HOME » NEWS » Coronavirus-latest-news » FAMOUS KANNADA ACTRESS SON DIED DUE CORONAVIRUS HTV MAK

CoronaVirus| ಕನ್ನಡದ ಖ್ಯಾತ ನಟಿಯ ಮಗ ಕೊರೋನಾಗೆ ಬಲಿ, ಸಾವು ಬದುಕಿನ ನಡುವೆ ಪತಿಯ ಹೋರಾಟ.!

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬರೋಬ್ಬರಿ 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಟಿ ಕವಿತಾ. ಅವರೇ ಈಗ ದುಃಖದ ಮಡುವಿನಲ್ಲಿದ್ದಾರೆ. ಅದಕ್ಕೆ ಕಾರಣ ಕೊರೋನಾ ಸೋಂಕು.

news18-kannada
Updated:June 16, 2021, 11:49 PM IST
CoronaVirus| ಕನ್ನಡದ ಖ್ಯಾತ ನಟಿಯ ಮಗ ಕೊರೋನಾಗೆ ಬಲಿ, ಸಾವು ಬದುಕಿನ ನಡುವೆ ಪತಿಯ ಹೋರಾಟ.!
ಹಿರಿಯ ನಟಿ ಕವಿತಾ ಅವರ ಕುಟುಂಬ
  • Share this:
ಕೊರೋನಾ ಮಹಾಮಾರಿಗೆ ವಿಶ್ವದಾದ್ಯಂತ ಕಳೆದ ಒಂದು ವರ್ಷದಿಂದ ೩೮ ಲಕ್ಷಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಭಾರತದಲ್ಲೂ 3.80 ಲಕ್ಷ ಜನ ಈ ಕಣ್ಣಿಗೆ ಕಾಣದ ಸೋಂಕಿಗೆ ಬಲಿಯಾಗಿದ್ದಾರೆ. ಬಡವರು, ಶ್ರೀಮಂತರು ಎನ್ನದಂತೆ ಎಲ್ಲರ ದೇಹ ಹೊಕ್ಕು ಕೊಲ್ಲುತ್ತಿದೆ ಈ ಕೊರೊನಾ ಸೋಂಕು. ಕೊವಿಡ್‌ಗೆ ಈಗಾಗಲೇ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಸೆಲೆಬ್ರಿಟಿಗಳು, ಅವರ ಕುಟುಂಬದವರು ಬಲಿಯಾಗಿದ್ದಾರೆ. ಸದ್ಯ ಈ ಮಹಾಮಾರಿಯಿಂದ ತನ್ನ ಪುತ್ರನನ್ನು ಕಳೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು, ತಮ್ಮ ಪತಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

ಹೌದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬರೋಬ್ಬರಿ 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಟಿ ಕವಿತಾ. ಅವರೇ ಈಗ ದುಃಖದ ಮಡುವಿನಲ್ಲಿದ್ದಾರೆ. ಅದಕ್ಕೆ ಕಾರಣ ಕೊರೋನಾ ಸೋಂಕು. ಕಳೆದ ಕೆಲ ದಿನಗಳಿಂದ ಹಿರಿಯ ನಟಿ ಕವಿತಾ ಅವರ ಪುತ್ರ ಸಂಜಯ್ ರೂಪ್ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು.

ಆರೋಗ್ಯದಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ ಕಾರಣ ಮನೆಯಲ್ಲೇ ಐಸೊಲೇಷನ್‌ನಲ್ಲಿ ಇದ್ದುಕೊಂಡೇ, ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಹಠಾತ್ತಾಗಿ ಮೊನ್ನೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕವಿತಾ ಅವರ ಮಗ ಸಂಜಯ್ ರೂಪ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಇನ್ನು ಕವಿತಾ ಅವರ ಪತಿ ದಶರಥ ರಾಜ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1976ರಲ್ಲಿ ತಮಿಳಿನ ಓಹ್ ಮಂಜು ಹಾಗೂ ತೆಲುಗಿನ ಸಿರಿ ಸಿರಿ ಮುವ್ವ ಚಿತ್ರಗಳ ಮೂಲಕ ತಮ್ಮ ಹನ್ನೊಂದನೇ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದವರು ನಟಿ ಕವಿತಾ. ಆ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ. 1977ರಲ್ಲಿ ಸಹೋದರರ ಸವಾಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು 1978ರಲ್ಲಿ ಆನಯುಮ್ ಅಂಬಾರಿಯುಮ್ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ: ಬಿಎಸ್​ಪಿ ಪಕ್ಷದಿಂದ ಅಮಾನತುಗೊಂಡ ಶಾಸಕರು ಅಖಿಲೇಶ್ ಭೇಟಿ; ಸಮಾಜವಾದಿ ಪಕ್ಷದಕ್ಕೆ ಮಾಯಾವತಿ ಶಾಪ!

ಕನ್ನಡದಲ್ಲಿ ಕಿಲಾಡಿ ಕಿಟ್ಟು, ಪುಟ್ನಂಜ, ಸೂಪರ್ ಸ್ಟಾರ್, ಎಚ್​2ಓ, ಭೂತಯ್ಯನ ಮಕ್ಕಳು, ಚಂದ್ರ ಚಕೋರಿ ಸೇರಿದಂತೆ ೨೯ ಸಿನಿಮಾಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ತೆರೆಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿದ್ದ ಉಲ್ಲಾಸ ಉತ್ಸಾಹ ಚಿತ್ರ ಹಿರಿಯ ನಟಿ ಕವಿತಾ ನಟಿಸಿದ ಕೊನೆಯ ಸಿನಿಮಾ. ಹೀಗೆ 45 ವರ್ಷಗಳ ಸುದೀರ್ಘ ಸಿನಿಪಯಣದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಕವಿತಾ ಅವರು ನಂತರ ನಾಯಕಿಯಾಗಿ ಹಾಗೂ ಆ ಬಳಿಕ ಪೋಷಕ ನಟಿಯಾಗಿ ನಟಿಸುತ್ತಲೇ ಬಂದಿದ್ದಾರೆ. ಸಿನಿಮಾ ಮಾತ್ರವಲ್ಲ ಕಿರುತೆರೆಯ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಇದನ್ನೂ ಓದಿ: ಜನ ಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ಕಟ್ಟಿರುವ ಹಣ ಹಿಂದಿರುಗಿಸಿ; ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಮನವಿಹಾಗೇ 2018ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದಿಂದ ಪ್ರೇರೇಪಿತರಾಗಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರಿದ್ದ ಕವಿತಾ, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಸಕ್ರಿಯರಾಗಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 16, 2021, 11:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories