Gali Janardhana Reddy: ಮಾಜಿ ಸಚಿವ ಗಾಲಿ ಜನಾರ್ದನ್​​ ರೆಡ್ಡಿಗೆ ಕೊರೋನಾ ಪಾಸಿಟಿವ್​​​

ತನಗೆ ಕೊರೋನಾ ಬಂದ ಬಗ್ಗೆ ಫೇಸ್​​ಬುಕ್​​ನಲ್ಲಿ ಗಾಲಿ ಜನಾರ್ದನ್​​ ರೆಡ್ಡಿ ಹೀಗೆ ಬರೆದುಕೊಂಡಿದ್ಧಾರೆ. ನನಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ.

ಮಾಜಿ ಸಚಿವ ಜನಾರ್ದನ ರೆಡ್ಡಿ.

  • Share this:
ಬೆಂಗಳೂರು(ಆ.30): ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಗಾಲಿ ಜನಾರ್ದನ್​​ ರೆಡ್ಡಿಯವರಿಗೆ ಕೊರೋನಾ ಪಾಸಿಟಿವ್​​ ಕಾಣಿಸಿಕೊಂಡಿದೆ. ಕೊರೋನಾ ಪಾಸಿಟಿವ್​ ಕಾಣಿಸಿಕೊಂಡ ಕಾರಣ ವೈದ್ಯರ ಸಲಹೆ ಮೇರೆಗೆ ಸರ್ಕಾರದ ಪ್ರೋಟೋಕಾಲ್​ ಪ್ರಕಾರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಜನಾರ್ದನ್​​ ರೆಡ್ಡಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜನಾರ್ದನ್​​ ರೆಡ್ಡಿ ಇಂದು ಬಳ್ಳಾರಿಗೆ ತೆರಳಬೇಕಿತ್ತು. ಇದಕ್ಕೂ ಮುನ್ನ ನಿನ್ನೆ ಸಂಜೆಯೇ ಜನಾರ್ದನ್​ ರೆಡ್ಡಿ ಅನಾರೋಗ್ಯದ ಕಾರಣ ಕೊರೋನಾ ಪರೀಕ್ಷೆ ಮಾಡಿಸಿದ್ದರು. ಈ ವೇಳೆ ಇವರಿಗೆ ಕೊರೋನಾ ಸೋಂಕು ಇರುವುದು ಖಾತ್ರಿಯಾಗಿದೆ. ಈ ಬಗ್ಗೆ ಖುದ್ದು ಮಾಜಿ ಸಚಿವರೇ ತನಗೆ ಕೊರೋನಾ ಪಾಸಿಟಿವ್​​ ಬಂದ ಬಗ್ಗೆ ಖಾತ್ರಿಪಡಿಸಿದ್ಧಾರೆ.

ತನಗೆ ಕೊರೋನಾ ಬಂದ ಬಗ್ಗೆ ಫೇಸ್​​ಬುಕ್​​ನಲ್ಲಿ ಗಾಲಿ ಜನಾರ್ದನ್​​ ರೆಡ್ಡಿ ಹೀಗೆ ಬರೆದುಕೊಂಡಿದ್ಧಾರೆ. ನನಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು, ಕೊರೋನಾ ಪಾಸಿಟಿವ್​ ಬಂದಿದ್ದರಿಂದ ನನ್ನ ಪ್ರಾಣ ಸ್ನೇಹಿತನಾದ ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ನನಗೆ ಚಿಕಿತ್ಸೆ ನೀಡುತ್ತಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಬಂದಿದೆ ಎಂದು ಜನಾರ್ದನ್​​ ರೆಡ್ಡಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ ನಿಯಮ ಉಲ್ಲಂಘನೆ; ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ಗೆ 14 ದಿನ ಬಲವಂತದ ಕ್ವಾರಂಟೈನ್

ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ ಎಂದಿದ್ದಾರೆ. ಇನ್ನೂ ಜನಾರ್ದನ ರೆಡ್ಡಿ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಸೇರಿದಂತೆ ಹಲವರು ಹಾರೈಸಿದ್ದಾರೆ.
Published by:Ganesh Nachikethu
First published: