ಲಸಿಕೆ ಪಡೆದವರು 2 ವರ್ಷಗಳಲ್ಲಿ ಸಾಯುತ್ತಾರೆ ಎಂಬ ನೊಬೆಲ್ ಪ್ರಶಸ್ತಿ ವಿಜೇತ ತಜ್ಞನ ಹೇಳಿಕೆ ಸತ್ಯನಾ?

ಕೊರೋನಾ ಲಸಿಕೆ ಪಡೆದವರು 2 ವರ್ಷಗಳೊಳಗೆ ಸಾವನ್ನಪ್ಪುತ್ತಾರೆ ಎಂಬ ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ ಹೇಳಿಕೆ ವೈರಲ್​​​​​ ಆಗಿತ್ತು. ಎಷ್ಟು ಸತ್ಯ ಎಂದು ತಿಳಿಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೊರೋನಾ ಲಸಿಕೆ ಪಡೆದ ಪ್ರತಿಯೊಬ್ಬರೂ ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬ ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಅವರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಕೋವಿಡ್-19 ವ್ಯಾಕ್ಸಿನೇಷನ್ ಪಡೆದವರಿಗೆ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ ಪ್ರತಿಪಾದಿಸಿದ್ದಾರೆ. ಅಲ್ಲದೆ ಈಗಾಗಲೇ ಲಸಿಕೆ ತೆಗೆದುಕೊಂಡವರು 2 ವರ್ಷದ ಬಳಿಕ ಸಾವನ್ನಪ್ಪುತ್ತಾರೆ. ಇಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರ ಲಸಿಕೆ ಹಾಕುವ ನಿರ್ಧಾರ ತೆಗೆದುಕೊಂಡಿರುವುದನ್ನು ಯೋಚಿಸಲು ಕೂಡ ಸಾಧ್ಯವಿಲ್ಲ. ಅದು ಹೇಗೆ ಲಸಿಕೆಗೆ ಅನುಮತಿ ನೀಡಿದೆ ಎಂದು ವಿಶ್ವದ ಉನ್ನತ ವೈರಾಲಜಿಸ್ಟ್ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ಸಾಕಷ್ಟು ಸಾವು ನೋವುಗಳುಂಟಾಗುತ್ತದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ.


ಈ ಸಂಗತಿಯನ್ನು ಪ್ರಮುಖ ವೈರಾಲಜಿಸ್ಟ್ಗಳು ಒಪ್ಪುತ್ತಾರೆ. ಅನೇಕ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕೂಡ ಇದನ್ನು ತಿಳಿದಿದ್ದಾರೆ. ಪ್ರತಿಕಾಯ ಅವಲಂಬಿತ ವರ್ಧನೆಯು ಲಸಿಕೆ ಪಡೆದವರ ಸಾವಿಗೆ ಕಾರಣವಾಗುತ್ತದೆ ಎಂದು ಈ ಫೇಕ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಕೆಲವರು ಯುನೈಟೆಡ್ ಸ್ಟೇಟ್ಸ್ನ RAIR ಫೌಂಡೇಶನ್‌ಗೆ ನೀಡಿದ ಸಂದರ್ಶನದ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮೊಂಟಾಗ್ನಿಯರ್ ಅವರು ಇದೊಂದು ಪ್ರಮುಖ ತಪ್ಪು, ಹೌದಲ್ಲವೇ? ಅಲ್ಲದೇ ಇದು ವೈಜ್ಞಾನಿಕ ಮತ್ತು ವೈದ್ಯಕೀಯ ದೋಷವಾಗಿದೆ. ಇದು ಕ್ಷಮಿಸಲಾಗದ ಪ್ರಮಾದ. ಈ ಲಸಿಕೆಗಳಿಂದಲೇ ರೂಪಾಂತರಿಗಳು ಸೃಷ್ಟಿಯಾಗುತ್ತಿರುವುದು ಎನ್ನುವುದನ್ನು ಇತಿಹಾಸದ ಪುಸ್ತಕಗಳನ್ನು ತೆರೆದು ನೋಡಿ ಎನ್ನುವ ಆಘಾತಕಾರಿ ಅಂಶವನ್ನು ಸಹ ಈ ಪೋಸ್ಟ್ ಒಳಗೊಂಡಿದೆ.


ಇದನ್ನೂ ಓದಿ: Explained: ಕೊರೋನಾದಿಂದ ಗುಣಮುಖರಾದ ಬಳಿಕ ಕಾಡುವ ಆರೋಗ್ಯ ಸಮಸ್ಯೆಗಳಿಂದ ಬಚಾವ್ ಆಗಲು ಇದೆ ಮಾರ್ಗ

ಈ ತಿಂಗಳ ಆರಂಭದಲ್ಲಿ ಹೋಲ್ಡ್-ಅಪ್ ಮೀಡಿಯಾದ ಪಿಯರೆ ಬಾರ್ನೇರಿಯಾಸ್ ಅವರೊಂದಿಗಿನ ಸಂದರ್ಶನದಲ್ಲಿ, ಇದು ವೈರಸ್‌ನಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ಪ್ರಬಲ ಸೋಂಕಿನ ಮೂಲಕ ಬಲವರ್ಧನೆ ಮಾಡುತ್ತದೆ ಎಂದು ಅವರು ಟೀಕಿಸಿರುವ ಅಂಶ ಪೋಸ್ಟ್ನಲ್ಲಿದೆ.


ಲಸಿಕೆಗಳು ರೂಪಾಂತರಿಗಳನ್ನು ಸೃಷ್ಟಿಸುತ್ತಿವೆ!


ವೈರಸ್ಗಳ ರೂಪಾಂತರಿಗಳು ಸಹಜವಾಗಿ ಜನ್ಮ ತಾಳಬಹುದು. ಆದರೆ ವ್ಯಾಕ್ಸಿನೇಷನ್ ಆ ಪ್ರಕ್ರಿಯೆಯನ್ನು ಪ್ರಚೋದಿಸುತ್ತಿದೆ. ಮೊಂಟಾಗ್ನಿಯರ್ ಪ್ರಕಾರ, ವೈರಸ್ ವ್ಯತ್ಯಾಸಗಳು ಸ್ವಯಂಪ್ರೇರಿತವಾಗಿ ಹೊರಹೊಮ್ಮಬಹುದು. ವೈರಸ್‌ನ ಕಾರ್ಯವೇನು? ಅದು ಸಾಯುತ್ತದೆಯೇ ಅಥವಾ ಅದು ಬೇರೆ ದಾರಿ ಕಂಡುಕೊಳ್ಳುತ್ತದೆಯೇ? ವ್ಯಾಕ್ಸಿನೇಷನ್‌ನ ಪರಿಣಾಮವಾಗಿ ಪ್ರತಿಕಾಯ ಮಧ್ಯಸ್ಥ ಆಯ್ಕೆಯ ಹೆಚ್ಚುವರಿ ಪರಿಣಾಮಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಈ ಸಾಂಕ್ರಾಮಿಕ ಸಮಯದಲ್ಲಿ ಲಸಿಕೆ ಹಾಕುವುದು ಯೋಚಿಸಲಸಾಧ್ಯ ಎಂದು 2008ರ ಮೆಡಿಸಿನ್ ನೊಬೆಲ್ ಪ್ರಶಸ್ತಿ ವಿಜೇತ ಮೊಂಟಾಗ್ನಿಯರ್ ಉಲ್ಲೇಖಿಸಿದ್ದಾರೆ ಎಂದು ಪೋಸ್ಟ್ ಸಾಧಿಸುತ್ತಿದೆ.


ಲಸಿಕೆಗಳಿಂದ ಮರಣ ಸಂಭವಿಸಬಹುದು


ಹೊಸ ರೂಪಾಂತರಿಗಳು ವ್ಯಾಕ್ಸಿನೇಷನ್‌ನ ಫಲಿತಾಂಶವಾಗಿದೆ ಮತ್ತು ಉತ್ಪಾದನೆಯ ಫಲಿತಾಂಶವಾಗಿದೆ. ನೀವು ಅದನ್ನು ಪ್ರತಿಯೊಂದು ಸ್ಥಳದಲ್ಲೂ ನೋಡಬಹುದು. ವ್ಯಾಕ್ಸಿನೇಷನ್ ಪ್ರತಿ ದೇಶದಲ್ಲಿ ಮರಣಕ್ಕೆ ಕಾರಣವಾಗುತ್ತದೆ.ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನದ ಡೇಟಾವನ್ನು ಯುಟ್ಯೂಬ್ನಲ್ಲಿ ಬಳಸಾಗಿದೆ. ಕೋವಿಡ್ ಇಮ್ಯುನೈಸೇಶನ್ ಅನ್ನು ಪರಿಚಯಿಸಿದ ನಂತರ ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಸಂಭವಿಸಿದ ಸಾವುನೋವುಗಳ ಡೇಟಾ ಮೊಂಟಾಗ್ನಿಯರ್ ಅವರ ಶೋಧನೆಯನ್ನು ಬೆಂಬಲಿಸುವಂತಿದೆ. ಫ್ರೆಂಚ್ ಸಂದರ್ಶಕರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದ ದತ್ತಾಂಶವನ್ನು ಉಲ್ಲೇಖಿಸಿ, ಜನವರಿಯಲ್ಲಿ ರೋಗನಿರೋಧಕಗಳನ್ನು ನೀಡಲಾಗಿದ್ದರಿಂದ, ಹೊಸ ಸೋಂಕುಗಳು ಮತ್ತು ಸಾವುಗಳು ವಿಶೇಷವಾಗಿ ಯುವಜನರಲ್ಲಿ ಸ್ಫೋಟಗೊಂಡಿವೆ ಎಂದು ಸೂಚಿಸುತ್ತದೆ ಎಂದು ಹೇಳಿದ್ದಾರೆ.\
ಹೌದು, ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಮೊಂಟಾಗ್ನಿಯರ್ ಥ್ರಂಬೋಸಿಸ್ನ ಉದಾಹರಣೆಯೊಂದಿಗೆ ಇದನ್ನು ಒಪ್ಪಿದರು ಎನ್ನುವ ಅಂಶವನ್ನು ಈ ಪೋಸ್ಟ್ ಒಳಗೊಂಡಿದೆ.


ಆದರೆ ಇದೆಲ್ಲವೂ ಸುಳ್ಳು ಮಾಹಿತಿ!


RAIR ಫೌಂಡೇಶನ್ ಬಿಡುಗಡೆ ಮಾಡಿದ ಲೇಖನದಲ್ಲಿ "ಬಾಂಬ್‌ಶೆಲ್: ನೊಬೆಲ್ ಪ್ರಶಸ್ತಿ ವಿಜೇತರು ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಕೋವಿಡ್ 19 ಲಸಿಕೆ ರಚಿಸುವ ರೂಪಾಂತರಗಳು ಎಂಬ ಶೀರ್ಷಿಕೆಯಲ್ಲಿ ವೈರಾಲಜಿಸ್ಟ್ "ಪ್ರತಿಕಾಯ-ಅವಲಂಬಿತ ವರ್ಧನೆ" ಯನ್ನು ಒಂದು ವಿಷಯವಾಗಿ ಚರ್ಚಿಸಿದ್ದಾರೆ.


ಮತ್ತೊಂದೆಡೆ, ಮೊಂಟಾಗ್ನಿಯರ್ ಲಸಿಕೆ ಹಾಕಿದ ವ್ಯಕ್ತಿಗಳು ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂದು ಎಂದಿಗೂ ಹೇಳಿಲ್ಲ. "ಈಗಾಗಲೇ ಲಸಿಕೆ ಹಾಕಿದ ಜನರಿಗೆ ಯಾವುದೇ ಭರವಸೆ ಇಲ್ಲ ಮತ್ತು ಕಲ್ಪಿಸಬಹುದಾದ ಚಿಕಿತ್ಸೆಯಿಲ್ಲ" ಎಂದು ಅವರು ಹೇಳಿಲ್ಲ. ದೇಹಗಳನ್ನು ಸುಡಲು ನಾವು ಸಿದ್ಧರಾಗಿರಬೇಕು ಎನ್ನುವ ಈ ಸಂದೇಶವು ಫೇಕ್ ಪೋಸ್ಟ್ , ಸುಳ್ಳು ಸುದ್ದಿಯಾಗಿದೆ.


ಪಿಐಬಿಯ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಇದನ್ನು ನಕಲಿ ಎಂದು ತೀರ್ಪು ನೀಡಿದೆ ಮತ್ತು ಸಂದೇಶವನ್ನು ಫಾರ್ವರ್ಡ್ ಮಾಡದಂತೆ ಜನರನ್ನು ಕೇಳಿಕೊಂಡಿದೆ. ಕೊವಿಡ್ 19 ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಲಸಿಕೆ ಪಡೆಯಿರಿ ಎಂದು ಹೇಳಿದೆ.

First published: