• Home
  • »
  • News
  • »
  • coronavirus-latest-news
  • »
  • Explained: ಕೊರೋನಾ ಲಸಿಕೆ ಎರಡು ಡೋಸ್ ತಗೊಂಡ್ರೆ ನೀವು ಎಷ್ಟು ಸಮಯದವರೆಗೆ ಸೇಫ್ ? ಇಲ್ಲಿದೆ ಮಾಹಿತಿ

Explained: ಕೊರೋನಾ ಲಸಿಕೆ ಎರಡು ಡೋಸ್ ತಗೊಂಡ್ರೆ ನೀವು ಎಷ್ಟು ಸಮಯದವರೆಗೆ ಸೇಫ್ ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಶ್ವ ಆರೋಗ್ಯ ಸಂಸ್ಥೆಯ ಡಾ.ಕ್ಯಾಥರಿನ್ ಒ‘ಬ್ರೇನ್ ಅವರು ಹೇಳುವ ರೀತಿ, ಮೊದಲ ಡೋಸ್ ಪಡೆದ 2 ವಾರಗಳಲ್ಲಿ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಲು ಪ್ರಾರಂಭವಾಗುತ್ತದೆ. ಆದರೆ ಎರಡನೇ ಡೋಸ್ ಪಡೆದ ಬಳಿಕ ಇಮ್ಯುನಿಟಿ ವರ್ಧಿಸುತ್ತದೆ. ಇದು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.

ಮುಂದೆ ಓದಿ ...
  • Share this:

    ಭಾರತವು ಪ್ರತಿದಿನ ಲಕ್ಷಾಂತರ ಜನರಿಗೆ ಕೊರೋನಾ ಲಸಿಕೆ ನೀಡುತ್ತಿದೆ. ಈಗಾಗಲೇ 21.58 ಕೋಟಿ ವ್ಯಾಕ್ಸಿನ್​ ಡೋಸ್ ಹಾಕಲಾಗಿದೆ. ಭಾರತವು ಸದ್ಯಕ್ಕೆ ಮೂರು ಕೋವಿಡ್​-19 ಲಸಿಕೆಗಳಿಗೆ ಅನುಮೋದನೆ ನೀಡಿದೆ. ಸೀರಮ್​​ ಇನ್​ಸ್ಟಿಟ್ಯೂಟ್​ನ ಕೋವಿಶೀಲ್ಡ್​, ಭಾರತ್​ ಬಯೋಟೆಕ್​​ನ ಕೋವ್ಯಾಕ್ಸಿನ್​​ ಮತ್ತು ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆಗಳಿಗೆ ಭಾರತ ಅನುಮೋದನೆ ನೀಡಿದೆ. ಇವೆಲ್ಲವೂ 2 ಡೋಸ್ ವ್ಯಾಕ್ಸಿನ್​ಗಳಾಗಿವೆ.


    2 ಡೋಸ್​ ಲಸಿಕೆಗಳನ್ನು ಹಾಕಿಸಿಕೊಳ್ಳಲು ಇಂತಿಷ್ಟು ದಿನಗಳ ಅಂತರ ಇರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋವಿಶೀಲ್ಡ್​ ಲಸಿಕೆಗೆ 12-16 ವಾರಗಳ ಅಂತರವಿದ್ದರೆ, ಕೋವ್ಯಾಕ್ಸಿನ್ ಲಸಿಕೆಗೆ 4-6 ವಾರಗಳ ಅಂತರವಿರಬೇಕು. ಜೊತೆಗೆ ಸ್ಪುಟ್ನಿಕ್​ ವಿ ಲಸಿಕೆಗೆ 21-90 ದಿನಗಳ ಅಂತರ ಇರಬೇಕೆಂದು ಹೇಳಲಾಗಿದೆ. ಆದರೆ ಈಗ ಉದ್ಭವಿಸಿರುವ ಪ್ರಶ್ನೆ ಏನೆಂದರರೆ, ಒಬ್ಬ ವ್ಯಕ್ತಿ ಎರಡೂ ಡೋಸ್​ಗಳನ್ನು ಪಡೆದ ನಂತರ, ಆತನ ದೇಹದಲ್ಲಿ ಎಷ್ಟು ದಿನಗಳವರೆಗೆ ರೋಗನಿರೋಧಕ ಶಕ್ತಿ ಉಳಿಯುತ್ತದೆ ಎಂಬುದು. ಈ ಬಗ್ಗೆ ವಿವರಣೆ ಇಲ್ಲಿದೆ.


    ಲಸಿಕೆ ಪಡೆದ ಬಳಿಕ ದೇಹದಲ್ಲಿ ಇಮ್ಯುನಿಟಿ ಸೃಷ್ಟಿಯಾಗಲು ಎಷ್ಟು ಸಮಯ ಬೇಕು?


    ವಿಶ್ವ ಆರೋಗ್ಯ ಸಂಸ್ಥೆಯ ಡಾ.ಕ್ಯಾಥರಿನ್ ಒ‘ಬ್ರೇನ್ ಅವರು ಹೇಳುವ ರೀತಿ, ಮೊದಲ ಡೋಸ್ ಪಡೆದ 2 ವಾರಗಳಲ್ಲಿ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಲು ಪ್ರಾರಂಭವಾಗುತ್ತದೆ. ಆದರೆ ಎರಡನೇ ಡೋಸ್ ಪಡೆದ ಬಳಿಕ ಇಮ್ಯುನಿಟಿ ವರ್ಧಿಸುತ್ತದೆ. ಇದು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.


    ಎಷ್ಟು ಸಮಯದವರೆಗೆ ದೇಹದಲ್ಲಿ ಇಮ್ಯುನಿಟಿ ಇರುತ್ತದೆ?


    ಎರಡು ಡೋಸ್ ಪಡೆದ ವ್ಯಕ್ತಿಯ ದೇಹದಲ್ಲಿ ಎಷ್ಟು ಸಮಯದವರೆಗೆ ಇಮ್ಯುನಿಟಿ ಇರುತ್ತದೆ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಡಾ.ಕ್ಯಾಥರಿನ್​ ಹೇಳುವಂತೆ, ಎರಡೂ ಡೋಸ್ ಪಡೆದ ಬಳಿಕ ಇಂತಿಷ್ಟೇ ಸಮಯದವರೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ. ಇದರ ಕುರಿತು ವಿವರಗಳನ್ನು ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.


    ಇದನ್ನೂ ಓದಿ:ಐಫೆಲ್‌ ಟವರ್‌ನಷ್ಟು ದೊಡ್ಡ ಅಪಾಯಕಾರಿ ಕ್ಷುದ್ರಗ್ರಹವು ಇಂದು ಭೂಮಿಗೆ ಅಪ್ಪಳಿಸಲಿದ್ಯಾ..? ನಾಸಾ ಹೇಳಿದ್ದೇನು..?


    ಎರಡು ಡೋಸ್ ಲಸಿಕೆ ಪಡೆದ ಜನರನ್ನು ನಾವು ಗಮನಿಸುತ್ತಿದ್ದೇವೆ. ಅವರ ರೋಗ ನಿರೋಧಕ ಶಕ್ತಿಯು ಎಷ್ಟು ಸಮಯವರೆಗೆ ಇರುತ್ತದೆ ಎಂಬುದನ್ನು ತಿಳಿಯುವುದು ನಮ್ಮ ಉದ್ದೇಶವಾಗಿದೆ. ಆದ್ದರಿಂದ ಲಸಿಕೆ ಪಡೆದ ಬಳಿಕ ಇಮ್ಯುನಿಟಿ ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನು ಕಂಡುಹಿಡಿಯಲು ಸಮಯ ಬೇಕಾಗಿದೆ. ಹೀಗಾಗಿ ನಾವು ನಿಜವಾಗಲೂ ಕಾಯಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಹೇಳುತ್ತಾರೆ.


    ಆದಾಗ್ಯೂ, ಫಿಜರ್ ಲಸಿಕೆಯ ಎರಡು ಡೋಸ್ ಕನಿಷ್ಠ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಪರಿಣಾಮಕಾರಿಯಾಗಿರುತ್ತದೆ. ಅಂತೆಯೇ ಮಾಡರ್ನಾ ಲಸಿಕೆಯ ಎರಡನೇ ಡೋಸ್ ಪಡೆದ 6 ತಿಂಗಳ ಬಳಿಕ ಆ್ಯಂಟಿಬಾಡೀಸ್(ಪ್ರತಿಕಾಯಗಳು) ಇರುವುದು ಕಂಡುಬಂದಿದೆ. ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್​ ಲಸಿಕೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ ಹೆಚ್ಚು ಕಾಲ ಇಮ್ಯುನಿಟಿ ನೀಡುತ್ತದೆ ಎನ್ನಲಾಗುತ್ತಿದೆ.


    ಭಾರತದಲ್ಲಿ ಕೋವ್ಯಾಕ್ಸಿನ್​ ಲಸಿಕೆ ತಯಾರಿಸುವ ಭಾರತ್​ ಬಯೋಟೆಕ್​ ಕಂಪನಿಯು ಈಗಾಗಲೇ ಬೂಸ್ಟರ್​ ಡೋಸ್​ಗಾಗಿ ಪ್ರಯೋಗಗಳನ್ನು ಪ್ರಾರಂಭಿಸಿದೆ. ಈಗಾಗಲೇ ಸಂಪೂರ್ಣವಾಗಿ ಎರಡೂ ಡೋಸ್​ಗಳನ್ನು ಪಡೆದವರಿಗೆ ಕೊರೋನಾ ಸೋಂಕು ಹರಡಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೊರೋನಾ ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ. ಇದು ಹೊಸ ರೂಪ ಪಡೆಯುತ್ತದೆ. ಈ ವೈರಸ್ ತುಂಬಾ ಬುದ್ಧಿವಂತ ಎಂದು ಏಮ್ಸ್​ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.


    ಲಸಿಕೆಯು ಕೊರೋನಾ ವೈರಸ್​ ವಿರುದ್ಧ ಕನಿಷ್ಠ ಒಂದು ವರ್ಷ ಕಾಲ ನಮ್ಮನ್ನು ಕಾಪಾಡುತ್ತದೆ ಎಂದು ಇತ್ತೀಚಿನ ಎರಡು ಅಧ್ಯಯನಗಳು ಪತ್ತೆ ಹಚ್ಚಿವೆ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ.

    Published by:Latha CG
    First published: