‘ಸತ್ತ ಬಿಜೆಪಿ ಸರ್ಕಾರ, ಅಧಿಕಾರಿಗಳೇ ಸಿಎಂ ಯಡಿಯೂರಪ್ಪ ಮಾತು ಕೇಳುತ್ತಿಲ್ಲ ಯಾಕೇ?‘ - ಎಚ್​​.ಡಿ ರೇವಣ್ಣ ಪ್ರಶ್ನೆ

ಇನ್ನು, ಎಪಿಎಂಸಿಯವರು ವರ್ತಕರೊಂದಿಗೆ ಶಾಮೀಲಾಗಿದ್ದಾರೆ. ಆಲೂಗಡ್ಡೆ ಬಿತ್ತನೆ ಬೀಜದ ಬಗ್ಗೆ ಈ ಕೂಡಲೇ ಡಿಸಿ ಸಭೆ ಕರೆಯಬೇಕು. ಡಿಸಿ ಕೇಳಿದರೆ ಅಲೂಗೆಡ್ಡಗೆ ಬೆಲೆ ನಿಗದಿ ಮಾಡಿರುವುದು ಗೊತ್ತಿಲ್ಲಾ ಎನ್ನುತ್ತಾರೆ. ಡಿಸಿಯವರು ರೈತರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗರಂ ಆದರು.

 ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗೂ ಸಿಎಂ ಯಡಿಯೂರಪ್ಪ

ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹಾಗೂ ಸಿಎಂ ಯಡಿಯೂರಪ್ಪ

 • Share this:
  ಹಾಸನ(ಮೇ.06): ಸುಮಾರು 40 ದಿನಗಳ ಬಳಿಕ ಸಿಎಂ ಯಡಿಯೂರಪ್ಪಗೆ ಶ್ರಮಿಕ ವರ್ಗದ ಬಗ್ಗೆ ಜ್ಞಾನೋದಯವಾಗಿದೆ ಎಂದು ಮಾಜಿ ಸಚಿವ ಎಚ್​.ಡಿ ರೇವಣ್ಣ ಅಸಮಾಧಾನ ಹೊರ ಹಾಕಿದ್ದಾರೆ. ಈ ಸಂಬಂಧ ನಗರದಲ್ಲಿ ಮಾಧ್ಯಮದವರ ಜತೆ ಮಾತಾಡಿದ ಎಚ್​.ಡಿ ರೇವಣ್ಣ, ರಾಜ್ಯ ಸರ್ಕಾರ ಈಗ ಆಟೋ, ಟ್ಯಾಕ್ಸಿ ಸೇರಿದಂತೆ ಅಸಂಘಟಿತ ಕಾರ್ಮಿಕ ವಲಯಕ್ಕೆ ಪರಿಹಾರ ಘೋಷಿಸಿದೆ. ಇವರ ಬಗ್ಗೆ ಯಡಿಯೂರಪ್ಪಗೆ ಜ್ಞಾನೋದಯವಾಗಲು 40 ದಿನ ಬೇಕಾಯ್ತು ಎಂದು ಕಿಡಿಕಾರಿದ್ದಾರೆ.

  ಮುಂದಿನ ತಿಂಗಳು ಹಾಸನದಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಆರಂಭವಾಗುತ್ತದೆ. ಎಪಿಎಂಸಿಯವರನ್ನ ಕೇಳಿಕೊಂಡು ಬಿತ್ತನೆ ಬೀಜದ ಬೆಲೆ ನಿಗದಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಎಪಿಎಂಸಿಯಲ್ಲಿನ ಪುಡಾರಿಗಳನ್ನ ಕೇಳಿಕೊಂಡು ಆಲೂಗಡ್ಡೆ ಬೀಜ ಬೆಲೆ ನಿಗದಿ ಮಾಡುತ್ತಿದ್ದಾರೆ. ಕೆಲವರು ತಿನ್ನುವ ಆಲೂಗಡ್ಡೆಯನ್ನ ಬಿತ್ತನೆ ಬೀಜ ಎಂದು ಮಾರಾಟ ಮಾಡುತ್ತಿದ್ದಾರೆ ಎಂದು ಎಚ್​​.ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

  ಇನ್ನು, ಎಪಿಎಂಸಿಯವರು ವರ್ತಕರೊಂದಿಗೆ ಶಾಮೀಲಾಗಿದ್ದಾರೆ. ಆಲೂಗಡ್ಡೆ ಬಿತ್ತನೆ ಬೀಜದ ಬಗ್ಗೆ ಈ ಕೂಡಲೇ ಡಿಸಿ ಸಭೆ ಕರೆಯಬೇಕು. ಡಿಸಿ ಕೇಳಿದರೆ ಅಲೂಗೆಡ್ಡಗೆ ಬೆಲೆ ನಿಗದಿ ಮಾಡಿರುವುದು ಗೊತ್ತಿಲ್ಲಾ ಎನ್ನುತ್ತಾರೆ. ಡಿಸಿಯವರು ರೈತರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗರಂ ಆದರು.

  ಇದನ್ನೂ ಓದಿ: BS Yediyurappa: ಲಾಕ್‌ಡೌನ್​ನಿಂದ ನಷ್ಟ ಅನುಭವಿಸಿದ ಜನರಿಗೆ 1610 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಬಿಎಸ್ ಯಡಿಯೂರಪ್ಪ

  ಹಾಸನದಲ್ಲಿ ಕೃಷಿಕರು ಬಿಜೆಪಿಗೆ ವೋಟು ಹಾಕಿಲ್ಲ ಎಂದು ಯಡಿಯೂರಪ್ಪ ತಾರತಮ್ಯ ಮಾಡಬಾರದು. ಎಲ್ಲಾ ವರ್ಗದವರನ್ನೂ ಸಮನವಾಗಿ ಕೊಂಡೊಯ್ಯಬೇಕು. ಸಿಎಂ ಎಲ್ಲಾ ಕಾಮಗಾರಿ ಪ್ರಾರಂಭಿಸಿ ಎಂದು ಹೇಳುತ್ತಾರೆ. ಆದರೆ, ಪ್ರಧಾನ ಕಾರ್ಯದರ್ಶಿ ಕಾಮಗಾರಿ ಮಾಡಬೇಡಿ ಅಂತಾ ಆದೇಶ ಮಾಡುತ್ತಾರೆ. ಅಧಿಕಾರಿಗಳು ಸಿಎಂ ಮಾತು ಕೇಳುತ್ತಿಲ್ಲವಾ ಎಂದು ಪ್ರಶ್ನಿಸಿದರು.

  ಆರ್ಥಿಕ ಇಲಾಖೆ ಕಾರ್ಯದರ್ಶಿ ಕೇಳಿ ಕಾಮಗಾರಿ ಮಾಡಬೇಕು ಎನ್ನುತ್ತಿದ್ದಾರೆ. ಲಾಕ್​​ಡೌನ್​​ ಸರ್ಕಾರ ಇದು, ಯಾವಾಗಲೋ ಸತ್ತು ಹೋಗಿದೆ. ಸರ್ಕಾರದಲ್ಲಿ ಹಣ ಇಲ್ಲಾ ಅಂತಾರೆ ಈಗ 1600 ಕೋಟಿ ಘೋಷಣೆ ಮಾಡಿದ್ದಾರೆ ಈ ಹಣ ಎಲ್ಲಿಂದ ಬಂತು? ಕೊರೋನಾ ವಿಚಾರವಾಗಿ ಸಿಎಂ ಪರಿಹಾರ ನಿಧಿಗೆ ಎಷ್ಟು ಹಣ ಬಂದಿದೆ ಎನ್ನುವುದು ಬಹಿರಂಗಪಡಿಸಲಿ ಎಂದು ಎಚ್​​ಡಿ ರೇವಣ್ಣ ಸವಾಲ್​​ ಎಸೆದರು.
  First published: