Lockdown: ಮತ್ತೆ ಶುರುವಾಗಿದೆ ಟೈಟ್ ರೂಲ್ಸ್ ಚರ್ಚೆ, ಯಾವಾಗ ಲಾಕ್​ಡೌನ್ ಮಾಡ್ಬೇಕು ಎಂದು ಸರ್ಕಾರಕ್ಕೆ ತಿಳಿಸಿದ ಸಮಿತಿ

ಕಲರ್‌ ಕೋಡ್‌ ಆಧಾರದ ಮೇಲೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ಹೇರಲು ಸೂಚನೆ ನೀಡಿದೆ. ಇದೇ ಮಾದರಿಯನ್ನ ದೆಹಲಿಯಲ್ಲೂ ಅನುಸರಿಸಲಾಗ್ತಿದೆ.

ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಸಭೆ

ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಸಭೆ

  • Share this:
ರಾಜ್ಯದಲ್ಲಿ ಕೊರೋನಾ ಸೋಂಕಿನ (COVID Pandemic) ಏರಿಕೆ ಮತ್ತು ಮತ್ತೊಂದು ಕಡೆ ಒಮೈಕ್ರಾನ್ ವೈರಸ್ (Omicron Variant) ನ ಹರಡುವಿಕೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ (Lockdown) ಆಗುತ್ತಾ ಅನ್ನೋದ ಪ್ರಶ್ನೆ ಮೂಡಿದೆ.  ಕೊರೋನಾ ಸೋಂಕು ಹೀಗೆ ಏರಿದ್ರೆ ಮುಂದೆ ಕಠಿಣ ನಿಯಮಗಳನ್ನು ತೆಗೆದುಕೊಳ್ಳಬೇಕು. ಪಾಸಿಟಿವಿಟಿ ದರ (ಸೋಂಕು ಹರಡುವಿಕೆ ಪ್ರಮಾಣ – Positivity Rate) ಎಷ್ಟು ಹೆಚ್ಚಳ ಆದ್ರೆ ಲಾಕ್ ಡೌನ್ ಮಾಡಬೇಕೆಂದು ತಜ್ಞರು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎನ್ನಲಾಗಿದೆ.

ಎರಡು ಪ್ರಮುಖ ಅಂಶಗಳನ್ನ ವಿವರಿಸಿದ ತಾಂತ್ರಿಕ ಸಲಹಾ ಸಮಿತಿ

  1. ರಾಜ್ಯದ ವಾರದ ಪಾಸಿಟಿವಿಟಿ ದರ ಶೇ. 5ಕ್ಕಿಂತ ಜಾಸ್ತಿ ಆದಾಗ ಲಾಕ್ ಡೌನ್ ಅನಿವಾರ್ಯ ಆಗಬಹುದು

  2. ರಾಜ್ಯದ ಒಟ್ಟಾರೆ ICU ಹಾಗೂ ಆಕ್ಸಿಜನ್ ಬೆಡ್ ನಲ್ಲಿ 40% ಬೆಡ್ ರೋಗಿಗಳಿಂದ ತುಂಬಿದರೆ ಲಾಕ್ ಡೌನ್ ಮಾಡಿ


ತಾಂತ್ರಿಕ ಸಲಹಾ ಸಮಿತಿ ಈ ಎರಡು ಅಂಶಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿದೆ. ಈ ಹಂತಕ್ಕೆ ಹೋಗಬಾರದು ಅಂದರೆ ಜನ ನಿರ್ಬಂಧಗಳಿಗೆ ರೆಡಿ ಆಗಬೇಕಿದೆ ಕಲರ್ ಕೋಡ್ ಆಧಾರದ ನಿರ್ಭಂಧಗಳಿಗೆ ರಾಜ್ಯ ರೆಡಿಯಾಗಬೇಕಿದೆ. ಯಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಣೆ ಆದರೆ ನಿರ್ಬಂಧಗಳು ಜಾರಿಯಾಗಲಿದೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ವ್ಯಾಕ್ಸಿನೇಷನ್‌ ಹೆಚ್ಚಳಕ್ಕೆ BBMP ಹೊಸ ಪ್ಲಾನ್

ಲಾಕ್ ಡೌನ್ ಯಾವಾಗ ಮಾಡಬೇಕು.!? TAC ನಿಂದ ಸಲಹೆ

1. ವಾರದ ಒಟ್ಟು ಸೋಂಕಿನ ಪ್ರಮಾಣ 5% ಇದ್ದರೆ ಲಾಕ್ ಡೌನ್ ಮಾಡಲು ಸಲಹೆ

ಅಥವಾ

2.ಆಸ್ಪತ್ರೆಗಳಲ್ಲಿ ಐಸಿಯೂ ಬೆಡ್ ಗಳು 40% ಭರ್ತಿಯಾದರೆ ಲಾಕ್ ಡೌನ್ ಮಾಡಬೇಕು

ಡೆಲ್ಟಾಗಿಂತ ಓಮೈಕ್ರಾನ್ ಡೆಂಜರ್ ಆಗ್ತಿದ್ಯಾ.!?

ದೆಹಲಿ ಮಾದರಿ ಆ್ಯಕ್ಷನ್ ಪ್ಲಾನ್ ಗೆ ತಜ್ಞರು ಶಿಫಾರಸು ಮಾಡಿದ್ದಾರೆ. ಜನವರಿ - ಫೆಬ್ರವರಿಯಲ್ಲಿ ಮೂರನೇ ಅಲೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ದೆಹಲಿ, ಮುಂಬೈ, ಚೆನ್ನೈ ನಲ್ಲಿ ಸೋಂಕಿನ ತೀವ್ರತೆ ಹೆಚ್ಚಳವಾಗಿದೆ. ಕರ್ನಾಟಕದಲ್ಲೂ ದಿಢೀರ್ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಷ್ಟು ದಿನ ರಾಜಧಾನಿ ಬೆಂಗಳೂರಿನಲ್ಲಿ 140-200 ರಲ್ಲಿ ಪತ್ತೆಯಾಗ್ತಿದ್ದ ಪ್ರಕರಣಗಳ ಸಂಕ್ಯೆ 400 ರಿಂದ 500ಕ್ಕೆ ಏರಿಕೆ ಆಗ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:  Bengaluru Airportನಲ್ಲಿ ಪ್ರಯಾಣಿಕನ ಹೈಡ್ರಾಮಾ: ದುಬಾರಿ ವಾಚ್ ತಂದಿಡ್ತು ದೊಡ್ಡ ಪೀಕಲಾಟ..!

ಮೂರನೇ ಅಲೆಗೆ ದೆಹಲಿ ಮಾದರಿಯ ಆ್ಯಕ್ಷನ್ ಪ್ಲಾನ್ ಗೆ ರೆಡಿಯಾಗಿ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಯಾವ ಯಾವ ಚಟುವಟಿಕೆಗಳಿಗೆ ನಿರ್ಬಂಧ ಯಾವಾಗ ಹೇರಬೇಕು ಎಂಬುದನ್ನ ನಿರ್ಧರಿಸಲು ಕಲರ್ ಕೋಡ್ ಬಳಸಲು ಹೇಳಿದೆ. ಕೋವಿಡ್ ಪಾಸಿಟಿವ್ ರೇಟ್ ಶೇ. 1ರಷ್ಟು ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್,  ಪಾಸಿಟಿವಿಟಿ ದರ 1 ರಿಂದ 2ರಷ್ಟು ಇದ್ದರೆ ಆರೆಂಜ್ ಅಲರ್ಟ್ ಮತ್ತು ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದ್ದರೆ ರೆಡ್ ಅಲರ್ಟ್

ಕಲರ್‌ ಕೋಡ್‌ ಆಧಾರದ ಮೇಲೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ಹೇರಲು ಸೂಚನೆ ನೀಡಿದೆ. ಇದೇ ಮಾದರಿಯನ್ನ ದೆಹಲಿಯಲ್ಲೂ ಅನುಸರಿಸಲಾಗ್ತಿದೆ.

ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳು ಏನು.?

>> ಡೆಲ್ಟಾದಿಂದ ಎರಡನೇ ಅಲೆಯ ತೀವ್ರತೆಯನ್ನ ಜನರನ್ನು ಎದುರಿಸಿದ್ದಾರೆ.  ಇದೀಗ ಡೆಲ್ಟಾಗಿಂತ ಓಮೈಕ್ರಾನ್ ರೂಪಾಂತರಿ ಹರಡುವಿಕೆ ಹೆಚ್ಚು. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಿ

>>  ಕೋವಿಡ್ ಪರೀಕ್ಷೆಯನ್ನ ನಿತ್ಯ 75,000 ಆರ್ ಟಿಪಿಸಿಆರ್ ಹಾಗೂ RAT ಮೂಲಕ ಶೇ. 30 ರಷ್ಟು ಮಾಡಬೇಕು.

>>  ಕ್ಲಸ್ಟರ್‌ಗಳಿಂದ ಶೇ. 30 ಎಲ್ಲಾ ಮಾದರಿಗಳನ್ನ ಕಡ್ಡಾಯವಾಗಿ ಜಿನೋಮ್‌ ಸೀಕ್ವೇನ್ಸಿಂಗ್ ಕಳುಹಿಸಬೇಕು.

>>  ಎಲ್ಲಾ ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು ಮತ್ತು ಜನಸಂದಣಿ ಇರುವ ಇತರ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು.

>> ಇನ್ನು ಸರಿಯಾಗಿ ಎಸ್ ಒಪಿ ಜಾರಿಯಾಗಿದೆಯಾ ಎಂಬುದನ್ನ ಪರಿಶೀಲಿಸಲು ಮಾರ್ಷಲ್‌ಗಳ ಮತ್ತು ಪೊಲೀಸ್ ಸಹಾಯ ಪಡೆಯುವುದು

>> ಓಮೈಕ್ರಾನ್ ಬಹುಬೇಗ ಆಕ್ರಮಣಕಾರಿಯಾಗಲಿದೆ.  ಆಸ್ಪತ್ರೆಗಳು ಚಿಕಿತ್ಸೆಗೆ ಸಜ್ಜಾಗಿ ಇರಲಿ

>> ಆಸ್ಪತ್ರೆಗೆ ಬೇಕಾಗುವ ಸೌಲಭ್ಯಗಳು, ಔಷಧ ಹಾಗೂ ಉಪಕರಣಗಳ ಸರಬರಾಜು ಮತ್ತು ತರಬೇತಿ ಪಡೆದಿರುವ ಸಿಬ್ಬಂದಿಗಳ ನಿಯೋಜನೆ ಮಾಡಬೇಕು.

>> ಸೌಮ್ಯ ರೋಗದ ಲಕ್ಷಣಗಳನ್ನ ಹೊಂದಿದ್ದರೆ ಅಷ್ಟೇ ಹೋಂ ಐಸೋಲೇಷನ್ ಆಯ್ಕೆ ಕೊಡಬೇಕು. ಇದಕ್ಕೆ ಅನುಮತಿ ನೀಡುವ ಮೊದಲು ಎಲ್ಲಾ ರೀತಿಯ ಸೌಲಭ್ಯಗಳು ಇದೆಯಾ ಎಂಬುದನ್ನ ಪರಿಶೀಲಿಸಬೇಕು.

>> ಒಬ್ಬರು ಆರೈಕೆ ಮಾಡುವವರು ಇರಲಿದ್ದು ಉಳಿದಂತೆ ಟೆಲಿ ಮಾನಿಟರ್ ಮಾಡುತ್ತಲಿರಬೇಕು. ಓಮೈಕ್ರಾನ್ ಸೌಮ್ಯವಾಗಿದ್ದು, ಹೆಚ್ಚಿನವರಿಗೆ ಆಸ್ಪತ್ರೆಯ ಹಾಸಿಗೆಗಳ ಅಗತ್ಯವಿರುವುದಿಲ್ಲ

>> ಹೋಂ ಐಸೋಲೇಷನ್ ಗೆ ಅನೇಕರು ಮನೆಯಲ್ಲಿ ಸೌಲಭ್ಯಗಳ ಕೊರತೆಯಿದ್ದಾಗ ಕೋವಿಡ್ ಕೇರ್ ಸೆಂಟರ್ ಹೋಗಲು ಬಯಸುತ್ತಾರೆ. ಹೀಗಾಗಿ, ಉತ್ತಮವಾಗಿರುವ CCC ಸಿದ್ಧಪಡಿಸುವಂತೆಯೂ ಶಿಫಾರಸು
Published by:Mahmadrafik K
First published: