ಮೋದಿಯ 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ರೈತರಿಗೆ ಆದ್ಯತೆ ಇರಲಿ: ಮೈಸೂರಿನಲ್ಲಿ ರೈತ ಮುಖಂಡರಿಂದ ಆಗ್ರಹ

ದುಡಿಯುವ ವರ್ಗಕ್ಕೆ ಹೆಚ್ಚಿನ ಉದ್ಯೋಗ ನೀಡಿ ಹಣ ಸಿಗುವಂತೆ ಮಾಡಬೇಕು. ಆಗಷ್ಟೇ ಜನರಿಗೆ ಹಣ ಸಿಗೋದು. ಆದ್ದರಿಂದ ವಿಶೇಷ ಪ್ಯಾಕೇಜ್‌ನಲ್ಲಿ ಕೃಷಿಗೆ ಆದ್ಯತೆ ಸಿಗಲಿ ರೈತ ಮುಖಂಡರು ಮನವಿ ಮಾಡಿದ್ದಾರೆ.

news18-kannada
Updated:May 14, 2020, 6:58 AM IST
ಮೋದಿಯ 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ರೈತರಿಗೆ ಆದ್ಯತೆ ಇರಲಿ: ಮೈಸೂರಿನಲ್ಲಿ ರೈತ ಮುಖಂಡರಿಂದ ಆಗ್ರಹ
ನರೇಂದ್ರ ಮೋದಿ
  • Share this:
ಮೈಸೂರು(ಮೇ 13): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ ಮೊತ್ತದ ಪ್ಯಾಕೇಜ್ ಪ್ರಕಟಿಸಿದ್ಧಾರೆ. ಇವತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಹಂತದ ಪ್ಯಾಕೇಜ್ ವಿವರ ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮೈಸೂರಿನ ರಾಜಕೀಯ ಧುರೀಣರು ಮತ್ತು ರೈತ ಮುಖಂಡರು ಕೇಂದ್ರ ಸರ್ಕಾರದ ಪ್ಯಾಕೇಜ್​ನಲ್ಲಿ ಕೃಷಿಕರಿಗೆ ಹೆಚ್ಚು ಆದ್ಯತೆಯ ನಿರೀಕ್ಷೆಯಲ್ಲಿದ್ಧಾರೆ.

ಕೇಂದ್ರದ ಪ್ಯಾಕೇಜ್​ನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಿ ಅಂತ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಮೋದಿಯ ಕಣ್ಣು ತೆರೆಸಿದೆ. ಪ್ರವಾಹ ಬಂದಾಗಲೂ ರಾಜ್ಯಕ್ಕೆ ಏನು ಕೊಟ್ಟಿಲ್ಲ, ನೆರೆ ಬಂದಾಗಲು ರಾಜ್ಯಕ್ಕೆ ಏನು ಕೊಟ್ಟಿಲ್ಲ. ಈಗ 20 ಲಕ್ಷ ಕೋಟಿ ಅಂತ ಘೋಷಣೆ ಮಾಡಿದ್ದಾರೆ. ಆ ಮೊತ್ತ ದೊಡ್ಡದಾಗಿದ್ದರೂ ನಮ್ಮ ಕೃಷಿ ಬಂಡವಾಳಕ್ಕೆ ಹೋಲಿಸಿದರೆ ಅದು ಕಡಿಮೆಯೇ ಸರಿ. ಆ ಕಡಿಮೆ ಮೊತ್ತದ ಪರಿಹಾರ ಘೋಷಣೆಗೆ ಸ್ವಾಗತಾರ್ಹ. ಆದ್ರೆ ಇದನ್ನ ಕೃಷಿ ಕ್ಷೇತ್ರ ಹಾಗೂ ಕೃಷಿ ಅವಲಂಬಿತರಿಗೆ ನೀಡಬೇಕು. ದುಡಿಯುವ ವರ್ಗಕ್ಕೆ ಹೆಚ್ಚಿನ ಉದ್ಯೋಗ ನೀಡಿ ಹಣ ಸಿಗುವಂತೆ ಮಾಡಬೇಕು. ಆಗಷ್ಟೇ ಜನರಿಗೆ ಹಣ ಸಿಗೋದು. ಆದ್ದರಿಂದ ವಿಶೇಷ ಪ್ಯಾಕೇಜ್‌ನಲ್ಲಿ ಕೃಷಿಗೆ ಆದ್ಯತೆ ಸಿಗಲಿ ಅಂತ ಮನವಿ ಮಾಡಿಕೊಂಡರು.

ಇನ್ನು, ಮತ್ತೊಬ್ಬ ರೈತ ಮುಖಂಡ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ದೇಶದ ಆರ್ಥಿಕತೆಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಸ್ವಾಗತರ್ಹ ಎಂದು ಹೇಳಿದ್ದಾರೆ. ಆ ವಿಶೇಷ ಪ್ಯಾಕೇಜ್​ನಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಅವರೂ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Karnataka Politics - ಡಿ.ಕೆ. ಶಿವಕುಮಾರ್​ಗೆ ಸ್ವಕ್ಷೇತ್ರದಲ್ಲೇ ಹಿನ್ನಡೆ; ಸ್ವಪಕ್ಷೀಯರ ವಿಶ್ವಾಸ ಗಳಿಸುವಲ್ಲಿ ವಿಫಲ

IMF ಗೆ ಅರ್ಜಿ ಹಾಕದೆ ಪ್ಯಾಕೇಜ್ ಘೋಷಣೆ ಮಾಡಿರೋದು ಸಂತಸ. ಈ ವಿಶೇಷ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಉತ್ತಮ ನಿರ್ಧಾರ. ಇದರಲ್ಲಿ ಎಲ್ಲ ವರ್ಗಕ್ಕೂ ಆರ್ಥಿಕ ಸಹಾಯ ಸಿಗಲಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ವಲಯಕ್ಕೆ ಮೀಸಲಾಗಿರಬೇಕು. ಅದರಿಂದ ಕೃಷಿಕರ ಆದಾಯ ದ್ವಿಗುಣವಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಘೋಷಣೆಗೆ ನನ್ನ ಅಭಿನಂದನೆ ಅಂತ ಮೈಸೂರಿನ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ. 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಸ್ಕಿಲ್ ಡೆವಲಪ್ಮೆಂಟ್​ಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಂಪನಿಗಳು ತಮ್ಮ ಬಳಿ ಇದ್ದ ಪರಿಣಿತರನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ಥಿತಿ ಪರಿಣಿತರನ್ನ ಉತ್ತೇಜಿಸುವ ಕೆಲಸ ಆಗಬೇಕು. ವಿಶೇಷ ಪ್ಯಾಕೇಜ್​ನಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ. ಈ ಬಗ್ಗೆ ಮೈಸೂರಿನ 20 ಕಡೆ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಈ ಘೋಷಣೆಯಿಂದ ದೇಶ ಮತ್ತಷ್ಟು ಅಭಿವೃದ್ದಿ ಪಥದತ್ತ ಹೋಗಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಲಬುರ್ಗಿಯಲ್ಲಿ ಒಂದೇ ದಿನ ಎಂಟು ಪಾಸಿಟಿವ್; ರೋಗಿಯಿಂದ ವೈದ್ಯ, ಶುಶ್ರೂಷಕಿಗೂ ಹರಡಿದ ಸೋಂಕುಇಡೀ ಭಾರತ ಮೋದಿ ಘೋಷಣೆಯನ್ನ ಸ್ವಾಗತಿಸುತ್ತದೆ. ಜನರ ಮೇಲೆ ಮೋದಿ ಒಲವು ಇದೆ. ಈ ಒಲವು ನೋಡಿದ್ರೆ ಈ ಪ್ಯಾಕೇಜ್ ಅನುಷ್ಠಾನ ಆಗುತ್ತೆ ಅನ್ನೋ ನಂಬಿಕೆ ಇದೆ. ಥಿಂಕ್ ಗ್ಲೋಬಲಿ ಅನ್ನೋ ಆಶಯಕ್ಕೂ ಮೋದಿ ನಿರೇರೆದಿದ್ದಾರೆ. ಸ್ಥಳೀಯ ವಾಣಿಜ್ಯ ಚಟುವಟಿಕೆಗೆ ಗ್ಲೋಬಲ್ ಮಾರ್ಕೆಟ್ ಆರಂಭವಾಗಬೇಕಿದೆ. ಈ ವಿಶೇಷ ಪ್ಯಾಕೇಜ್​ನಲ್ಲಿ ಎಲ್ಲರಿಗೂ ಅನುಕೂಲ ಆಗುವ ನಿರೀಕ್ಷೆ ಇದೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದರು.

ರಾಜ್ಯದಲ್ಲಿ ಆರ್ಥಿಕ ಶಿಸ್ತು ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವುದಕ್ಕೆ ಮಾತ್ರ ಖರ್ಚು ಮಾಡಿ. ನಮ್ಮ ಬಜೆಟ್ ಹಣದಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಬಳಕ್ಕೆ 21% ಹೋಗ್ತಿದೆ. ರಾಜ್ಯದ ಪಿಂಚಣಿದಾರರಿಗೆ 9% ಹಣ ಹೋಗುತ್ತದೆ. ಇದನ್ನೆಲ್ಲ ನಿಯಂತ್ರಣ ಮಾಡಬೇಕಿದೆ. ಹಾಗಂತ ಸಂಬಳ ಕಟ್ ಮಾಡಿ ಅಥವ ಪಿಂಚಣಿ ಕಟ್ ಮಾಡಿ ಅಂತ ನಾನು ಹೇಳೋಲ್ಲ. ಬೇರೆ ಬೇರೆ ರೂಪದಲ್ಲಿ ಅನಗತ್ಯ ಖರ್ಚು ನಿಯಂತ್ರಣ ಮಾಡಬೇಕು. ನಾವೆಲ್ಲರೂ ತ್ಯಾಗ ಮಾಡಲು ಸಿದ್ದರಾಗಬೇಕು. ಸರ್ಕಾರಿ ನೌಕರರು ಹಾಗೂ ಉಳ್ಳವರು ತ್ಯಾಗ ಮಾಡಬೇಕು. ಇಡೀ ಭಾರತ ತ್ಯಾಗ ಮಾಡಲು ಸಿದ್ದವಾಗಬೇಕು ಎಂದು ಮಾಜಿ ಸಚಿವರು ಕರೆ ನೀಡಿದರು.

ವರದಿ: ಪುಟ್ಟಪ್ಪ

First published: May 13, 2020, 10:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading