಸಕ ಮತ್ತು ಜೆಡಿಎಸ್​​ ಹಿರಿಯ ನಾಯಕ ವೈ.ಎಸ್.ವಿ ದತ್ತಾ ಅವರು, ಎಸ್​ಎಸ್​​ಎಲ್​​ಸಿ ಮಕ್ಕಳಿಗೆ ಆನ್​​ಲೈನ್​​ ಪಾಠ ಮಾಡಲು ಮುಂದಾಗಿದ್ದಾರೆ.


    ಹೌದು, ದತ್ತಾ ಅವರು ಚಾಕ್​ಪೀಸ್​ ಮತ್ತು ಡಸ್ಟರ್​ನ್ನ ಹಿಡಿದುಕೊಂಡಿರುವ ಫೇಸ್​ಬುಕ್​ ಲೈವ್​ ಮೂಲಕ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಹೀಗೆ ಎಸ್​ಎಸ್​ಎಲ್​​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಕ್ಕಳಿಗೆ ರಿವಿಜನ್​ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಇದನ್ನೂ ಓದಿ: SSLC Exam 2020: ಎಸ್‌ಎಸ್ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿ: ಅಧಿಕಾರಿಗಳಿಗೆ ಶಿಕ್ಷಣ ಸಚಿವ ಸುರೇಶ್​​ ಕುಮಾರ್​​ ಸೂಚನೆ

    ಇನ್ನು, ಫೇಸ್​​ಬುಕ್​​ನಲ್ಲಿ ದತ್ತಾ ಅವರು, ಗಣಿತ ಪಠ್ಯದ ಸಮಸ್ಯೆಗಳನ್ನು ಬಿಡಿಸಿ ಎಸ್​ಎಸ್ಎಲ್​​ಸಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಮುಂದೆ ಭೌತಶಾಸ್ತ್ರದ ಪಾಠವನ್ನು ಕೂಡ ಮಾಡಲಿದ್ದೇನೆ. ಮಕ್ಕಳ ಪ್ರಶ್ನೆಗಳಿಗೆ ಆನ್​​ಲೈನ್​ ಮೂಲಕ ಉತ್ತರಿಸಲು ಯತ್ನಿಸುತ್ತೇನೆ ಎಂದಿದ್ಧಾರೆ.
    First published: