ಕೊರೋನಾ ವಿರುದ್ಧದ ಹೋರಾಟದಲ್ಲಿ ಐಕ್ಯತೆ ಸಾರುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ದೀಪ ಬೆಳಗಲು ಕರೆ ನೀಡಿದ್ದರು. ಇದರಲ್ಲಿ ಸ್ಯಾಂಡಲ್ವುಡ್ ಯಶ್ ಸಹ ಭಾಗಿಯಾಗಿದ್ದರು.
ಲಾಕ್ಡೌನ್ ವೇಳೆ ಮನೆಯಲ್ಲೇ ಮಗಳು ಹಾಗೂ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ಯಶ್ ಕಳದೆ ಭಾನುವಾರ ರಾತ್ರಿ ಮನೆಯಂಗಳದಲ್ಲಿ ದೀಪ ಬೆಳಗಿದ್ದಾರೆ. ಈ ವೇಳೆ ತಮ್ಮ ಮಗಳು ಆಯ್ರಾ ದೀಪದ ಬೆಳಕಿನಲ್ಲಿದ್ದ ಮುದ್ದಾದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
![Yash shared adorable video of his daughter Ayra in Facebook and video gone viral]()
ಅಪ್ಪ-ಮಗಳ ಮುದ್ದಾದ ಚಿತ್ರ
ಈ ವಿಡಿಯೋವನ್ನು ಯಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ.
ಈ ಹಿಂದೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾಗಲೂ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವವರಿಗಾಗಿ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಲು ಮನವಿ ಮಾಡಿದ್ದರು ನರೇಂದ್ರ ಮೋದಿ. ಆಗಲೂ ರಾಧಿಕಾ ಆಯ್ರಾ ಚಪ್ಪಾಳೆ ತಟ್ಟುವ ವಿಡಿಯೋವನ್ನು ಹಂಚಿಕೊಂಡಿದ್ದರು.
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇರುವ ಯಶ್-ರಾಧಿಕಾ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೆ ಮಗಳಿಗೆ ಅಪ್ಪ ಊಟ ಮಾಡಿಸುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಹೀಗೆ ಆಗಾಗ ಒಂದೊಂದು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಿದ್ದಾರೆ ರಾಕಿಂಗ್ ಜೋಡಿ.
Disha Patani: ಲಾಕ್ಡೌನ್ನಲ್ಲೂ ಹಾಟ್ ಫೋಟೋಗಳಿಂದ ಪಡ್ಡೆಗಳ ನಿದ್ದೆ ಕದ್ದಿರುವ ನಟಿ ದಿಶಾ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ