ಗೋವಾದಲ್ಲಿ ಸಿಲುಕಿರುವ ಬಾದಾಮಿಯ ಕೂಲಿ ಕಾರ್ಮಿಕರಿಗೆ ಸಿದ್ದರಾಮಯ್ಯ ಅಭಿಮಾನಿಗಳ ನೆರವು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗದವರು ಆಹಾರ ಸಾಮಗ್ರಿಗಳನ್ನು ವಿತರಿಸಲು ಮುಂದಾಗಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಮಾನಿಗಳ ಬಳಗ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಮಾನಿಗಳ ಬಳಗ

 • News18
 • Last Updated :
 • Share this:
  ಬಾಗಲಕೋಟೆ(ಏ.25): ಲಾಕ್ ಡೌನ್​ನಿಂದ ಗೋವಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಾದಾಮಿಯ ಕಾರ್ಮಿಕರಿಗೆ ಕ್ಷೇತ್ರದ ಶಾಸಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ಲಾರಿ ಮೂಲಕ ಗೋವಾಕ್ಕೆ ಕಳುಹಿಸಿಕೊಡಲಾಗಿದೆ.

  ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನಿಂದ ಕೂಲಿ ಕಾರ್ಮಿಕರು ಉದ್ಯೋಗ ಅರಿಸಿ ಗೋವಾಕ್ಕೆ ಹೋಗಿದ್ದಾರೆ. ಲಾಕ್ ಡೌನ್ ದಿಂದಾಗಿ ಕಾರ್ಮಿಕರಿಗೆ ಉದ್ಯೋಗ ಇಲ್ಲ, ಆಹಾರ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಮನಗಂಡು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಮಾನಿ ಬಳಗದವರು ಆಹಾರ ಸಾಮಗ್ರಿಗಳನ್ನು ವಿತರಿಸಲು ಮುಂದಾಗಿದ್ದಾರೆ.

  ಎರಡು ಕೆಜಿ ಗೋಧಿ ಹಿಟ್ಟು, ಎರಡು ಕೆಜಿ ಜೋಳ, ಒಂದು ಕೆಜಿ ಬೇಳೆ, ಒಂದು ಕೆಜಿ ರುಚಿ ಗೋಲ್ಡ್ ಎಣ್ಣೆ, ಒಂದು ಕೆಜಿ ಸಕ್ಕರೆ, ಒಂದು ಕೆಜಿ ರವಾ, ಒಂದು ಕೆಜಿ ಅಕ್ಕಿ, ಅರ್ಧ ಕೆಜಿ ಹುರಳಿಕಾಳು, ಎರಡು ಕೆಜಿ ಉಳ್ಳಾಗಡ್ಡಿ, ಎರಡು ಕೆಜಿ ಹಸಿಮೆಣಸಿನ ಕಾಯಿ, ಎರಡು ಸಾಬೂನು, ಒಟ್ಟು ಹನ್ನೊಂದು ಪದಾರ್ಥಗಳುಳ್ಳ ಆಹಾರ ಸಾಮಗ್ರಿಯ ಪ್ಯಾಕೇಟ್ ಗಳನ್ನು ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ತೋರಿದ್ದಾರೆ.

  ಇದನ್ನೂ ಓದಿ : ಕೊರೋನಾ ಸೋಂಕಿನಿಂದ ಮೂವರು ಗುಣಮುಖ - ಕಲಬುರ್ಗಿ ಜನರಿಗೆ ಒಂದಷ್ಟು ನಿರಾಳ

  ಕುಟುಂಬಕ್ಕೆ ಒಂದರಂತೆ ಒಂದು ಸಾವಿರ ಕುಟುಂಬಗಳಿಗೆ ಈ ಪ್ಯಾಕೆಟ್ ವಿತರಣೆಯಾಗಲಿದ್ದು. ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅಭಿಮಾನಿ ಬಳಗದವರು ಬಡಜನರಿಗೆ ಆಹಾರ ಧಾನ್ಯ ಕಿಟ್ ,ಮಾಸ್ಕ್ ವಿತರಿಸಿ, ಕ್ಷೇತ್ರದ ನೊಂದ ಜನರಿಗೆ ನೆರವಾಗಿದ್ದಾರೆ.

   
  First published: