• ಹೋಂ
  • »
  • ನ್ಯೂಸ್
  • »
  • Corona
  • »
  • Covid-19 Cases: 5 ರಾಜ್ಯಗಳಲ್ಲಿ ದೈನಂದಿನ ಕೊರೋನಾ ಪ್ರಕರಣಗಳಲ್ಲಿ ಶೇ.50 ಇಳಿಕೆ; ದೆಹಲಿ, ಉತ್ತರಪ್ರದೇಶದಲ್ಲಿ ಗಣನೀಯ ಕುಸಿತ!

Covid-19 Cases: 5 ರಾಜ್ಯಗಳಲ್ಲಿ ದೈನಂದಿನ ಕೊರೋನಾ ಪ್ರಕರಣಗಳಲ್ಲಿ ಶೇ.50 ಇಳಿಕೆ; ದೆಹಲಿ, ಉತ್ತರಪ್ರದೇಶದಲ್ಲಿ ಗಣನೀಯ ಕುಸಿತ!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಹರಿಯಾಣದಲ್ಲಿ, ದೈನಂದಿನ ಪ್ರಕರಣಗಳ ಕುಸಿತವು ಶೇ. 45.41 ರಷ್ಟಿದ್ದರೆ, ಛತ್ತೀಸ್‌ಗಢದಲ್ಲಿ ಶೇ. 44.03 ರಷ್ಟಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಅಂತೆಯೇ, ಮಧ್ಯಪ್ರದೇಶದಲ್ಲಿ ದೈನಂದಿನ ಪ್ರಕರಣಗಳು ಶೇ. 43.5 ರಷ್ಟು ಕುಸಿದಿವೆ. ಅಂದರೆ 8,970 ರಿಂದ 5,065 ಕ್ಕೆ ಕುಸಿದಿದೆ.

ಮುಂದೆ ಓದಿ ...
  • Share this:

    ನವದೆಹಲಿ: ದೆಹಲಿ, ಉತ್ತರಪ್ರದೇಶ, ಜಾರ್ಖಂಡ್, ಗುಜರಾತ್ ಹಾಗೂ ಗೋವಾದಲ್ಲಿ ಪ್ರತಿದಿನ ಕಂಡುಬರುತ್ತಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಇಂದು ಶೇ. 50ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಅತಿ ಕಡಿಮೆ ಪ್ರಕರಣಗಳು ಈ ಐದು ರಾಜ್ಯಗಳಲ್ಲಿ ಇಂದು ವರದಿಯಾಗಿವೆ. ಅದರಲ್ಲೂ ದೆಹಲಿ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗಿವೆ.


    ಇದಕ್ಕೆ ತದ್ವಿರುದ್ಧವಾಗಿ, ಮೇ 13 ರಿಂದ ಮೇ 19 ರವರೆಗೆ, ಮೇಘಾಲಯ, ಲಕ್ಷದ್ವೀಪ, ಅರುಣಾಚಲ ಪ್ರದೇಶ ಮತ್ತು ತ್ರಿಪುರದಲ್ಲಿ ದಿನನಿತ್ಯದ ಪ್ರಕರಣಗಳು ಶೇಕಡಾ 30 ರಷ್ಟು ಏರಿಕೆಯಾಗಿದೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಹೆಚ್ಚುವರಿಯಾಗಿ, ತಮಿಳುನಾಡು, ಅಸ್ಸಾಂ, ಲಡಾಖ್, ಸಿಕ್ಕಿಂ, ಆಂಧ್ರಪ್ರದೇಶ, ಮಣಿಪುರ ಹಾಗೂ ಒಡಿಶಾದಲ್ಲೂ ಕಳೆದ ಒಂದು ವಾರದಲ್ಲಿ ದೈನಂದಿನ ಪ್ರಕರಣಗಳಲ್ಲಿ ಅತಿಹೆಚ್ಚು ಏರಿಕೆಯಾಗಿರುವುದಕ್ಕೆ ಸಾಕ್ಷಿಯಾಗಿವೆ.


    31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೈನಂದಿನ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿವೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 30ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೊರೋನಾ ಪ್ರಕರಣ ಇಳಿಕೆ ಕಂಡುಬಂದಿದ್ದರೆ, ಉಳಿದ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 30ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಕರಣಗಳು ಇಳಿಮುಖವಾಗಿವೆ.


    ಇದನ್ನು ಓದಿ: Video: ಮಗಳನ್ನು ಹೆಗಲ ಮೇಲೆ ಹೊತ್ತು 8 ಕಿ.ಮೀ. ನಡೆದು ಯಾದಗಿರಿ ಆಸ್ಪತ್ರೆಗೆ ಬಂದ ತಂದೆ....!


    ದೆಹಲಿಯಲ್ಲಿ, ದೈನಂದಿನ ಪ್ರಕರಣಗಳು ಶೇಕಡಾ 71.05 ರಷ್ಟು ಕಡಿಮೆಯಾಗಿದೆ. 13,287 (ಮೇ 13) ದಿಂದ 3,846ಕ್ಕೆ ಕುಸಿದಿದೆ (ಮೇ 19). ರಾಷ್ಟ್ರ ರಾಜಧಾನಿಯ ನಂತರ ಉತ್ತರ ಪ್ರದೇಶದಲ್ಲಿ ಶೇ. 60.12 ರಷ್ಟು ಕೊರೋನಾ ಪ್ರಕರಣಗಳು ಕುಸಿದಿವೆ. ಒಂದು ದಿನದಲ್ಲಿ 18,023 ಪ್ರಕರಣಗಳಿಂದ 7,186 ಸೋಂಕು ಪ್ರಕರಣಗಳು ವರದಿಯಾಗಿವೆ. ಹಾಗೆಯೇ  ಜಾರ್ಖಂಡ್, ಗುಜರಾತ್ ಮತ್ತು ಗೋವಾದಲ್ಲೂ ಸಹ ವಾರದಲ್ಲಿ ಇಂದು ಶೇ. 50ಕ್ಕಿಂತ ಹೆಚ್ಚು ಕುಸಿತ ಕಂಡು ಬಂದಿದೆ.


    ಜಾರ್ಖಂಡ್‌ಗೆ ಸಂಬಂಧಿಸಿದಂತೆ, ದೈನಂದಿನ ಪ್ರಕರಣಗಳು 4,362 (ಮೇ 13) ರಿಂದ 1,894 (ಮೇ 19) ಕ್ಕೆ ಇಳಿದಿವೆ. ಅಂದರೆ ಶೇ. 56.57 ರಷ್ಟು ಕುಸಿತ ಕಂಡಿದೆ. ಹಾಗೆಯೇ, ಗುಜರಾತ್‌ನಲ್ಲಿ ದೈನಂದಿನ ಸಂಖ್ಯೆ 11,017 ರಿಂದ 5,246 ಕ್ಕೆ ಇಳಿದಿದೆ. ಗೋವಾದಲ್ಲಿ ಮೇ 19 ರಂದು 1,209 ಪ್ರಕರಣಗಳು ವರದಿಯಾಗಿದ್ದರೆ, ಮೇ 13 ರಂದು ರಾಜ್ಯದಲ್ಲಿ ಒಂದು ದಿನದಲ್ಲಿ 2,491 ಸೋಂಕುಗಳು ವರದಿಯಾಗಿವೆ. ಹರಿಯಾಣದಲ್ಲಿ, ದೈನಂದಿನ ಪ್ರಕರಣಗಳ ಕುಸಿತವು ಶೇ. 45.41 ರಷ್ಟಿದ್ದರೆ, ಛತ್ತೀಸ್‌ಗಢದಲ್ಲಿ ಶೇ. 44.03 ರಷ್ಟಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಅಂತೆಯೇ, ಮಧ್ಯಪ್ರದೇಶದಲ್ಲಿ ದೈನಂದಿನ ಪ್ರಕರಣಗಳು ಶೇ. 43.5 ರಷ್ಟು ಕುಸಿದಿವೆ. ಅಂದರೆ 8,970 ರಿಂದ 5,065 ಕ್ಕೆ ಕುಸಿದಿದೆ.

    Published by:HR Ramesh
    First published: