news18-kannada Updated:April 7, 2021, 12:10 PM IST
ಸಾಂದರ್ಭಿಕ ಚಿತ್ರ
ಇಡೀ ದೇಶ ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿಹೋಗಿದೆ. ಈ ನಡುವೆ ವಿಜ್ಞಾನಿಗಳು ಕೊರೊನಾ ವೈರಸ್ ತಡೆಯಲು ಇನ್ನೂ ಅತ್ಯುತ್ತಮವಾದ ಮಾರ್ಗಗಳನ್ನು ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ಜಗತ್ತು ಕೂಡ ಮೊದಲಿನಂತೆ ತಮ್ಮ ಜೀವನ ಶೈಲಿಗೆ ಮರಳುವ ನಿರೀಕ್ಷೆಯನ್ನು ಹೊತ್ತು ನಿಂತಿದೆ. ಆದರೆ ಈಗಾಗಲೇ ಕೊರೊನಾ ಎರಡನೇ ಅಲೆ ಜಗತ್ತಿನ ಬಹುತೇಕ ಭಾಗಗಳನ್ನು ಕಾಡಲು ಆರಂಭಿಸಿದೆ. ಈ ನಿಟ್ಟಿನಲ್ಲಿ ಕೊವೀಡ್ 19 ಹರಡುವುದನ್ನು ತಪ್ಪಿಸಲು ಸರ್ಕಾರದ ನಿಯಮಗಳನ್ನು ಅನುಸರಿಸುವುದು ಬಹಳ ಸೂಕ್ತ.
ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕಿಂತ ಮಾಸ್ಕ್ ಧರಿಸುವುದು ಮತ್ತು ಸರಿಯಾದ ಗಾಳಿ ಸೇವಿಸುವುದು ಕೊರೊನಾದಿಂದ ಮುಕ್ತರಾಗಲು ಇರುವ ಉಪಾಯವಾಗಿದೆ ಎಂದು ಹೇಳಿದೆ. ಈಗ ಶಾಲೆ ಮತ್ತು ಕಾಲೇಜುಗಳು ಆರಂಭವಾಗುತ್ತಿರುವ ಕಾರಣ ಈ ಅಧ್ಯಯನದ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.
Physics of Fluid ಜರ್ನಲ್ನಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ ಮಾಸ್ಕ್ ಮತ್ತು ಸಾಮಾಜಿಕ ಅಂತರದಿಂದ ಗಾಳಿಯಲ್ಲಿ ಉತ್ಪತ್ತಿಯಾಗಿ ಹರಡುವ ವೈರಸ್ಗಳಿಂದ ರಕ್ಷಣೆಯನ್ನು ಪಡೆಯಬಹುದು. ಅಧ್ಯಯನದ ಪ್ರಕಾರ ಮಾದರಿ ಕಂಪ್ಯೂಟರ್ ತರಗತಿ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸೇರಿಸಿ ಮಾದರಿ ಏರ್ಫ್ಲೋ ಕಾಯಿಲೆ ಹರಡುವ ಸಾಧ್ಯತೆಗಳ ಬಗ್ಗೆ ಪ್ರಯೋಗ ನಡೆಸಲಾಯಿತು.
ಅಧ್ಯಯನ ನಡೆದಿದ್ದು ಹೀಗೆ..
709 ಸ್ಕ್ವೇರ್ ಫಿಟ್ ಇದ್ದು, 9 ಅಡಿಯ ಫೂಟ್ ಟಾಲ್ ಸೀಲಿಂಗ್ ವ್ಯವಸ್ಥೆ ಒಳಗೊಂಡಿದ್ದ ಕೋಣೆ ಅದು. ತರಗತಿಯ ಮುಂಭಾಗದಲ್ಲಿ ಶಿಕ್ಷಕರಿದ್ದು, ಪ್ರತಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿದ್ದಾರೆ. ಇಲ್ಲಿ ಯಾವಾಗ ಬೇಕಾದರೂ ಕಾಯಿಲೆ ಹರಡುವ ಸಾಧ್ಯತೆಗಳಿವೆ. ಇಲ್ಲಿ 2 ರೀತಿಯ ಅಂಶಗಳನ್ನು ಬಳಸಿಕೊಂಡು ಪ್ರಯೋಗ ಮಾಡಲಾಗಿದೆ. ಒಂದು ಗಾಳಿಯ ಜೊತೆಗೆ ಮತ್ತು ಇನ್ನೊಂದು ಗಾಳಿ ರಹಿತ ಪ್ರಯೋಗ. ತರಗತಿಯ ಒಳಗೆ ವೈರಸ್ ಹರಡುವ ವಿಧಾನವನ್ನು ಪತ್ತೆ ಹಚ್ಚಲು ವೆಲ್ಸ್-ರಿಲೆ ಮತ್ತು ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ಮಾದರಿಗಳನ್ನು ಬಳಸಿ ಈ ಪ್ರಯೋಗವನ್ನು ನಡೆಸಲಾಯಿತು. ಜೊತೆಗೆ ಕಂಪ್ಯೂಟೇಷನಲ್ ಫ್ಲೂಯಿಡ್ ಡೈನಾಮಿಕ್ಸ್ ಮಾಡೆಲ್ಸ್ ಕಾರು ಮತ್ತು ವಿಮಾನಗಳ ಬಲವನ್ನು ಅರಿಯಲು ಬಳಸಲಾಗುತ್ತದೆ.
ಮಾಸ್ಕ್ ಯಾವುದೇ ರೀತಿಯ ವೈರಸ್ಗಳ ನೇರ ಆಕ್ರಮಣವನ್ನು ನಿಯಂತ್ರಿಸುತ್ತದೆ. ಅಲ್ಲದೇ ಮಾಸ್ಕ್ನಲ್ಲಿ ಉಂಟಾಗುವ ಬಿಸಿ ಉಸಿರು ವೈರಸ್ಗಳಿಗೆ ತೆರೆದುಕೊಳ್ಳುವುದನ್ನು ತಡೆಯುತ್ತದೆ. ಇದರ ಲಂಬವಾದ ಚಲನೆಯಿಂದ ವಿದ್ಯಾರ್ಥಿಗಳ ನಡುವೆ ವೈರಸ್ ಹರಿದಾಡದಂತೆ ರಕ್ಷಣೆ ನೀಡುವುದು. ಅಲ್ಲದೇ ಶುದ್ಧವಾದ ಗಾಳಿಯ ರಚನೆಯೂ ಅಶುದ್ಧ ಗಾಳಿಯನ್ನು ಹೊಂದಿರದ ರಚನೆಗಿಂತಲೂ ಶೇಕಡಾ 40 ರಿಂದ ಶೇಕಾಡ 50 ರಷ್ಟರವರೆಗೆ ವೈರಸ್ ಹರಡುವುದನ್ನು ತಡೆಯುತ್ತದೆ.
ಸಂಶೋಧನಾ ತಂಡವು ಈ ಎರಡು ತಂಡವನ್ನು ಅಧ್ಯಯನ ಮಾಡಿದಾಗ ಗಾಳಿ ಇಲ್ಲದ ರಚನೆಯಲ್ಲಿ ವೆಲ್ಸ್-ರಿಲೆ ಮತ್ತು ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ಒಂದೇ ರೀತಿಯಾದ ಫಲಿತಾಂಶವನ್ನು ಹೊಂದಿದೆ. ವೆಲ್ಸ್-ರಿಲೆ ಗಾಳಿಯಲ್ಲಿ ಸೋಂಕಿನ ಸಾಧ್ಯತೆಯನ್ನು ಸುಮಾರು 29% ರಷ್ಟು ಅಂದಾಜಿಸಲಾಗಿದೆ. ವೈರಸ್ ಹರಡುವ ಅಪಾಯದ ಬಗ್ಗೆ ಉತ್ತಮ ಅಧ್ಯಯನ ಮಾಡುವಾಗ ಕಂಪ್ಯೂಟೇಷನಲ್ ಫ್ಲೂಡ್ ಡೈನಾಮಿಕ್ಸ್ಗಳ ಸಂಕೀರ್ಣ ಆವಿಷ್ಕಾರಗಳ ಬಗ್ಗೆಯೂ ಗಮನವಹಿಸಬೇಕು ಎಂದು ವರದಿ ತಿಳಿಸುತ್ತದೆ.
First published:
April 7, 2021, 12:10 PM IST