ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ 14 ಲಕ್ಷ ರೂ. ಚೆಕ್​​ ನೀಡಿ ಸಹಾಯ ಹಸ್ತ ಚಾಚಿದ ಎಚ್​​ಡಿಕೆ

ಇನ್ನು,ಬೆಳೆ ಕಳೆದುಕೊಂಡ ಪ್ರತಿಯೊಬ್ಬ ರೈತನ ಕುಟುಂಬಕ್ಕೆ ಬೆಳೆನಷ್ಟದ ಆಧಾರದ ಮೇಲೆ ಪರಿಹಾರ ಕೊಡುವ ಭರವಸೆ ಕೊಟ್ಟಿದ್ದರು. ಹಾಗಾಗಿ ಇವತ್ತು ಚನ್ನಪಟ್ಟಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಷ್ಟಕ್ಕೊಳಗಾದ 220 ಜನ ರೈತರಿಗೆ ಒಟ್ಟು 14 ಲಕ್ಷ ರೂ. ಪರಿಹಾರದ ಚೆಕ್ ಕೊಡುವ ಮೂಲಕ ಚನ್ನಪಟ್ಟಣ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

news18-kannada
Updated:June 3, 2020, 7:41 AM IST
ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ 14 ಲಕ್ಷ ರೂ. ಚೆಕ್​​ ನೀಡಿ ಸಹಾಯ ಹಸ್ತ ಚಾಚಿದ ಎಚ್​​ಡಿಕೆ
ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ 14 ಲಕ್ಷ ರೂ. ಚೆಕ್​​ ನೀಡಿ ಸಹಾಯ ಹಸ್ತ ಚಾಚಿದ ಎಚ್​​ಡಿಕೆ
  • Share this:
ರಾಮನಗರ(ಜೂ.03): ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಇಂದು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕ್ಷೇತ್ರದಲ್ಲಿ ಮಳೆಯಿಂದಾಗಿ ಬೆಳೆ ಕಳೆದುಕೊಂಡಿದ್ದ ನೊಂದ ರೈತರಿಗೆ ವೈಯಕ್ತಿಕವಾಗಿ ಪರಿಹಾರ ನೀಡುವ ಮೂಲಕ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾದರು.

ಕಳೆದ ಕೆಲ ದಿನಗಳ ಹಿಂದಷ್ಟೇ ಕ್ಷೇತ್ರದ ಗೋವಿಂದಹಳ್ಳಿ, ಸೀಬನಹಳ್ಳಿ, ಕೋಲೂರು, ಮುದಗೆರೆ ಸೇರಿದಂತೆ ಹಲವೆಡೆ ನೂರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಬಾಳೆಗಿಡಗಳು ಜೋರು ಗಾಳಿಮಳೆಗೆ ನೆಲಕಚ್ಚಿದ್ದವು. ಇದರ ಜೊತೆಗೆ ತೆಂಗಿನಮರಗಳು, ಮಾವಿನಮರಗಳು ಸಹ ನೆಲಕ್ಕುರುಳಿದ್ದವು. ಇನ್ನು ಆಗ ಸ್ಥಳಕ್ಕೆ ಎಚ್​​ಡಿಕೆ ಭೇಟಿ ಕೊಟ್ಟು ರೈತರಿಗೆ ಬಿಎಸ್​ವೈ ಸರ್ಕಾರದಿಂದ ಪರಿಹಾರ ಕೊಡಿಸುವ ಜತೆಗೆ ವೈಯಕ್ತಿಕವಾಗಿ ಪರಿಹಾರ ಕೊಡುವ ಭರವಸೆ ಕೊಟ್ಟಿದ್ದರು.

ಇನ್ನು,ಬೆಳೆ ಕಳೆದುಕೊಂಡ ಪ್ರತಿಯೊಬ್ಬ ರೈತನ ಕುಟುಂಬಕ್ಕೆ ಬೆಳೆನಷ್ಟದ ಆಧಾರದ ಮೇಲೆ ಪರಿಹಾರ ಕೊಡುವ ಭರವಸೆ ಕೊಟ್ಟಿದ್ದರು. ಹಾಗಾಗಿ ಇವತ್ತು ಚನ್ನಪಟ್ಟಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಷ್ಟಕ್ಕೊಳಗಾದ 220 ಜನ ರೈತರಿಗೆ ಒಟ್ಟು 14 ಲಕ್ಷ ರೂ. ಪರಿಹಾರದ ಚೆಕ್ ಕೊಡುವ ಮೂಲಕ ಚನ್ನಪಟ್ಟಣ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಅರಣ್ಯ ಅಧಿಕಾರಿಗಳಿಂದ ನೊಂದ ರೈತರ ಬೆನ್ನಿಗೆ ನಿಂತ ಸಂಸದ ಡಿ ಕೆ ಸುರೇಶ್

ರೈತರಿಗೆ ಚೆಕ್​​ ನೀಡಿದ ಬಳಿಕ ಮಾತಾಡಿದ ಎಚ್​ಡಿಕೆ, ನಾನು ಸದಾ ಈ ಕ್ಷೇತ್ರದ ಜನರ ಜೊತೆಗೆ ಇರುತ್ತೇನೆ, ಯಾವ ಕಾರಣಕ್ಕೂ ಚನ್ನಪಟ್ಟಣ  ಜನರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ಕೊಟ್ಟರು. ಈ ಸಂದರ್ಭದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರಾದ ಹೆಚ್​ಸಿ ಜಯಮುತ್ತು, ಹಾಪ್ ಕಾಮ್ಸ್ ದೇವರಾಜ್, ಕರಿಯಪ್ಪ, ಕುಕ್ಕೂರುದೊಡ್ಡಿ ಜಯರಾಮ್ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.

First published: June 3, 2020, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading