Fact Check: ಕೋವಿಡ್-19 ಲಸಿಕೆಗಳನ್ನು ಹಿಂಪಡೆಯುವಂತೆ Bill Gates ಕರೆ, ಇದು ನಿಜಾನಾ?

Bill Gates Statement Check: ಕೋವಿಡ್-19 ಲಸಿಕೆಗಳೆಲ್ಲವನ್ನೂ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಬಿಲ್ ಗೇಟ್ಸ್ ಕರೆ ನೀಡಿದ್ದಾರೆ, ಲಸಿಕೆಗಳು ಊಹಿಸಿದ್ದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದಾಗಿತ್ತು.ಗೇಟ್ಸ್ ನೀಡಿದ್ದ ವಿವಾದಾತ್ಮಕ ಹೇಳಿಕೆಯ “19 ನಿಮಿಷದ ದೂರದರ್ಶನದ ಭಾಷಣವನ್ನು” ಕುರಿತು ಲೇಖನವು ಮಾಹಿತಿ ನೀಡಿದೆ.

ಬಿಲ್ ಗೇಟ್ಸ್-ಕೋವಿಡ್ ಲಸಿಕೆ

ಬಿಲ್ ಗೇಟ್ಸ್-ಕೋವಿಡ್ ಲಸಿಕೆ

  • Share this:

ಕೋವಿಡ್-19 ಲಸಿಕೆಗಳ (Covid Vaccine) ಕುರಿತು ಸುಳ್ಳು ಸುದ್ದಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಲಸಿಕೆಗಳಿಂದ ಮಾರಣಾಂತಿಕ ಕಾಯಿಲೆಗಳು ಉಂಟಾಗುತ್ತವೆ. ಲಸಿಕೆಗಳು ಅಷ್ಟೊಂದು ಸುರಕ್ಷಿತವಲ್ಲ ಎಂಬ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ವಿಜ್ಞಾನಿಗಳು, ತಜ್ಞರು, ವೈದ್ಯರು ಲಸಿಕೆಯ ಕುರಿತು ಜನರಿಗೆ ಮನವರಿಕೆ ಮಾಡುತ್ತಿದ್ದರೂ ಕೆಲವೊಂದು ಸಾಮಾಜಿಕ ತಾಣಗಳಲ್ಲಿ (Social Media) ಬರುವ ಸುದ್ದಿಗಳು ಜನರಲ್ಲಿ ಲಸಿಕೆಯ ಕುರಿತು ಅವಿಶ್ವಾಸವನ್ನುಂಟು ಮಾಡುತ್ತಿರುವುದು ಸುಳ್ಳಲ್ಲ. ಪ್ರಸ್ತುತ ಸುದ್ದಿ ವೆಬ್‌ಸೈಟ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಕೋವಿಡ್-19 ಲಸಿಕೆಯ ಕುರಿತು ಲೇಖನದ ಸ್ಕ್ರೀನ್‌ಶಾಟ್ ಒಂದನ್ನು ಬಿಡುಗಡೆ ಮಾಡಿದ್ದು ಈ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಸುದ್ದಿಯಲ್ಲಿರುವ ಮಾಹಿತಿ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕರಾಗಿರುವ ಬಿಲ್ ಗೇಟ್ಸ್ (Bill Gates) ಲಸಿಕೆಯ ಕುರಿತು ನೀಡಿರುವ ಹೇಳಿಕೆಯಾಗಿದೆ.


“ಲಸಿಕೆಗಳು ಊಹಿಸಿದ್ದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ” ಎಂದಾಗಿದೆ. ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಲಸಿಕೆ ಪರಿಣಾಮಕಾರಿ ಎಂಬ ಯೋಜನೆ ಮುನ್ನಡೆಸಿದ್ದ ಬಿಲ್ ಗೇಟ್ಸ್ ಇದೀಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.


ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಲೇಖನದಲ್ಲಿ ಏನಿದೆ?


ಈ ಲೇಖನದ ಹೆಡ್‌ಲೈನ್‌ ಹೀಗಿತ್ತು: ಬ್ರೇಕಿಂಗ್ – ಕೋವಿಡ್-19 ಲಸಿಕೆಗಳೆಲ್ಲವನ್ನೂ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಬಿಲ್ ಗೇಟ್ಸ್ ಕರೆ ನೀಡಿದ್ದಾರೆ, ಲಸಿಕೆಗಳು ಊಹಿಸಿದ್ದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದಾಗಿತ್ತು.ಗೇಟ್ಸ್ ನೀಡಿದ್ದ ವಿವಾದಾತ್ಮಕ ಹೇಳಿಕೆಯ “19 ನಿಮಿಷದ ದೂರದರ್ಶನದ ಭಾಷಣವನ್ನು” ಕುರಿತು ಲೇಖನವು ಮಾಹಿತಿ ನೀಡಿದೆ.


ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ತುಣುಕನ್ನು ಹಲವಾರು ಬಳಕೆದಾರರು ಹಂಚಿಕೊಂಡಿದ್ದು ಇದು ಸತ್ಯವೆಂದು ಭಾವಿಸಿ ವೈರಲ್ ಮಾಡಿದ್ದರು. ಏಕೆಂದರೆ ಈ ಘೋಷಣೆ ಮಾಡಿದವರು ಅಂತಿಂಥ ವ್ಯಕ್ತಿಯಲ್ಲ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರು ಮತ್ತು ಇಂತಹ ಗಣ್ಯ ವ್ಯಕ್ತಿಗಳು ಯಾವುದೇ ರೀತಿಯ ಹೇಳಿಕೆಯನ್ನು ಕೂಲಂಕುಶವಾಗಿ ಪರಿಶೀಲಿಸದೇ ಬಹಿರಂಗಪಡಿಸುವುದಿಲ್ಲವೆಂದು ಅರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.


ಬಗೆಬಗೆಯ ಕಾಮೆಂಟ್​ಗಳು ಈ ಸುದ್ದಿಯ ಸುತ್ತಲೂ ಹರಿದಾಡಿದವು

ಈ ಸುದ್ದಿಯ ಕುರಿತು ಹಲವಾರು ಬಳಕೆದಾರರು ಕಾಮೆಂಟ್ ಮಾಡಿದ್ದು, ಬಿಲ್ ಗೇಟ್ಸ್ ಸ್ವತಃ ಲಸಿಕೆಯ ಕುರಿತು ಗಂಭೀರ ಆರೋಪ ಮಾಡಿದ್ದು, ವಂಶವಾಹಿ ಆಧಾರಿತ ಲಸಿಕೆಗಳನ್ನು ಈ ಕೂಡಲೇ ಮಾರುಕಟ್ಟೆಯಿಂದ ಹಿಂಪಡೆಯಬೇಕು ಎಂದು ತಿಳಿಸಿದ್ದಾರೆ. ಏಕೆಂದರೆ ಇದು ಅಪಾಯಕಾರಿಯಾಗಿದೆ ಎಂದು ಹೇಳಿರುವುದಾಗಿ ಬಳಕೆದಾರರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: covid vaccine near me; ಕೋವಿಡ್ ಲಸಿಕೆ ಎಲ್ಲಿ ಸಿಗುತ್ತದೆ ಎಂದು ತಿಳಿಯಬೇಕೇ? ಹೀಗೆ ಸರ್ಚ್ ಮಾಡಿ!

ಕೆಲವು ಬಳಕೆದಾರರು ಈ ಹೇಳಿಕೆಯು ಹಾಸ್ಯಾಸ್ಪದವಾದುದು ಎಂದು ತಿಳಿಸಿದ್ದು ಪ್ರತಿಕ್ರಿಯೆ ನೀಡಿಲ್ಲ. ಏಕೆಂದರೆ ಲಸಿಕೆಯ ಕುರಿತು ಸುಳ್ಳು ಸುದ್ದಿಗಳು ಆಗಾಗ್ಗೆ ಬಿತ್ತರಗೊಳ್ಳುತ್ತಿರುವುದರಿಂದ ಇದು ಕೂಡ ಸುಳ್ಳಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಈ ವಿವಾದಾತ್ಮಕ ಹೇಳಿಕೆಯು ಹಲವಾರು ಬಳಕೆದಾರರಿಂದ ಶೇರ್ ಮಾಡಲಾಗಿದೆ.


ಪ್ರಸ್ತುತ ಸುದ್ದಿ ಪ್ರಕಟಿಸಿರುವ The Quint's WebQoof ವೆಬ್‌ಸೈಟ್‌ನ ವಾಟ್ಸ್‌ಆ್ಯಪ್ ಲಿಂಕ್‌ಗೂ ಈ ವಿವಾದಾತ್ಮಕ ಹೇಳಿಕೆ ದೊರೆತಿದೆ ಎಂಬುದಾಗಿ ಸುದ್ದಿ ವೆಬ್‌ಸೈಟ್ ಹೇಳಿಕೊಂಡಿದೆ.


ಸುದ್ದಿ ಪರಿಶೀಲನೆ ನಡೆಸಿದ The Quint's WebQoof ವೆಬ್‌ಸೈಟ್


"ಡೈಲಿ ಎಕ್ಸ್‌ಪೋಸ್" ಎಂಬ ಹೆಸರಿನ ವೆಬ್‌ಸೈಟ್‌ಗಾಗಿ ಕೀವರ್ಡ್ ಹುಡುಕಾಟ ನಡೆಸಿದಾಗ ಈ ವೆಬ್‌ಸೈಟ್ ಹಿಂದೆ ಬಹಿರಂಗಪಡಿಸಿದ್ದ ಸತ್ಯಪರಿಶೀಲನೆ ಸುದ್ದಿಗಳು ಕ್ವಿಂಟ್‌ ವೆಬ್‌ಕೂಫ್ ವೆಬ್‌ಸೈಟ್ ಗಮನಕ್ಕೆ ಬಂದಿದೆ. ಲಸಿಕೆಗಳ ಸುರಕ್ಷತೆಯ ಕುರಿತು ಹಲವಾರು ಲೇಖನಗಳು ಪ್ರಶ್ನೆಮಾಡಿರುವ ಸುದ್ದಿಗಳನ್ನೂ ವೆಬ್‌ಸೈಟ್ ಬಿತ್ತರಿಸಿತ್ತು.


ಇದನ್ನೂ ಓದಿ: Fact Check: ಕೋವಿಡ್-19 ಲಸಿಕೆಯಿಂದ ಎಚ್‌ಐವಿ ಬರುತ್ತದೆಯಾ: ತಜ್ಞರು ಹೇಳಿದ್ದೇನು..?

ವೈರಲ್ ಪೋಸ್ಟ್‌ಗಳಲ್ಲಿ ಪ್ರಕಟವಾಗಿದ್ದ ಲೇಖನದ ಲಿಂಕ್ ಪರಿಶೀಲಿಸಿದಾಗ ಇದು ವಿಡಂಬನಾತ್ಮಕ ಸುದ್ದಿ ತುಣುಕು ಎಂಬುದು ಪತ್ತೆಯಾಗಿದೆ. ಈ ಕುರಿತು ಸಂಪಾದಕರು ವಿವರಣೆ ನೀಡಿದ್ದು ಈ ಲೇಖನವನ್ನು ನಮ್ಮ ವೆಬ್‌ಸೈಟ್‌ನಲ್ಲಿ ಮೊದಲು ಪ್ರಕಟಿಸಿದಾಗ ನಾವು ಇದೊಂದು ವಿಡಂಬನಾತ್ಮಕ ಸುದ್ದಿ ಎಂದು ತಿಳಿಸಿದ್ದೆವು. ಇಂತಹ ಸುದ್ದಿಗಳನ್ನು ನಾವು ಇನ್ನು ಮುಂದೆ ಪ್ರಕಟಿಸುವುದಿಲ್ಲ, ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ.


ಹಳೆಯ ಸುದ್ದಿಯ ಹೊಸಾ ವರಸೆ

ಬಿಲ್ ಗೇಟ್ಸ್ ಅವರ ಇದೇ ಹೇಳಿಕೆಗಳನ್ನು ಇತರ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಿದಾಗ ಈ ಕುರಿತು ಯಾವುದೇ ಫಲಿತಾಂಶಗಳು ದೊರಕಲಿಲ್ಲ ಎಂದು ವೆಬ್‌ಸೈಟ್ ತಿಳಿಸಿದೆ. ಈ ಸುದ್ದಿ ಕುರಿತು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಗೇಟ್ಸ್ 28 ಜುಲೈ 2020 ರಂದು CNBC ಸಂದರ್ಶನದಲ್ಲಿ ನೀಡಿದ ಒಂದು ಹೇಳಿಕೆಯ ಸ್ಕ್ರೀನ್‌ಶಾಟ್ ಇದಾಗಿತ್ತು. ಈ ಸಮಯದಲ್ಲಿ ಯಾವುದೇ ದೇಶಗಳಿಗೆ ಲಸಿಕೆಗಳ ಅನುಮೋದನೆ ನೀಡಿರಲಿಲ್ಲ.


ಇದೇ ಚಿತ್ರವನ್ನು ಲೇಖನದಲ್ಲಿ ಬಳಸಿಕೊಳ್ಳಲಾಗಿತ್ತು. ಹಾಗಾಗಿ ಇದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಲ್ ಗೇಟ್ಸ್ ಕುರಿತು ತಪ್ಪು ಮಾಹಿತಿಯನ್ನು ನೀಡಿತ್ತು. ಈ ರೀತಿಯ ಸುದ್ದಿ ಬಿಲ್ ಗೇಟ್ಸ್ ವಿರುದ್ಧ ಪ್ರಕಟವಾಗುತ್ತಿರುವುದು ಇದು ಮೊದಲ ಬಾರಿಯಲ್ಲ. ಸಾಂಕ್ರಾಮಿಕ ರೋಗದ ಆರಂಭದಿಂದಲೂ ಬಿಲ್ ಗೇಟ್ಸ್ ಹಾಗೂ ಅವರ ಮಾಜಿ ಪತ್ನಿ ಮೆಲಿಂಡಾ ಗೇಟ್ಸ್ ಕುರಿತು ವಿವಾದಾತ್ಮಕ ಹೇಳಿಕೆಗಳು ಪ್ರಕಟವಾಗುತ್ತಲೇ ಇದೆ. ಅವುಗಳಲ್ಲಿ ಕೆಲವನ್ನು The Quint's WebQoof ಸುದ್ದಿ ತಂಡವು ಸತ್ಯಾನ್ವೇಷನೆ ನಡೆಸಿ ಪರಿಹರಿಸಿದೆ.


Published by:Soumya KN
First published: